ಪುತ್ತೂರು: ಗಾಂಧಿ ಜಯಂತಿ ಹಿನ್ನಲೆಯಲ್ಲಿ ಅ.1ರಂದು ದೇಶದಾದ್ಯಂತ 1 ಗಂಟೆ ಕಾಲ ಶ್ರಮದಾನ ಮಾಡಲು ಪ್ರಧಾನಿ ಮೋದಿ ಕರೆ ನೀಡಿದ್ದು ಜನರು ಸ್ವಯಂ ಪ್ರೇರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂಬುದು ಮೋದಿ ಅವರ ಆಶಯವಾಗಿತ್ತು. ಈ ಹಿನ್ನಲೆಯಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ನಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕುಂಬ್ರ ಪೇಟೆ ಸೇರಿದಂತೆ ಕುಟ್ಟಿನೋಪಿನಡ್ಕ, ಅಜ್ಜಿಕಲ್ಲು ಶಾಲೆ ಮತ್ತು ಬಸ್ಸು ತಂಗುದಾಣ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಸುಂದರಿ, ನಳಿನಾಕ್ಷಿ,ಬಿ.ಸಿ ಚಿತ್ರಾ, ಶೀನಪ್ಪ, ವಿನೋದ್ ಶೆಟ್ಟಿ ಮುಡಾಲ, ಕುಟ್ಟಿನೋಪಿನಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಂಝ, ಜನಜಾಗೃತಿ ವೇದಿಕೆಯ ಒಳಮೊಗ್ರು ಗ್ರಾಮ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಅಂಗನವಾಡಿ ಕಾರ್ಯಕರ್ತೆಯರಾದ ಇಂದಿರಾ ಡಿ, ಯಮುನಾ, ಗೀತಾ ಡಿ, ಸೀತಾ ಕುಮಾರಿ, ಆಶಾ ಕಾರ್ಯಕರ್ತೆಯರಾದ ಸಂಗೀತರಾಜ್, ಚಂದ್ರಾವತಿ, ಶಶಿಕಲಾ ಅಲ್ಲದೆ ಸ್ಥಳೀಯರಾದ ಕವಿತಾ, ಕಮಲಾಕ್ಷಿ, ಸತೀಶ ದರ್ಬೆ, ಅಬೂಬಕ್ಕರ್ ಕೋಳಿಗದ್ದೆ, ಸುಂದರ ಗೌಡ, ಶ್ರೀನಿವಾಸ್, ಸುರೇಶ್ ಬಿ, ಜಗದೀಶ್, ಉದಯ ಮಡಿವಾಳ, ಅಶೋಕ್ ಕುಮಾರ್, ಎಂ.ಶಾಹಿದ್, ಅಶೋಕ್, ಮೋಹನ್ ಕೆ.ಪಿ, ಮಹಮ್ಮದ್, ರಾಜೀವಿ ಕೆ, ಲೀಲಾ, ಲಲಿತಾ, ಕವಿತಾ, ಕಮಲ, ಲಲಿತಾ, ಲಕ್ಷ್ಮೀ, ಗ್ರಾಪಂ ಸಿಬ್ಬಂದಿಗಳಾದ ಗುಲಾಬಿ, ಜಾನಕಿ ಎಚ್, ಮೋಹನ್, ಗ್ರಂಥಪಾಲಕಿ ಸಿರಿನಾ, ಎಂಬಿಕೆ ಚಂದ್ರಿಕಾ, ಲೋಕನಾಥ ಮತ್ತಿತರರು ಉಪಸ್ಥಿತರಿದ್ದರು.