ರೂ.4.53ಲಕ್ಷ ಲಾಭ, ಶೇ.10 ಡಿವಿಡೆಂಡ್
ಪುತ್ತೂರು: ಚಿಕ್ಕಮುಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.4,53,975.21 ಲಾಭ ಗಳಿಸಿ, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.23ರಂದು ಸಂಘದ ಕಚೇರಿಯ ಬಳಿಯ ಆಶೀರ್ವಾದ ಕಾಂಪ್ಲೆಕ್ಸ್ ನ ಮಹಡಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು
ವರ್ಷಾಂತ್ಯಕ್ಕೆ ಸಂಘವು 365 ಮಂದಿ ಸದಸ್ಯರಿಂದ ರೂ.77,350 ಪಾಲು ಬಂಡವಾಳ ಹೊಂದಿದೆ. ವರದಿ ವರ್ಷದಲ್ಲಿ ಸಂಘವು 2,85,355.3 ಲೀಟರ್ ಹಾಲು ಖರೀದಿಸಿದೆ. 36,284 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿ ಉಳಿಕೆಯಾದ 2,56,979 ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಲಾಗಿದೆ ಎಂದ ಅವರು, ರೈತರು ಯಾರೂ ದನಗಳನ್ನು ಮಾರಾಟ ಮಾಡಬಾರದು. ದನಗಳನ್ನು ಮಾರಾಟ ಮಾಡುವಾಗ ಮುಂಜಾಗ್ರತೆ ವಹಿಸಬೇಕು. ಹಾಲಿನ ದರ ಇನ್ನಷ್ಟು ಏರಿಕೆಯಾಗಲಿದೆ. ಹಾಲು ಉತ್ಪಾದಕರ ಬೀರ್ನಹಿತ್ಲು ಹಾಗೂ ಕಜೆಯಲ್ಲಿ ಶಾಖೆ ತೆರೆಯಲಾಗಿದೆ ಎಂದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಹಸುಗಳ ಪಾಲನೆ, ಪೋಷಣೆ, ಸುರಕ್ಷತಾ ಕ್ರಮಗಳು ಹಾಗೂ ಒಕ್ಕೂಟದಿಂದ ಹೈನುಗಾರಿಕೆಗೆ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಅತೀ ಹೆಚ್ಚು ಲಾಭ ಗಳಿಸುವಂತೆ ಅವರು ತಿಳಿಸಿದರು.
ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ನಿರ್ದೇಶಕ ಮೋನಪ್ಪ ಗೌಡ ಬೀರಿಗ(ಪ್ರ), ಸದಸ್ಯ ಸುದರ್ಶನ ಟಿ.(ದ್ವಿ), ಉಪಾಧ್ಯಕ್ಷ ಸುರೇಶ್ ಬಿ.ಯು(ತೃ) ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಅನನ್ಯ ಕೆ., ಸುಶಾಂತ್, ಆಶಿತಾ, ನಿಶ್ಮಿತಾ ಯು. ಅರುಣ್ ಎನ್ ರವರಿಗೆ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ಸುರೇಶ್ ಬಿ.ಯು., ನಿರ್ದೇಶಕರಾದ ರಾಜೇಶ್ ಗೌಡ ಜಿ., ಶಶಿಧರ ಗೌಡ ಕುಂಟ್ಯಾನ, ಮೋನಪ್ಪ ಗೌಡ ಬೀರಿಗ, ಗಂಗಾಧರ ಗೌಡ, ನಾಗೇಶ ಮೂಲ್ಯ, ರಘುನಾಥ ರೈ, ಶ್ರೀಧರ ಪೂಜಾರಿ ಬಡಾವು, ಮುದರು, ಜಾನಕಿ ಹಾಗೂ ನಿರ್ಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಮಾವತಿ ಪ್ರಾರ್ಥಿಸಿದರು. ಕಾರ್ಯದರ್ಶಿ ಅನುರಾದ ಯು. ವರದಿ, ಲೆಕ್ಕಪತ್ರ ಮಂಡಿಸಿದರು. ಚಿದಾನಂದ ಸ್ವಾಗತಿಸಿ, ವಂದಿಸಿದರು. ಸಿಬಂದಿಗಳಾದ ದೇವಕಿ, ಉಮಾವತಿ, ಸರೊಜಿನಿ ಹಾಗೂ ಲಲಿತ ಸಹಕರಿಸಿದರು.