ವೀರಮಂಗಲ ಸ ಹಿ ಪ್ರಾ ಶಾಲೆಯಲ್ಲಿ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ

0

ಪುತ್ತೂರು:ವೀರಮಂಗಲ ಪಿಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.  ಕಾರ್ಯಕ್ರಮವನ್ನು  ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಅನುಪಮಾ ದೀಪ ಬೆಳಗಿಸಿ ಉದ್ಘಾಟಿಸಿದರು. ಗಾಂಧಿ ಸ್ಮೃತಿಯನ್ನು ಮಾಡಲಾಯಿತು.

ಶಾಲಾ ಮುಖ್ಯ ಗುರು ತಾರಾನಾಥ ಪಿ  ಮಾತನಾಡಿ ಗಾಂಧೀಜಿಯವರು ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು, ಸತ್ಯ, ಧರ್ಮ ಅಹಿಂಸೆಯನ್ನು ಪ್ರತಿಪಾದಿಸಿ ಮಾನವ ಧರ್ಮವೇ ಶ್ರೇಷ್ಠವಾದ ಧರ್ಮ ಎಂದು ಕರೆ ನೀಡಿದವರು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.ಗಾಂಧೀಜಿಯವರು ಮೂಲ ಶಿಕ್ಷಣದ ಮೂಲಕ ಮಾಡಿ ಕಲಿ ತತ್ವವನ್ನು ಪ್ರತಿಪಾದಿಸಿದ್ದರು .ಮಗುವಿನ ಮನಸ್ಸು ಆತ್ಮ ಮತ್ತು ದೇಹಗಳಲ್ಲಿ ಅತ್ಯುತ್ತಮವುದನ್ನು ಸರ್ವತೋಮುಖವಾಗಿ ಹೊರೆಗಳೆಯೆವುದೇ  ಶಿಕ್ಷಣ ಎಂದರು.

ಶಾಲಾ ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶ್ರೀಲತಾ, ಕವಿತಾ, ಹೇಮಲತಾ ನಳಿನಿ, ಚಂದ್ರಾವತಿ ಅಡುಗೆ ಸಿಬ್ಬಂದಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಭವ್ಯ,  ಶಾಂಬಲತ, ರಾಜೇಶ್ವರಿ, ಲಿಂಗಪ್ಪಗೌಡ, ಸುರೇಶ್ ಉಪಾಧ್ಯಕ್ಷರಾದ ರಜಾಕ್ ಉಪಸ್ಥಿತರಿದ್ದರು. ಎಸ್ ಡಿ ಎಂ ಸಿ ಸದಸ್ಯರು ಶಾಲೆಯ ಆವರಣ ಸ್ವಚ್ಛಗೊಳಿಸಿ,  ತರಕಾರಿ ತೋಟವನ್ನು ನಿರ್ಮಾಣ ಮಾಡಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮೈಸೂರು ವಿಭಾಗ ಮಟ್ಟದ  ಯೋಗಾ ಸ್ಪರ್ಧೆಯಲ್ಲಿ ವಿಜಯಿಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here