ಎಂ.ಐ.ಎಸ್.ಎ ಕೊರಿಂಗಿಲ ಸೌದಿ ಘಟಕದ ಅಧ್ಯಕ್ಷರಾಗಿ ಜಲೀಲ್ ಕೇಕನಾಜೆ; ಪ್ರ.ಕಾರ್ಯದರ್ಶಿಯಾಗಿ ಅಮ್ಮಿ ಕೊರಿಂಗಿಲ ಆಯ್ಕೆ

0

ಪುತ್ತೂರು: ಎಂ.ಐ.ಎಸ್.ಎ ಕೊರಿಂಗಿಲ ಸೌದಿ ಘಟಕದ ಮಹಾಸಭೆ ಆನ್‌ಲೈನ್ ಮೂಲಕ ಸೆ.19ರಂದು ಶರೀಫ್ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ನಡೆಯಿತು. ಲತೀಫ್ ಕಲ್ಮರ ಪ್ರಾರ್ಥನೆಗೆ ನೇತೃತ್ವ ನೀಡಿದರು. ಪ್ರಧಾನ ಕಾರ್ಯದರ್ಶಿ ಜಾಬಿರ್ ಕೇಕನಾಜೆರವರು ವರದಿ ವಾಚಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಮುಖ್ಯ ಸಲಹೆಗಾರರಾಗಿ ಲತೀಫ್ ಕಲ್ಮರ, ಅಧ್ಯಕ್ಷರಾಗಿ ಜಲೀಲ್ ಕೇಕನಾಜೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮ್ಮಿ ಕೊರಿಂಗಿಲ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಉದೈಫ್ ಕೊರಿಂಗಿಲ, ಜೊತೆ ಕಾರ್ಯದರ್ಶಿಯಾಗಿ ಝಮ್ಮಿ ಕೊರಿಂಗಿಲ ಹಾಗೂ ಕೋಶಾಧಿಕಾರಿಯಾಗಿ ಶಫೀಕ್ ಕೊರಿಂಗಿಲ ಆಯ್ಕೆಯಾದರು. ಸಮಿತಿಗೆ 25 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.ಝಕರಿಯಾ ಕೊರಿಂಗಿಲ ಸ್ವಾಗತಿಸಿ, ಝಮ್ಮಿ ಕೊರಿಂಗಿಲ ವಂದಿಸಿದರು.

LEAVE A REPLY

Please enter your comment!
Please enter your name here