ಬಿ.ಕೆ.ಬಿಲ್ಡ್ ಮಾರ್ಟ್ ಮಳಿಗೆಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ

0

ಪುತ್ತೂರು: ಮನೆ ,ಕಟ್ಟಡ ಸಾಮಾಗ್ರಿಗಳ ಹೆಸರಾಂತ ಮಾರಾಟ, ಸೇವಾ ಮಳಿಗೆ ಇಲ್ಲಿನ ಮುರ ಎಂ.ಪಿ.ಎಂ.ಶಾಲಾ ಬಳಿ ನೂತನವಾಗಿ ಪ್ರಾರಂಭಗೊಂಡಿರುವ ಬಿ.ಕೆ.ಬಿಲ್ಡ್ ಮಾರ್ಟ್ ಸಂಸ್ಥೆಗೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಇತ್ತೀಚಿಗೆ ಭೇಟಿ ನೀಡಿ ಶುಭಕೋರಿದರು. ಈ ಸಂದರ್ಭ ಸಂಸ್ಥೆ ಮಾಲೀಕ ಬಿ.ಕೆ.ಮೊಯಿನುದ್ದೀನ್ ಹಾಗೂ ಅವರ ತಂದೆ ಪುತ್ತು ಹಾಜಿ ಬಾಯರ್(ಅಬ್ದುಲ್‌ ರಶೀದ್) ಖಾದರ್ ಅವರನ್ನು ಬರಮಾಡಿಕೊಂಡು ಗೌರವಿಸಿದರು.
ಈ ವೇಳೆ ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿ., ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ, ಮುರ ಎಂಪಿಎಂ ಶಾಲಾ ಸಂಚಾಲಕ, ನ್ಯಾಯವಾದಿ ಎಂ.ಪಿ.ಅಬೂಬಕ್ಕರ್, ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ ಸಹಿತ ಹಲವು ಅತಿಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here