ಪುತ್ತೂರು: ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 66ನೇ ವರ್ಷದ ಗಣೇಶೋತ್ಸವ ಸಂಭ್ರಮದಲ್ಲಿ ಸೆ.24ರಂದು ಮೂಡಪ್ಪ ಸೇವೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಮೂಲಿಕೆ ರಾಮಕೃಷ್ಣಯ್ಯ ವಿರಚಿತ “ಮೋಕ್ಷ ಸಂಗ್ರಾಮ ಎನ್ನುವ ಆಖ್ಯಾನದ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ,ಕು| ಸಿಂಚನಾ ಮೂಡುಕೋಡಿ, ಚೆಂಡೆ – ಮದ್ದಲೆಗಳಲ್ಲಿ ರಾಮದಾಸ್ ಶೆಟ್ಟಿ,ದೇವಸ್ಯ, ಮಾ|ಅದ್ವೈತ್ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ, ಸುಧನ್ವನ ಪಾತ್ರದಲ್ಲಿ ಪದ್ಮಾ ಕೆ ಆರ್ ಆಚಾರ್ಯ, ಜಯಲಕ್ಷ್ಮಿ ವಿ ಭಟ್,ಅರ್ಜುನನಾಗಿ ಪ್ರೇಮಾ ಕಿಶೋರ್,ಶ್ರೀಕೃಷ್ಣನಾಗಿ ಶ್ರೀವಿದ್ಯಾ ಜೆ ರಾವ್, ಹಂಸಧ್ವಜನಾಗಿ ಪ್ರೇಮಾ ನೂರಿತ್ತಾಯ, ಪ್ರಭಾವತಿಯಾಗಿ ಹೀರಾ ಉದಯ್ ಪಾತ್ರ ನಿರ್ವಹಣೆ ಮಾಡಿದರು.