ಜಿಲ್ಲಾ ಮಟ್ಟದ ಖೋ ಖೋ: ವಿವೇಕಾನಂದ ಕ. ಮಾ. ಶಾಲೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇನ್‌ಪೆಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾಟಿಪಳ್ಳ, ಸುರತ್ಕಲ್ ಇಲ್ಲಿ ನಡೆದ ಜಿಲ್ಲಾಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ಬಾಲಕರ ತಂಡದಲ್ಲಿ ವನೀಶ್ (ಚಿದಾನಂದ ಮತ್ತು ಪೂರ್ಣಿಮಾ ದಂಪತಿಗಳ ಪುತ್ರ), ಚಿಂತನ್ (ರವೀಂದ್ರ ಮತ್ತು ಸುನೀತ ದಂಪತಿಗಳ ಪತ್ರ), ಭವಿಷ್ (ಗಿರಿಧರ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರ), ಸೃಜನ್ (ವಸಂತ ಜಿ ಮತ್ತು ಲಲಿತ ದಂಪತಿಗಳ ಪುತ್ರ), ಕೌಶಿಕ್ (ನಾಗರಾಜ ಕೆ ಮತ್ತು ವಿಜಯ ಕೆ ದಂಪತಿಗಳ ಪುತ್ರ), ಲಿಖಿತ್ (ಚಂದ್ರಹಾಸ ಮತ್ತು ಪುಷ್ಪ ದಂಪತಿಗಳ ಪುತ್ರ), ತೇಜಸ್ (ವಿಜಯಗೌಡ ಮತ್ತು ರೇವತಿ ದಂಪತಿಗಳ ಪುತ್ರ), ತರುಣ್(ಬಾಲಕೃಷ್ಣ ಮತ್ತು ರೂಪ ದಂಪತಿಗಳ ಪುತ್ರ ), ಭಾಸ್ವತ್ (ನಾರಾಯಣ ಪೂಜಾರಿ ಮತ್ತು ಸುಜಾತ ದಂಪತಿಗಳ ಪುತ್ರ), ಭವಿತ್ (ವಿಜಯೇಂದ್ರ ಮತ್ತು ತಿಲಕ ದಂಪತಿಗಳ ಪುತ್ರ), ಕೀರ್ತನ್ (ಶ್ರೀಧರ ಗೌಡ ಮತ್ತು ಅನಿತಾ ದಂಪತಿಗಳ ಪುತ್ರ), ದೇಶ್ಚಿತ್ ( ಸಂಜೀವ ಪೂಜಾರಿ ಮತ್ತು ಉಷಾ ದಂಪತಿಗಳ ಪುತ್ರ), ಅಭಿಷೇಕ್ (ಈರಣ್ಣ ಗೌಡ ಮತ್ತು ಇಂದವ್ವ ದಂಪತಿಗಳ ಪುತ್ರ), ಮನ್ವಿತ್ (ಬಾಬು ಗೌಡ ಮತ್ತು ಲಲಿತ ದಂಪತಿಗಳ ಪುತ್ರ) ಭಾಗವಹಿಸಿದ್ದರು.

ಮತ್ತು ಶಾಲಾ ಎಂಟನೇ ತರಗತಿ ವಿದ್ಯಾರ್ಥಿನಿ ಯೋಗ್ಯ (ಉಮೇಶ ಮತ್ತು ಕುಮುದಾ ದಂಪತಿಗಳ ಪುತ್ರಿ), ಪ್ರಾಥಮಿಕ ಶಾಲಾ ಬಾಲಕಿಯರ ಪುತ್ತೂರು ತಂಡದಲ್ಲಿ ಆಲ್ ರೌಂಡರ್ ಪ್ರಶಸ್ತಿ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್ ಮತ್ತು ಶ್ರೀಮತಿ ಹರಿಣಾಕ್ಷಿ ಹಾಗೂ ಹಿರಿಯ ವಿದ್ಯಾರ್ಥಿ ಎನ್.ಐ.ಎಸ್ ತರಬೇತುದಾರರಾದ ಕಾರ್ತಿಕ್ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here