ಇಡ್ಕಿದು ಸೇವಾ ಸಹಕಾರಿ ಸಂಘದ ಮಹಾಸಭೆ

0

ರೂ.476 ಕೋಟಿ ವ್ಯವಹಾರ, ರೂ.1.36ಕೋಟಿ ಲಾಭ, ಶೇ.12 ಡಿವಿಡೆಂಡ್

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘವು 2022-23 ನೇ ಸಾಲಿನಲ್ಲಿ ರೂ.476 ಕೋಟಿ ವ್ಯವಹಾರ ನಡೆಸಿ ರೂ 1,36,12,999.86 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲುರವರು ಹೇಳಿದರು.

ಅವರು ಸೆ.23ರಂದು ಉರಿಮಜಲುನಲ್ಲಿರುವ ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡಿದರು. ವರ್ಷಾಂತ್ಯಕ್ಕೆ ಸಂಘದಲ್ಲಿ 3993ಸದಸ್ಯರಿದ್ದು ರೂ.3,83,54,530ಪಾಲು ಬಂಡವಾಳವಿದೆ. ರೂ.5,68,80,554.39 ವಿವಿಧ ನಿಧಿಗಳಿವೆ. ರೂ.96.16ಕೋಟಿ ಠೇವಣಾತಿಗಳಿವೆ. ದುಡಿಯುವ ಬಂಡವಾಳ ರೂ.117.56 ಕೋಟಿ ಹೊಂದಿದೆ. ಸದಸ್ಯರಿಗೆ ವಿತರಿಸಿದ ಸಾಲಗಳ ಪೈಕಿ ಶೇ.93 ವಸೂಲಾತಿಯಾಗಿದೆ. ಬ್ಯಾಂಕೇತರ ವ್ಯವಹಾರ ಹಾಗೂ ಸೇವಾ ಕಾರ್ಯಗಳಲ್ಲಿ ರೂ. 6,47,84,844.66 ವ್ಯವಹಾರ ಮಾಡಿ ರೂ. 32,96,242.93 ಲಾಭ ಗಳಿಸಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.

ಸನ್ಮಾನ:
ಸಂಘದ ಹಿರಿಯ ಹತ್ತು ಮಂದಿ ಸದಸ್ಯರಾದ ಮೋನಪ್ಪ ಗೌಡ ಬಿ., ಕೃಷ್ಣಪ್ಪ ಸಪಲ್ಯ ಕೆ‌, ಅದ್ರಾಮ, ಯಮುನಾ, ಸತೀಶ್ಚಂದ್ರ ಕೆ., ಕೃಷ್ಣಪ್ಪ ಗೌಡ ಬಿ., ರಾಮಕೃಷ್ಣ ಭಟ್ ಎಂ‌, ಖಾದ್ರಿ ಬ್ಯಾರಿ ಎ., ದೇವಪ್ಪ ಗೌಡ, ಉಮ್ಮರ್ ಯಾನೆ ಇದಿನಬ್ಬರವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಂಘದ ಸದಸ್ಯರಾದ ನಿವೃತ್ತ ಸೈನಿಕರಾದ ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರವೀಣ್ ನಾಯ್ತೋಟು ರವರ ಪರವಾಗಿ ಅವರ ತಾಯಿ ಯಶೋಧ, ತುಳು ಲಿಪಿ ಕಲ್ಪುಗ ಆನ್ಲೈನ್ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ಧನ್ಯ ಶ್ರೀ ಕಾರ್ಯಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವಿಶ್ವನಾಥ ಕುಲಾಲ್ ಮಿತ್ತೂರುರವರನ್ನು ಗೌರವಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸದಸ್ಯರಾದ ಫ್ಲೋರಿನ್ ಡಿಸೋಜಾ, ಜಯಂತ, ಮೊಯಿದುಕುಂಞಿ, ಲೋಕಯ್ಯ ಪೂಜಾರಿ, ಲೋಕಪ್ಪ ಗೌಡ, ಸಂಜೀವ, ಮೋನಪ್ಪ ಗೌಡ, ಧರ್ನಪ್ಪ ಗೌಡರವರನ್ನು ಗೌರವಿಸಲಾಯಿತು.

ಹೆಚ್ಚು ಅಂಕಗಳನ್ನು ಗಳಿಸಿದ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಹಕಾರಿ ಸಂಘದ ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ವ್ಯಾಪಾರ ಮಾಡಿದವರಿಗೆ ನಗದು ಪುರಸ್ಕಾರ ಪ್ರೋತ್ಸಾಹಿಸಲಾಯಿತು. ಸಹಕಾರಿ ಸಂಘದ ಕ್ಯಾಂಪೋ ವಿಭಾಗದಲ್ಲಿ ಹೆಚ್ಚು ವಹಿವಾಟು ಮಾಡಿದ ಸದಸ್ಯರನ್ನು ಗೌರವಿಸಲಾಯಿತು. ಹಾಗೂ ನವೋದಯ ಸ್ವಸಹಾಯಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿಲಾಯಿತು.

ನಿರ್ದೇಶಕರಾದ ನಾರಾಯಣ ನೇರ್ಲಾಜೆ, ಪ್ರವೀಣ್ ಕುಮಾರ್ ಕೊಪ್ಪಲ, ಜಯಂತ ಡಿ. ದರ್ಬೆ, ಸುಂದರ ಪಿ.ಪಾಂಡೇಲು, ಶಿವಪ್ರಕಾಶ್ ಕೆ.ವಿ. ಕೂವೆತ್ತಿಲ, ಜನಾರ್ದನ ಪೂಜಾರಿ ಕಾರ್ಯಾಡಿ, ವಸಂತ ಉರಿಮಜಲು, ಶೇಖರ ನಾಯ್ಕ ಅಳಕೆಮಜಲು, ನಳಿನಿ ಪೆಲತ್ತಿಂಜ, ವಿಜಯಲಕ್ಷ್ಮಿ ಪಿಲಿಪ್ಪೆ, ರತ್ನ ಸೇಕೆಹಿತ್ತಿಲು, ವೃತ್ತಿಪರ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಎಂ. ಪಡೀಲ್ ಮೈಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿಬ್ಬಂದಿ ಹರ್ಷಿತಾ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಕಾರಿ ಈಶ್ವರ್ ನಾಯ್ಕ ಎಸ್. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ರಾಮ್ ಭಟ್ ನೀರಪಳಿಕೆ ವಂದಿಸಿದರು. ಸಿಬ್ಬಂದಿ ಸಂಜೀವ ಪೆಲತ್ತಿಂಜ ಗೌರವಾರ್ಪಣೆ ಸ್ವೀಕರಿಸಿದ ಸದಸ್ಯರ ಪಟ್ಟಿ ವಾಚಿಸಿದರು. ಸಿಬ್ಬಂದಿ ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಸಾವಿರಕ್ಕಿಂತಲೂ ಅಧಿಕ ಸದಸ್ಯರು ನೆರೆದಿದ್ದು, ಪ್ರಸ್ತುತ ಆಡಳಿತ ಮಂಡಳಿಯ ಅತ್ಯುತ್ತಮ ಕಾರ್ಯ ವೈಕರಿ ಹಾಗೂ ಸಾಮಾಜಿಕ ಕಳಕಳಿಯ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.

ಠೇವಣಿದಾರು, ಸಾಲಗಾರರು ಸಂಘದ ಎರಡು ಕಣ್ಣುಗಳಿದ್ದಂತೆ:
ಬಂಟ್ವಾಳ ತಾಲೂಕಿನಲ್ಲಿ 100 ಕೋಟಿಗೂ ಅಧಿಕ ಠೇವಣಿ ಇರುವ ಪ್ರಥಮ ಸಹಕಾರಿ ಸಂಘ ನಮ್ಮದು ಎನ್ನುವ ಹೆಮ್ಮೆ ನಮಗಿದೆ. ಹಿರಿಯರ ತ್ಯಾಗದ ಫಲವಾಗಿ ಸಹಕಾರಿ‌ ಇಷ್ಟೊಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಹಲವಾರು ಸವಾಲುಗಳನ್ನು ಹಿಮ್ಮೆಟ್ಟಿ ಸಹಕಾರಿಯನ್ನು ಲಾಭದಲ್ಲಿ ಮುನ್ನಡೆಸಲು ಸಹಕಾರ ಮಾಡಿದ ಎಲ್ಲಾ ಸದಸ್ಯರಿಗೂ ಆಭಾರಿಯಾಗಿದ್ದೇವೆ. ಠೇವಣಿದಾರು ಹಾಗೂ ಸಾಲಗಾರರು ಸಂಘದ ಎರಡು ಕಣ್ಣುಗಳಿದ್ದಂತೆ. ಎಲ್ಲರೂ ಜೊತೆಯಾಗಿ ಸಾಗಿದಾಗ ಸಹಕಾರಿ ಯಶಸ್ವಿಯಾಗಿ ಸಾಗಲು ಸಾಧ್ಯ.

-ಸುಧಾಕರ ಶೆಟ್ಟಿ ಬೀಡಿನಮಜಲು
ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ

LEAVE A REPLY

Please enter your comment!
Please enter your name here