ಪುತ್ತೂರು: ಸಾಮೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ದಿನಾಚರಣೆ ಅ.2ರಂದು ನಡೆಯಿತು. ದೀಪ ಪ್ರಜ್ವಲಿಸಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಫೋಟೋಗಳಿಗೆ ಪುಷ್ಪಾರ್ಚನೆ ಮಾಡಲಾಯಿತು .
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಶಿವ ಪ್ರಸಾದ್ ಅಧ್ಯಕ್ಷರಾಗಿ,ಹಿರಿಯ ಮಾರ್ಗದರ್ಶಕ ಗೋಪಾಲಕೃಷ್ಣ ಭಟ್ ಅತಿಥಿಗಳಾಗಿ ಗಾಂಧಿ ಜಯಂತಿ ಕುರಿತು ತಿಳಿಸಿದರು.
ನಗರಸಭಾ ಸದಸ್ಯಮನೋಹರ್ ಸ್ವಚ್ಛತಾ ಹೀ ಸೇವಾ” ಬಗ್ಗೆ ಮಾಹಿತಿಯನ್ನು ನೀಡಿದರು.ಸಾಮೆತ್ತಡ್ಕ ಟ್ರಸ್ಟ್ ಸದಸ್ಯ ವೆಂಕಟ ರಾಜ್ ಹಾಗೂ ಮೀನಾಕ್ಷಿ , ಕಾರ್ಯಾಧ್ಯಕ್ಷ ಇಂದಿವರ್ ಭಟ್ ಆಗಮಿಸಿ ಶುಭಾಶಯ ಕೋರಿದರು. ಸಾಮೆತ್ತಡ್ಕ ಯುವಕ ಮಂಡಲ ಮಾನ್ಯ ಅಧ್ಯಕ್ಷ ರೋಷನ್ ರೆಬೆಲ್ಲೊ ಆಗಮಿಸಿ ಶುಭಾಶಯ ತಿಳಿಸಿದರು.
ನಿವೃತ್ತ ಶಿಕ್ಷಕಿ ವಿಜಯಾ ಕುಮಾರಿ “ಸ್ವಚ್ಛ ಶಾಲೆ” ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿದರು. ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿ ವಂದಿಸಿದರು .ಹಿರಿಯ ಶಿಕ್ಷಕಿ ಮರಿಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಡ್ಯಾಶ ಮಾರ್ಕೆಟಿಂಗ್ ಮಾಲೀಕೆ ನಳಿನಿ ಶಾಲೆಗೆ ಶೈಕ್ಷಣಿಕ ಸಾಲಿಗೆ ಬೇಕಾಗುವ ಸ್ಟೇಷನರಿ ಸಾಮಗ್ರಿಗಳನ್ನೂ ಖರೀದಿ ಮಾಡಲು 5,000 ಹಣವನ್ನು ಚೆಕ್ ಮೂಲಕ ಶಾಲೆಗೆ ನೀಡಿದರು.
ಕಾರ್ಯಕ್ರಮ ದಲ್ಲಿ ಹಿರಿಯ ವಿದ್ಯಾರ್ಥಿ ಫಾಯಿಜ್ ರವರು ಸಹಕರಿಸಿದರು. ಸಾಮೆತ್ತಡ್ಕ ಯುವಕ ಮಂಡಲದ ಉಪಾಧ್ಯಕ್ಷ ಪ್ರಸಾದ್ ಕುಮಾರ್ ಪಿ,ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಪವಿತ್ರ, ಇತರ ಸದಸ್ಯರು ಹಾಗೂ ಪೋಷಕರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕೊನೆಗೆ ಸ್ವಚ್ಛತಾ ಕಾರ್ಯ ನಡೆಯಿತು.