ಬಡಗನ್ನೂರು ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ

0

ಬಡಗನ್ನೂರುಃ : ಬಡಗನ್ನೂರು ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.4,42275.37 ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 42ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸೀತಾರಾಮ ಗೌಡರವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.23ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು 1,48743.8 ಲೀಟರ್ ಹಾಲನ್ನು 46,80,767..54 ರೂ ಗೆ ಖರೀದಿಸಿ ಅದರಲ್ಲಿ 6,426 ಲೀಟರ್ ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದ್ದು ರೂ 2,82,744 ಬಂದಿರುತ್ತದೆ.ಪಶು ಆಹಾರ ಹಾಗೂ ಲವಣ ಮಿಶ್ರಣ ಮಾರಾಟ ಮಾಡಿ 14,23,677.82 ವ್ಯವಹಾರ ಮಾಡಿ 31,475 ಲಾಭ ಬಂದಿದೆ ಇತರ ಮೂಲಗಳಿಂದ 72.5೧6.63 ಲಾಭ ಬಂದಿದ್ದು ಒಟ್ಟು 5,46,266.37 ಲಾಭ ಗಳಿಸಿ ಒಟ್ಟು 1,32,666.99 ಲಾ ಗಳಿಸಿದೆ.

ದ.ಕ ಹಾಲು ಒಕ್ಕೂಟದ ಡಾ.ಅನುದೀಪ್ ಮಾತನಾಡಿ, ಹಸುಗಳ ಪಾಲನೆ, ಪೋಷಣೆ ಮುಂಜಾಗ್ರತಾ ಕ್ರಮಗಳು, ವಿಮೆಯ ಸೌಲಭ್ಯಗಳು, ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಒಕ್ಕೂಟದ ವಿಸ್ತರಣಾಧಿಕಾರಿ ನಿರಂಜನ್ ಮಾತನಾಡಿ, ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ರತಿ ರೈ ಕುದ್ಕಾಡಿ (ಪ್ರ), ಶಿವರಾಮ ಗೌಡ ಉಳಯ (ದ್ವಿ), ಕಿಶೋರ್ ಭಟ್ ಸಿ.ಯಚ್ ( ತೃ)  ಮತ್ತು ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here