ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಯೋಗ ತರಬೇತಿ ಕಾರ್ಯಗಾರ

0


ಉಪ್ಪಿನಂಗಡಿ: ಆಧುನಿಕ ಯುಗದಲ್ಲಿ ಒತ್ತಡಗಳ ನಡುವೆ ಜೀವನವನ್ನು ಸಾಗಿಸುತ್ತಿರುವ ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತ್ಯಗತ್ಯ. ಈ ನಿಟ್ಟಿನಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಶಿಕ್ಷಕ ವೃಂದದವರಿಗೆ ಅಕ್ಟೋಬರ್ 4 ರಂದು ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ ಯೋಗ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು.

ತರಬೇತುದಾರರಾಗಿ ಆಗಮಿಸಿದ ಸಂಜಯ್ ಸಿ. ವಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಂಯೋಜಕರು ಸಂವಿತ್ ಯೋಗ ಫೌಂಡೇಶನ್ ಬೆಂಗಳೂರು ಇವರು ಯೋಗವು ಆಧ್ಯಾತ್ಮಿಕ, ಮಾನಸಿಕ ಹಾಗೂ ದೈಹಿಕ ಶಾಂತಿ – ಸಂಯಮಗಳನ್ನು ಕಾಯ್ದುಕೊಳ್ಳುಲು ಒಂದು ಉತ್ತಮ ಮಾರ್ಗ. ಯೋಗದಿಂದ ತಮ್ಮನ್ನು ತಾವು ಅರಿತುಕೊಳ್ಳುವ ಸಾದ್ಯ. ಎಲ್ಲಾ ಜೀವನ ಪರಿಸ್ಥಿತಿಗಳಲ್ಲಿ ತನ್ನನ್ನು ತಾನು ಚೆನ್ನಾಗಿ ನಿಭಾಯಿಸಲು ಕಲಿಯಲು, ಉತ್ತಮ ಆರೋಗ್ಯವನ್ನು ಪಡೆಯಲು ಯೋಗವು ಸಹಾಯ ಮಾಡುತ್ತದೆ. ಶಿಕ್ಷಕರು ಯೋಗವನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.

ನಂತರ ಅನುಭವಿ ಯೋಗಶಿಕ್ಷಕ ಪ್ರಸಾದ್ ಪಾಣಾಜೆ ಇವರು ಯೋಗಾಸನ ಪ್ರಾತ್ಯಾಕ್ಷಿಕೆಯನ್ನು ನಡೆಸಿಕೊಟ್ಟರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಚಿತ್ರಕಲಾ ಶಿಕ್ಷಕ ಸದಾಶಿವ ಶಿವಗಿರಿ ಕಲ್ಲಡ್ಕ ಹಾಗೂ ಕೌನ್ಸಿಲಿಂಗ್ ಶಿಕ್ಷಕಿ ಪದ್ಮಶ್ರೀ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಮಾತನಾಡಿ ಮುಂದಿನ ದಿನಗಳಲ್ಲಿ ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಕೆ ಪ್ರಕಾಶ್, ಉಪನ್ಯಾಸಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದು, ಉತ್ಸಾಹದಿಂದ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಕಾರ್ಯಕ್ರಮವನ್ನು ಸಹಶಿಕ್ಷಕಿ ಅಕ್ಷತಾ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here