ಪುತ್ತೂರು: ಹೊಸದಾಗಿ ಜಾರಿಗೊಂಡಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆಗಳಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ಕಲಿಯುಗ ಸೇವಾ ಸಮಿತಿಯಿಂದ ಮುದ್ರಾಂಕ ಇಲಾಖಾ ಆಯುಕ್ತರಿಗೆ, ಕಂದಾಯ ಸಚಿವರಿಗೆ ಹಾಗೂ ಶಾಸಕರಿಗೆ ದೂರು ನೀಡಲಾಗಿದೆ.
ಹೊಸ ತಂತ್ರಾಂಶ ಕಾವೇರಿ 2.0 ಜೂ.18ರಿಂದ ಜಾರಿಗೊಂಡಿದೆ. ಇದು ಜಾರಿಯಾಗುವ ಮೊದಲು ನಡೆಸಲಾದ ವಿಭಾಗ ಪತ್ರಗಳು, ಕ್ರಯ ಪತ್ರ, ದಾನ ಪತ್ರಗಳ ಖಾತೆ ಬದಲಾವಣೆಗೆ ಸಮಸ್ಯೆಯಾಗಿದೆ. ನೋಂದಣಿ ಕಚೇರಿಯಿಂದ ತಹಶೀಲ್ದಾರ ಕಛೇರಿಗೆ ಜೆ.ಸ್ಲಿಪ್ ಹೋಗದೆ ತಾಂತ್ರಿಕ ಸಮಸ್ಯೆ ಕಾರಣಗಳಿಂದ ಪಹಣಿ ಬದಲಾವಣೆ ತೊಂದರೆಯಾಗಿದೆ. ಸಾರ್ವಜನಿಕರು ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಜಮೀನುಗಳ ನೋಂದಣಿ ಪಡಿಸಿ 4 ತಿಂಗಳುಗಳು ಕಳೆದಿದೆ. ಆದರೆ ಪಹಣಿ ಬದಲಾವಣೆ ಆಗದೆ ತಾಂತ್ರಿಕ ಸಮಸ್ಯೆಗಳಿಂದ ಉಂಟಾದ ದೋಷಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಮನಿಯಲ್ಲಿ ತಿಳಿಸಲಾಗಿದೆ.