ಪುತ್ತೂರು ಯಕ್ಷರಂಗದಿಂದ ಯಕ್ಷಗಾನ ತಾಳಮದ್ದಳೆ, ಗುರುಶಿಷ್ಯ-ಸಂಸ್ಮರಣೆ

0

ಪದವಿ ಶಿಕ್ಷಣದಲ್ಲಿ ಯಕ್ಷಗಾನವನ್ನು ಸೇರಿಸಬೇಕು -ಮುಳಿಯ ಕೇಶವ ಪ್ರಸಾದ್

ಪುತ್ತೂರು: ನಮ್ಮಲ್ಲಿ ಯಕ್ಷಗಾನವನ್ನು ಇಂದು ಪ್ರವೃತ್ತಿಯಾಗಿ ಸ್ವೀಕರಿಸುವವರು ಹೆಚ್ಚು ಮಂದಿ ಇದ್ದಾರೆ, ವೃತ್ತಿಯಾಗಿ ಸ್ವೀಕರಿಸಲು ಪದವಿ ಶಿಕ್ಷಣದಲ್ಲಿ ಯಕ್ಷಗಾನವನ್ನು ಸೇರಿಸಬೇಕು ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಹೇಳಿದರು.


ಅವರು ಅ. 2 ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯಕ್ಷರಂಗ ಪುತ್ತೂರು ವತಿಯಿಂದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಸಹಭಾಗಿತ್ವದೊಂದಿಗೆ ಯಕ್ಷಗಾನ ತಾಳಮದ್ದಳೆ ಮತ್ತು ರಸಿಕ ರತ್ನ ವಿಟ್ಲ ಜೋಷಿ ಮತ್ತು ಹಾಸ್ಯರತ್ನ ನಯನ ಕುಮಾರ್‌ರವರುಗಳ ಗುರುಶಿಷ್ಯ – ಸಂಸ್ಕರಣೆಯ ಸಭಾ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಲೋಕ ವಿದ್ಯೆಯಲ್ಲಿವನ್ನು ಪಡೆದು ಯಕ್ಷಗಾನವನ್ನು ವೃತ್ತಿಯಾಗಿ ಮಾಡುತ್ತಿದ್ದರು. ಆದರೆ ಇಂದಿನ ಇಂದಿನ ಕಾಲದಲ್ಲಿ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿರುವುದರಿಂದ ಪದವಿ ಶಿಕ್ಷಣದಲ್ಲಿ ಯಕ್ಷಗಾನವನ್ನು ಆಯ್ಕೆ ಮಾಡುವಂತೆ ನಾವೆಲ್ಲ ಸೇರಿ ಸಂಬಂಧಪಟ್ಟವರನ್ನು ಒತ್ತಾಯ ಮಾಡಬೇಕು. ಪಠ್ಯ ರಚನೆಗೆ ನಮ್ಮಲ್ಲಿ ಇರುವ ಅನುಭವಿ ಯಕ್ಷಗಾನ ಸಾಹಿತಿಗಳ ಸಹಕಾರವನ್ನು ಪಡೆಯಬೇಕು. ಇಂದು ನಾವು ಪ್ರಯತ್ನ ಪಟ್ಟರೇ, 5 ವರ್ಷದೊಳಗೆ ಪದವಿಯಲ್ಲಿ ಯಕ್ಷಗಾನವನ್ನು ಶಿಕ್ಷಣವಾಗಿ ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮುಳಿಯ ಕೇಶವ ಪ್ರಸಾದ್ ಹೇಳಿದರು.

ಸನ್ಮಾನ
ಹವ್ಯಕ ಯಕ್ಷಗಾನ ಕೃತಿಕಾರಾದ ಸೇರಾಜೆ ಸೀತಾರಾಮ ಭಟ್‌ರವನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸೇರಾಜೆ ಸೀತಾರಾಮ ಭಟ್‌ರವರ ಪತ್ನಿ ಗೀತಾರವರು ಉಪಸ್ಥಿತರಿದ್ದರು.


ಹತ್ತೂರಲ್ಲಿ ಹೆಸರು- ಶ್ಯಾಮ್ ಭಟ್
ಯಕ್ಷಗಾನ ಕಲಾ ಪೋಷಕ ಟಿ.ಶ್ಯಾಮ್ ಭಟ್‌ರವರು ಸನ್ಮಾನ ಕಾರ‍್ಯಕ್ರಮವನ್ನು ನೇರವೇರಿಸಿ, ಮಾತನಾಡಿ ಸೇರಾಜೆ ಸೀತಾರಾಮ ಭಟ್‌ರವರ ಸಾಧನೆಗೆ ಆರ್ಹವಾಗಿ ಸನ್ಮಾನ ದೊರೆತಿದೆ. ಸೀತಾರಾಮ ಶಾಶ್ತ್ರೀ ಕಾಡೂರುರವರ ನೇತ್ರತ್ವದಲ್ಲಿ ಪುತ್ತೂರು ಯಕ್ಷರಂಗ ಸಂಸ್ಥೆಯು ಮಾಡುತ್ತಿರುವ ಯಕ್ಷಗಾನ ಕಾರ‍್ಯಕ್ರಮ ಹತ್ತೂರಲ್ಲಿ ಹೆಸರನ್ನು ಪಡೆದಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್‌ರವರು ಅಭಿನಂದನಾ ಭಾಷಣ ಗೈದರು. ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಹರೀಶ್ ಜೋಷಿ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಪುತ್ತೂರು ಯಕ್ಷರಂಗದ ಅಧ್ಯಕ್ಷ ಸೀತಾರಾಮ ಶಾಸ್ತ್ರಿ ಕಾಡೂರು ಸ್ವಾಗತಿಸಿ, ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಉದಯ ನಯನ್ ಕುಮಾರ್ ವಂದಿಸಿದರು. ಎನ್.ಕೆ.ರಾಮಚಂದ್ರ ಭಟ್ ಪನೆಯಾಲರವರು ಕಾರ‍್ಯಕ್ರಮ ನಿರೂಪಿಸಿದರು. ರವಿಶಂಕರ್ ಭಟ್ ಉಪ್ಪಳಂಗಳ, ಅಮೃತೇಶ್ವರ ಭಟ್ ಮತ್ತಿತರರು ಸಹಕರಿಸಿದರು.


ವೆಬ್ ಸೈಟ್, ಗ್ರಂಥ ಅನಾವರಣ
ವಿಟ್ಲ ಜೋಷಿರವರ ಸಧನೆಯ ವೆಬ್‌ಸೈಟ್ ಮತ್ತು ಸೇರಾಜೆ ಅಭಿನಂದನಾ ಗ್ರಂಥದ ಸಾಂಕೇತಿಕ ಅನಾವರಣವನ್ನು ಮುಳಿಯ ಕೇಶವಪ್ರಸಾದ್ ಮತ್ತು ಟಿ.ಶ್ಯಾಮ್ ಭಟ್‌ರವರುಗಳು ಅನಾವರಣಗೊಳಿಸಿದರು.


ಯಕ್ಷಗಾನ ತಾಳಮದ್ದಳೆ
ಪೂರ್ವಾಹ್ನ 9.30 ರಿಂದ ಸೇರಾಜೆ ಸೀತಾರಾಮ ಭಟ್ಟ ವಿರಚಿತ ಹವ್ಯಕ ಪೌರಾಣಿಕ ಕಥಾನಕ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ ಭಟ್ ಮೃದಂಗ ಮತ್ತು ಚೆಂಡೆಯಲ್ಲಿ ಲಕ್ಷ್ಮೀನಾರಾಯಣ ಅಡೂರು, ಚಂದ್ರಶೇಖರ ಕೊಂಕಣಾಜೆ ಅರ್ಥಧಾರಿಗಳಾಗಿ ಹಿರಣ್ಯ ವೆಂಕಟೇಶ್ವರ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶಂಭು ಶರ್ಮ ವಿಟ್ಲ, ರಾಧಾಕೃಷ್ಣ ಕಲ್ಚಾರ್, ಸೇರಾಜೆ ಸೀತಾರಾಮ ಭಟ್ಟ, ಪಶುಪತಿ ಶಾಸ್ತ್ರಿ, ಡಾ| ಹರೀಶ್ ಜೋಷಿ ವಿಟ್ಲ, ಹರೀಶ ಬಳಂತಿಮೊಗರುರವರು ಭಾಗವಹಿಸಿದರು.

ಮಾತಂಗ ಕನ್ಯೆ ತಾಳಮದ್ದಳೆ
ಮಧ್ಯಾಹ್ನ 2 ರಿಂದ ಯಕ್ಷಗಾನ ತಾಳಮದ್ದಳೆ ಮಾತಂಗ ಕನ್ಯೆ(ಪುರುಷೋತ್ತಮ ಪೂಂಜ ವಿರಚಿತ ಪೌರಾಣಿಕ ಕಥಾನಕ) ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರರಾಗಿ ಕುರಿಯ ಗಣಪತಿ ಶಾಸ್ತ್ರಿ, ರವಿಚಂದ್ರ ಭಟ್ ಪದ್ಯಾಣ, ಮೃದಂಗ ಮತ್ತುಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀನಾರಾಯಣ ಅಡೂರು, ಶ್ರೀ ರಾಮಮೂರ್ತಿ ಕುದ್ರಕೋಡ್ಲು ಹಾಗೂ ಚಕ್ರತಾಳದಲ್ಲಿ ರಾಜೇಂದ್ರ, ಅರ್ಥಧಾರಿಗಳಾಗಿ ಸೂರಿಕುಮೇರಿ ಗೋವಿಂದ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗೇರು, ಪಶುಪತಿ ಶಾಸ್ತ್ರಿ, ಸೇರಾಜೆ ಸೀತಾರಾಮ ಭಟ್, ಡಾ| ಹರೀಶ್ ಜೋಷಿ ವಿಟ್ಲರವರು ಭಾಗವಹಿಸಿದರು.

ಯಕ್ಷಗಾನವನ್ನು ಬೆಳೆಸುವುದೇ ಸಂಘಟನೆಯ ಗುರು
ಪುತ್ತೂರು ಯಕ್ಷರಂಗ ಸಂಸ್ಥೆಯ ಮೂಲಕ ನಮ್ಮ ಯುವ ಪೀಳಿಗೆಯಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಬೇಕೆಂಬ ಉದ್ದೇಶದಿಂದ ನಾವು ಕಾರ‍್ಯಕ್ರಮವನ್ನು ಪ್ರತಿ ವರ್ಷ ಆಯೋಜನೆಯನ್ನು ಮಾಡುತ್ತಿದ್ದೇವೆ. ಯಕ್ಷಪ್ರೇಮಿಗಳ ಸಹಕಾರ, ಪ್ರೋತ್ಸಾಹ ಸದಾ ದೊರೆಯುತ್ತಿದ್ದು, ಮುಂದೆಯೂ ತಮ್ಮ ಸಹಕಾರ ಬೇಕು
-ಸೀತಾರಾಮ ಶಾಸ್ತ್ರಿ ಕಾಡೂರು
ಅಧ್ಯಕ್ಷರು ಯಕ್ಷರಂಗ ಪುತ್ತೂರು

LEAVE A REPLY

Please enter your comment!
Please enter your name here