ಹೈ ಮಾಸ್ಟ್ ದೀಪದ ವಿಚಾರದಲ್ಲಿ ಗಂಧಗಾಳಿ ಗೊತ್ತಿಲ್ಲದವರು ಮೂಗು ತೂರಿಸುವ ಅಗತ್ಯವಿಲ್ಲ-ಹೆಚ್.ಮಹಮ್ಮದ್ ಆಲಿಯವರ ದೂರಿಗೆ ನಗರಸಭಾ ಸದಸ್ಯೆ ಪೂರ್ಣಿಮಾ ಕೋಡಿಯಡ್ಕ ಆಕ್ಷೇಪ

0

ಪುತ್ತೂರು: ನಗರಸಭೆಯ ವಾರ್ಡ್ ಸಂಖ್ಯೆ 31ರ ಬಲ್ನಾಡು ಗ್ರಾಮದ ಉಜ್ರುಪಾದೆಯಲ್ಲಿ ಹೈ ಮಾಸ್ಟ್ ದೀಪ ಅಳವಡಿಸಲು ಆ ಭಾಗದ ಜನರ ಬೇಡಿಕೆಯಂತೆ ಮನವಿ ಸಲ್ಲಿಸಿ ಅಲ್ಲಿಯ ಅಗತ್ಯತೆಯನ್ನು ಮನಗಂಡು ಮಂಜೂರುಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಹೊರತು ಅಲ್ಲಿ ಜನಸಂಚಾರವಿಲ್ಲ ಎಂದು ಆರೋಪಿಸುವ ನಗರಸಭೆ ಮಾಜಿ ಸದಸ್ಯ ಹೆಚ್.ಮಹಮ್ಮದ್ ಆಲಿಯವರು ಮೂಗುತೂರಿಸುವ ಅಗತ್ಯವಿಲ್ಲ ಎಂದು ನಗರಸಭೆ ಆ ಭಾಗದ ವಾರ್ಡ್ ಸದಸ್ಯೆ ಪೂರ್ಣಿಮ ಕೋಡಿಯಡ್ಕ ತಿಳಿಸಿದ್ದಾರೆ.


ನಾನು ಪ್ರತಿನಿಧಿಸುವ ವಾರ್ಡ್‌ನಲ್ಲಿ ಏನು ಬೇಕು ಏನು ಬೇಡ ಎಂದು ನಿರ್ಧರಿಸುವುದು ನನ್ನ ಸಾರ್ವಜನಿಕ ಬಂಧುಗಳು ಹಾಗೂ ಅವರಿಗೆ ಸ್ಪಂದಿಸುವುದು ನನ್ನ ಕರ್ತವ್ಯ, ಈ ವಿಚಾರದಲ್ಲಿ ಆ ಭಾಗದ ಜನರೊಂದಿಗೆ ಹೈ ಮಾಸ್ಟ್ ಬೇಕೆಂದು ನಗರಸಭೆಗೆ ಮನವಿ ಮಾಡಿದ್ದೇವು. ಆದರೆ ಆ ಭಾಗದವರಲ್ಲದ ಮತ್ತು ಅಲ್ಲಿಯ ಗಂಧಗಾಳಿ ಗೊತ್ತಿಲ್ಲದ ಮಹಮ್ಮದ್ ಆಲಿಯವರು ಮೂಗು ತೂರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಆ ಭಾಗದಲ್ಲಿ ಜನವಸತಿ ಇಲ್ಲ, ಅಲ್ಲಿ ಜನಸಂಚಾರವಿಲ್ಲ ಎಂದು ಅವರಿಗೇನು ಗೊತ್ತು ಮತ್ತು ಅದನ್ನು ನಿರ್ಧರಿಸಲು ನೀವು ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಅದಲ್ಲದೆ ಈ ಅನುದಾನ ನಗರಸಭೆಯ ಅಮೃತ ನಗರೋತ್ಥಾನ ಯೋಜನೆಯಲ್ಲಿ ನಿಯಮಾನುಸಾರವೇ ಮಂಜೂರುಗೊಂಡ ಮೇಲೆ ದುರುಪಯೋಗದ ಮಾತೇ ಬರುವುದಿಲ್ಲ ಹಾಗೂ ಈ ಹಿಂದಿನ ಅವಧಿಯ ನಗರೋತ್ಥಾನ ಯೋಜನೆಯಲ್ಲಿ ಕೋಟಿಗಟ್ಟಲೇ ಅನುದಾನ ಜನವಸತಿ ಇಲ್ಲದ ಕಡೆ ಮಂಜೂರುಗೊಳಿಸಿರುವುದನ್ನು ಸಾರ್ವಜನಿಕರು ಈಗಲೂ ಮಾತಾನಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here