ಪುತ್ತೂರು:ಮುಂಬೈ ಮಹಾನಗರದಲ್ಲಿ ಯುವ ಬಂಟರ ಸಂಘದಿಂದ ನಡೆದ ಆಕಾಂಕ್ಷMrs.Bunt-2023 ಫ್ಯಾಶನ್ ಶೋ.ದಲ್ಲಿ ಮುಂಡೂರು ಪೊನೋನಿಯ ಡಾ.ರೇಶ್ಮಾ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಮುಂಬೈಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯರಾಗಿರುವ ಡಾ.ರೇಶ್ಮಾ ಶೆಟ್ಟಿ ಮುಂಡೂರು ಪೊನೋನಿ ರಘುನಾಥ ಶೆಟ್ಟಿ ಮತ್ತು ಕಸ್ತೂರಿ ಆರ್ ಶೆಟ್ಟಿ ದಂಪತಿ. ಪ್ರಾಥಮಿಕ, ಪ್ರೌಢಶಾಲೆಯನ್ನು ಪಾಪೆಮಜಲು ಶಾಲೆ, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿರುತ್ತಾರೆ. ನಂತರ ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವಿಷಯದಲ್ಲಿ ವೈದ್ಯಕೀಯ ಪದವಿ ಪಡೆದಿರುವ ಇವರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದುಕೊಂಡಿದ್ದರು.
ಶಾಲಾ ಅವಧಿಯಲ್ಲಿಯೇ ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದ ಇವರು ತಮ್ಮ ವೈದ್ಯಕೀಯ ಶಿಕ್ಷಣದ ಅವಧಿಯಲ್ಲಿ ರಾಜೀವ್ ಗಾಂಧೀ ವಿಶ್ವ ವಿದ್ಯಾನಿಲಯದ ರಾಜ್ಯ ಮಟ್ಟದ ತ್ರೋಬಾಲ್, ಚಕ್ರ ಎಸೆತ, ಜಾವೆಲಿನ್, ಗುಂಡು ಎಸೆತ ಸ್ಪರ್ಧೆಗಳಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಪಡೆದುಕೊಂಡಿರುತ್ತಾರೆ. 2014ರಲ್ಲಿ ಆಳ್ವಾಸ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಬೆಸ್ಟ್ ಔಟ್ಗೋಯಿಂಗ್ ಸ್ಟೂಡೆಂಟ್ ಪುರಸ್ಕಾರವನ್ನು ಪಡೆದುಕೊಂಡಿರುತ್ತಾರೆ. ವೈದ್ಯಕೀಯ ವೃತ್ತಿಯೊಂದಿಗೆ ತ್ರೋಬಾಲ್ ನಿರೂಪಣೆಯನ್ನು ಮಾಡುತ್ತಿದ್ದಾರೆ.
ಮುಂಬೈಯ ಯುವ ಬಂಟರ ಸಂಘದಿಂದ ಕಳೆದ 25 ವರ್ಷಗಳಿಂದ ಒಡಿ.,Mr., Miss ಹಾಗೂMrs Bunt ಎಂಬ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಸ್ಪರ್ಧೆಯಲ್ಲಿ ಸುಮಾರು 70 ಮಂದಿ ಮೆಗಾ ಅಡಿಷನ್ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ತಲಾ ಮೂರು ವಿಭಾಗದಲ್ಲಿ 12 ಮಂದಿ ಆಯ್ಕೆಯಾಗಿದ್ದು ಅಂತಿಮವಾಗಿ ನಡೆದ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಡಾ.ರೇಶ್ಮಾ ಮೋಹಿತ್ ಶೆಟ್ಟಿಯವರು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಮುಂಬೈಯಲ್ಲಿ ನೇತ್ರ ಶಾಸ್ತ್ರಜ್ಞರಾಗಿರುವ ಪತಿ ಮೋಹಿತ್ ಶೆಟ್ಟಿ, ಪುತ್ರಿ ನೇಸರ ಶೆಟ್ಟಿಯವರೊಂದಿಗೆ ಮುಂಬೈಯಲ್ಲಿ ವಾಸ್ತವ್ಯವಿದ್ದಾರೆ. ಡಾ.ರೇಶ್ಮಾರವರ ಸಹೋದರಿ ರಕ್ಷಾ ಪ್ರಶಾಂತ್ ರೈ ಬ್ಯಾಂಕ್ ಆಫ್ ಬರೋಡದ ಪುತ್ತೂರು ಶಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಹಾಗೂ ಭಾವ ಪ್ರಶಾಂತ್ ರೈ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿರುತ್ತಾರೆ.