ಬೇಡಿಕೆ ಈಡೇರದಿದ್ದರೆ ಡಿ.15ರಿಂದ ಅನಿರ್ಧಿಷ್ಟಾವದಿ ಮುಷ್ಕರ – ಸುನಿಲ್ ದೇವಾಡಿಗ
ಪುತ್ತೂರು: ನ್ಯಾಯಯುತ ವಿವಿಧ ಬೇಡಿಕೆಗಳನ್ನು ಜಾರಿ ಮಾಡಬೇಕು ಮತ್ತು ಕಮಲೇಶ್ಚಂದ್ರ ನೇತೃತ್ವದ ಏಕ ಸದಸ್ಯ ಸಮಿತಿಯ ಧನಾತ್ಮಕ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿಯಿಂದ ಪುತ್ತೂರು ವಿಭಾಗೀಯ ಅಂಚೆ ಕಚೇರಿ ಮುಂದೆ ಅ.4ರಂದು ಮುಷ್ಕರ ನಡೆಯಿತು.
2022ರ ಸೆಪ್ಟೆಂಬರ್ ತಿಂಗಳಲ್ಲಿ ಎಐಜಿಡಿಎಸ್‌ಯು ಮತ್ತು ಎನ್‌ಯುಜಿಡಿಎಸ್ ಸಂಘಟನೆಗಳು ಜೆಸಿಎ ರೂಪಿಸಿಕೊಂಡು ನ್ಯಾಯಯುತ ಬೇಡಿಕೆಗಳ ಜಾರಿಗೆ ಒತ್ತಾಯಿಸಿ ಅನೇಕ ರೀತಿಯ ಹೋರಾಟವನ್ನು ಹಮ್ಮಿಕೊಂಡಿದ್ದು, ಇದೀಗ ಅದರ ಮುಂದುವರಿದ ಭಾಗವಾಗಿ ಗ್ರಾಮೀಣ ಅಂಚೆ ನೌಕರರ ಮುಷ್ಕರ ನಡೆಯುತ್ತಿದೆ. ಮುಂದೆ ಬೇಡಿಕೆಗಳು ಅನುಷ್ಠಾನ ಆಗದಿದ್ದರೆ ಡಿಸೆಂಬರ್ 15 ರಿಂದ ಅನಿರ್ದಿಷ್ಟ ಕಾಲದ ಮುಷ್ಕರ ನಡೆಯಲಿದೆ ಎಂದು ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯ ಸಮಿತಿ ಕಾರ್ಯದರ್ಶಿ ಸುನಿಲ್ ದೇವಾಡಿಗ ಎಚ್ಚರಿಕೆ ನೀಡಿದರು. ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯ ಸಮಿತಿ ಅಧ್ಯಕ್ಷ ವಿಠಲ ಎಸ್ ಪೂಜಾರಿ, ಕೋಶಾಧಿಕಾರಿ ಕಮಲಾಕ್ಷ, ವಿಭಾಗದ ಪದಾಧಿಕಾರಿಗಳ ಬೆಳ್ತಂಗಡಿಯ ಕಿರಣ್, ಶೇಖರ್, ಧರ್ಮಸ್ಥಳದ ಮಹೇಶ, ದಿನೇಶ್, ಉಪ್ಪಿನಂಡಿಯ ವಸಂತ, ಸುಳ್ಯದ ಭೂಷಣ್ ಕುಮಾರ್, ಗೋಪಾಲಕೃಷ್ಣ, ಕೊರಗಪ್ಪ, ಚಂದ್ರಶೇಖರ್, ವಿಠಲ ಎಸ್ ಪೂಜಾರಿ, ಕೇಶವ, ನಾರಾಯಣ, ನವೀನ್, ಜನಾರ್ದನ, ಸಂದೀಪ್, ಅಶೋಕ್ ಅಂಡಾರು, ವಸಂತಿ ಮಾಳ, ದಿನೇಶ್ ಪ್ರಭು, ಸಂತೋಷ್ ನರಿಮೊಗರು, ಅಶೋಕ ಸಾಲೆತ್ತೂರು, ಮಲ್ಲಿಕಾ ನರಿಕೊಂಬು, ಸುರೇಶ್ ಹೀರಾ, ಅರುಣ್ ಪ್ರಕಾಶ್ ಮರ್ಕಂಜ, ರಾಮಕೃಷ್ಣ ಭಟ್ ಪೆರ್ಲಂಪಾಡಿ, ಜನಾರ್ದನ ಪಂಬೆತಾಡಿ, ಅನಿಲ್ ಬಾಳೆಗೋಡು, ಸುಂದರ ಕೋಡಿಂಬಾಳ, ಅಪ್ಪಯ್ಯ ನಾಯಕ್ ಕಾವು, ಬಾಲಕೃಷ್ಣ ಸುಳ್ಯ, ಬಾಲಕೃಷ್ಣ ಬೆಳ್ಳಾರೆ ಸಹಿತ ಅನೇಕರು ಮುಷ್ಕರದಲ್ಲಿ ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಗಳು:
8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸುವುದು. ಸೇವಾ ಹಿರಿತನದ ಆಧಾರದ ಮೇಲೆ 12,24,36 ವರ್ಷ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡುವುದು. ಅವೈಜ್ಞಾನಿಕ ಗುರಿ ನೀಡಿ ಮೇಳಗಳನ್ನು ನಡೆಸುತ್ತಿರುವುದನ್ನು ನಿಲ್ಲಸುವುದು. ಗ್ರೂಪ್ ಇನ್ಶೂರೆನ್ಸ್‌ಗಳ ಕವರೇಜ್ ರೂ. 5 ಲಕ್ಷದವರೆಗೆ ಹೆಚ್ಚಿಸುವುದು. ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸುವುದು. ಜಿಡಿಎಸ್ ಗ್ರಾಜ್ಯುವಿಟಿ ಹಣವನ್ನು ರೂ. 5ಲಕ್ಷಗಳ ವರೆಗೆ ಹೆಚ್ಚಿಸುವುದು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಸ ಕಲ್ಪಿಸುವುದು. ಜಿಡಿಎಸ್ ಮತ್ತು ಅದರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ