ಪುತ್ತೂರು: ಬಡವರ ಕನಸಿಗೆ ಬೆಳಕಾಗುವ ವಿಶಿಷ್ಠ ಯೋಜನೆಯನ್ನೊಳಗೊಂಡ ಬ್ರೈಟ್ ಭಾರತ್ ಸಂಸ್ಥೆಯ ಕಛೇರಿ ಅ.9 ರಂದು ಪುತ್ತೂರು ಕಲ್ಲಿಮಾರ್‌ನಲ್ಲಿರುವ ಕೀರ್ತನಾ ಪ್ಯಾರಡೈಸ್‌ನಲ್ಲಿ ಶುಭಾರಂಭಗೊಳ್ಳಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಕಛೇರಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು ಮತ್ತು ಶಕುಂತಳಾ ಟಿ.ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಇಬ್ರಾಹಿಂ ಸಾಗರ್, ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಎಸ್‌ಡಿಪಿಐ ಮಾಜಿ ಅಧ್ಯಕ್ಷ ಸಿದ್ದೀಕ್ ಕೆ.ಎ, ಬಿಜೆಪಿ ಯುವಮೋರ್ಛಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ಪಿ.ವಾಮನ ಪೈ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಕೂರ್ ಹಾಜಿ, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ನ್ಯಾಯವಾದಿ ಆಸ್ಗರ್ ಮುಡಿಪು, ನಗರಸಭೆ ಸದಸ್ಯ ರಿಯಾಝ್ ಪರ್ಲಡ್ಕ, ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮುಖ್ಯ ಪ್ರಬಂಧಕ ಅನೀಶ್ ಶೆಟ್ಟಿ, ಕೀರ್ತನಾ ಡೆವಲಪರ್ಸ್ ಮಾಲಕ ಪ್ರತಾಪಸಿಂಹ ವರ್ಮಾ, ಉದ್ಯಮಿ ಪ್ರಕಾಶ್ ನಾಯಕ್ ಪುತ್ತೂರು ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ರಸಮಂಜರಿ ಕಾರ್ಯಕ್ರಮ
ಉದ್ಘಾಟನಾ ಕಾರ್ಯಕ್ರಮದ ಮೊದಲು ಸಂಗೀತ ರಸಮಂಜರಿ ನಡೆಯಲಿದೆ. ಅಫ್ರಾಜ್ ಉಲ್ಲಾಳ್, ಸಮದ್ ಗಡಿಯಾರ್ ಸೇರಿದಂತೆ ಪ್ರಸಿದ್ಧ ಗಾಯಕರು ಭಾಗವಹಿಸಲಿದ್ದಾರೆ.ನಮ್ಮ ಟಿವಿಯ ಆಂಕರ್ ಸಿಶಾನ್ ಕೌಡೂರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಬ್ರೈಟ್ ಭಾರತ್ ಸಂಸ್ಥೆಯ ಬಗ್ಗೆ
ಬ್ರೈಟ್ ಭಾರತ್ ಅನ್ನುವುದು, ಬಡವರ ಕನಸಿಗೆ ಬೆಳಕಾಗುವ ಒಂದು ವಿಭಿನ್ನ ಯೋಜನೆ. ಪುತ್ತೂರು ಸುಳ್ಯ ಮಡಿಕೇರಿ ಭಾಗದಲ್ಲಿ ಪ್ರಪ್ರಥಮವಾಗಿ ಆರಂಭವಾಗಿರುವ, ನಾಲ್ಕು ಮನೆಗಳು ಹಾಗು ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್, ನಗದು, ಹೀಗೆ ಲಕ್ಷಾಂತರ ಬಹುಮಾನಗಳು ಇರುವ ಒಂದು ವಿಭಿನ್ನ ಸ್ಕೀಮ್ ಯೋಜನೆಯ ಹೆಸರೇ ಬ್ರೈಟ್ ಭಾರತ್. ಕೇವಲ ಒಂದು ಸಾವಿರ ರುಪಾಯಿಗೆ, ನಾಲ್ಕು ಮನೆ ಸೇರಿದಂತೆ ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್ ನಗದು ಸೇರಿ, ಹಲವು ಬಹುಮಾನಗಳನ್ನು ಗೆಲ್ಲಲು ಅವಕಾಶವಿರುವ ಮತ್ತು ಗೆಲ್ಲದವರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವ ಪ್ರೋತ್ಸಾಹಕ ಬಹುಮಾನಗಳನ್ನು ನೀಡುವ ಒಂದು ವಿಭಿನ್ನ ಸೇವಿಂಗ್ ಪ್ಲಾನ್ ಯೋಜನೆ ಇದಾಗಿದೆ. ಈ ಸ್ಕೀಮ್ ಯೋಜನೆಗೆ ಸೇರಿದವರು, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಂತೆ, ಒಟ್ಟು ಇಪ್ಪತ್ತು ತಿಂಗಳು ಕಟ್ಟಬೇಕು. ಇಪ್ಪತ್ತು ತಿಂಗಳು ಹಣ ಕಟ್ಟಿಯೂ, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಇನ್ವರ್ಟರ್, ಸೋಫಾ, ಚಿನ್ನದ ಉಂಗುರ, ಚಿನ್ನದ ರಿಂಗ್, ಚಿನ್ನದ ಚೈನ್, ಇಷ್ಟು ಆಯ್ಕೆಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 6360253651, 7019843134 ಗೆ ಕರೆ ಮಾಡಬಹುದು ಎಂದು ಬ್ರೈಟ್ ಭಾರತ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವೀಲ್ ಚೆಯರ್ ವಿತರಣೆ/ ಸನ್ಮಾನ
ಕಛೇರಿ ಉದ್ಘಾಟನಾ ಕಾರ್ಯಕ್ರಮದ ವಿಶೇಷ ಅಂಗವಾಗಿ ಇಬ್ಬರು ಅಸಹಾಯಕರಿಗೆ ವೀಲ್ ಚೆಯರ್ ವಿತರಣೆ ನಡೆಯಲಿದೆ. ಇದಲ್ಲದೆ ಸಮಾಜ ಸೇವೆ ಮಾಡುತ್ತಿರುವ ಮೂವರು ಸಮಾಜ ಸೇವಕರುಗಳಾದ ಅಲಿ ಪರ್ಲಡ್ಕ, ಇಫಾಜ್ ಬನ್ನೂರು, ಸಾಹುಲ್ ಕಾಶಿಪಟ್ಣರವರುಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ.