ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ಸೆ.26ರಂದು ಮದ್ಯಾಹ್ನ 2.30ಕ್ಕೆ ನಡೆಯಲಿದೆ. ಡಿ.2023 ನಲ್ಲಿ ದೇವಾಲಯದ ಜೀರ್ಣೋದ್ಧಾರದ ಪ್ರಯುಕ್ತ ನಡೆಯಲಿರುವ ನಿಧಿ ಸಿಂಚಯ ಕಾರ್ಯದ ಪೂರ್ವಭಾವಿ ಸಭೆಯು ಮೋಹನದಾಸ ಸ್ವಾಮಿಗಳು ಶ್ರೀಧಾಮ ಮಾಣಿಲ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎಸ್ ಅಂಗಾರ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಕುದ್ಮಾರು, ಕಾಯಿಮಣ, ಬೆಳಂದೂರು, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಕಾಣಿಯೂರು, ಚಾರ್ವಾಕ, ದೊಳ್ಪಾಡಿ ಗ್ರಾಮದ ಪ್ರಮುಖ ದೇವಸ್ಥಾನ, ಭಜನಾ ಮಂಡಳಿ, ಧರ್ಮಸ್ಥಳ ಒಕ್ಕೂಟ ,ಧರ್ಮಸ್ಥಳ ಸ್ವ ಸಹಾಯ ಸಂಘಗಳು, ಒಡಿಯೂರು ಸ್ವಸಹಾಯ ಸಂಘಗಳು, ನವೋದಯ ಸ್ವಸಹಾಯ ಸಂಘಗಳು, ಸಂಜೀವಿನಿ ಒಕ್ಕೂಟ, ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು ,ಬೈಲುವಾರು ಸಂಚಾಲಕರು ಹಾಗೂ ಮೇಲಿನ ಗ್ರಾಮದ ಪ್ರಮುಖರ ಸಭೆಯನ್ನು ಆಯೋಜಿಸಲಾಗಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಾಲಯದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಮೊಕ್ತೇಸರರು, ಅರ್ಚಕರು ತಿಳಿಸಿದ್ದಾರೆ.