ಪುತ್ತೂರು: ಕೆದಂಬಾಡಿ ಗ್ರಾಮದ ತ್ಯಾಗರಾಜನಗರ ಹಿಂದು ಜಾಗರಣ ವೇದಿಕೆಯ 21ನೇ ವಾರ್ಷಿಕ ಸಮಾರಂಭ ಮತ್ತು ಸಾಮೂಹಿಕ ಗಣಪತಿ ಹವನ ಸೆ.19 ಮತ್ತು 21 ರಂದು ನಡೆಯಿತು. 19ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಗಣಪತಿ ಹವನ,ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೇ ನಡೆಯಿತು. ಕೃಷ್ಣ ಅಜಿಲ ಮಾಡದಗುಡ್ಡೆ ಇವರು ಅನ್ನಸಂತರ್ಪಣಾ ಸೇವಾರ್ಥಿಯಾಗಿದ್ದರು. ಇದೇ ಸಂದರ್ಭದಲ್ಲಿ ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮದ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸೆ.21ರಂದು ಸಂಜೆ ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು. ಹಿಂದು ಜಾಗರಣ ವೇದಿಕೆಯ ಸಂಚಾಲಕ ಸುನಿಲ್ ತ್ಯಾಗರಾಜನಗರರವರ ಸಭಾಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಮಿತಿ ಸದಸ್ಯ ಚಿನ್ಮಯ್ ಈಶ್ವರಮಂಗಲ ಧಾರ್ಮಿಕ ಉಪನ್ಯಾಸ ನೀಡಿದರು. ದೈವ ನರ್ತಕ ಕೃಷ್ಣ ಅಜಿಲ ಮಾಡದಗುಡ್ಡೆ ಮುಖ್ಯ ಅತಿಥಿಯಾಗಿದ್ದರು. ಹರಿಪ್ರಸಾದ್ ಬಲ್ಲಾಳ್ ಕೆದಂಬಾಡಿಬೀಡು, ಸುಜಿತ್ ಕುಲಾಲ್ ಸ್ವಾಮಿನಗರ ಬಹುಮಾನ ಪ್ರಾಯೋಜಕತ್ವ ಹಾಗೂ ಮಹೇಶ್ ಪಾಟಾಳಿ ಆಮಂತ್ರಣ ಪತ್ರಿಕೆ ಪ್ರಾಯೋಜಕತ್ವ ವಹಿಸಿದ್ದರು. ರಾತ್ರಿ ತಿಂಗಳಾಡಿ ಶ್ರೀ ದೇವತಾ ಸಮಿತಿ ಆಶ್ರಯದಲ್ಲಿ ಪೂಜಿಸಲ್ಪಟ್ಟ ಗಣೇಶ ವಿಗ್ರಹದ ಶೋಭಾಯಾತ್ರೆಯನ್ನು ಬರಮಾಡಿಕೊಂಡು ಹಣ್ಣುಕಾಯಿ,ಮಂಗಳಾರತಿ ಸಮರ್ಪಣೆ ಮಾಡಲಾಯಿತು. ಹಿಂದು ಜಾಗರಣ ವೇದಿಕೆಯ ಸಹ ಸಂಚಾಲಕರುಗಳಾದ ಕೇಶವ ಸ್ವಾಮಿನಗರ, ಪ್ರವೀಣ್ ಪಾಪೆಮಜಲು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.