ಪಾಲಿಟಿಕ್ಸ್ ಫಾರ್ ಪವರ್ ಅಲ್ಲ ಪಾಲಿಟಿಕ್ಸ್ ಫಾರ್ ನೇಷಲಿಸಮ್-ಸು.ರಾಮಣ್ಣ
ಹಿಂದು ಸಮಾಜದ ಎಡರುತೊಡರುಗಳು ನಿವಾರಣೆಯಾಗಲಿ-ಕಿಶೋರ್ ಬೊಟ್ಯಾಡಿ
ಹಿಂದುಗಳು ಸಂಘಟಿತರಾಗಿ ಕೆಲಸ ಮಾಡಿ-ಯು.ಪೂವಪ್ಪ
ಹಿಂದು ಸಮಾಜದ ಸಂಘಟನೆಗೆ ಜಾಗೃತಿಯ ರಥ ಯಾತ್ರೆ-ಮುರಳಿಕೃಷ್ಣ ಹಸಂತಡ್ಕ
ಪುತ್ತೂರಿನ ದುರ್ಘಟನೆಗೆ ಯಾರ ಮೇಲೂ ದೂಷಿಸುವುದು ಬೇಡ
ಪುತ್ತೂರು ಮೊದಲಿಂದಲೂ 60 ದಶಕದಿಂದ ಹಿಂದುತ್ವದ ಹಿತಕ್ಕಾಗಿ ಪ್ರಾಣಾರ್ಪಣೆ ಮಾಡಿದ ಭೂಮಿ.ಹಿಂದುತ್ವದ ರಕ್ಷಾ ಕವಚವಿದು.ರಾಷ್ಟçದ ರಾಜಕಾರಣ ಹೇಗಿರಬೇಕೆಂಬುದಕ್ಕೆ ಪುತ್ತೂರಿನ ರಾಜಕಾರಣ ಒಂದು ನಮೂನೆ ಆಗಿತ್ತು.ಪುತ್ತೂರಿನಲ್ಲಿ ರಾಮ್ ಭಟ್, ಸುಳ್ಯದಲ್ಲಿ ಅಂಗಾರ ಗೆಲ್ಲುವಾಗ ಪಕ್ಷ ಎಷ್ಟು ಖರ್ಚು ಮಾಡುತ್ತಿತ್ತು ಎಂದು ನೋಡುವುದಕ್ಕಿಂತ ಇಲ್ಲಿ ರಾಷ್ಟ್ರೀಯತೆಯ ಆಧಾರದ ಮೇಲೆ ಇಲ್ಲಿ ಮತ ಬೀಳುತ್ತಿತ್ತು. ದುರ್ದೈವದ ನಡುವೆ ದುರ್ಘಟನೆ ನಡೆದ್ಹೋಗಿದೆ.ನಮ್ಮ ಮನಸ್ಸು ಕೆಟ್ಟು ಹೋಗಿದೆ ಎಂದು ಯಾರಿಗೂ ದೂಷಿಸುವುದು ಬೇಡ ಎಂದ ಸು ರಾಮಣ್ಣ ಅವರು ನಾವು ಅದರಿಂದ ಹೊರಗೆ ಬರಬೇಕು. ಇಲ್ಲಿ ಸೋಲು ಅನ್ನುವುದು ಅಂತಿಮ ಅಲ್ಲ. ಸೋಲು ಅನ್ನುವುದು ಸವಾಲು. ರಾಜಕೀಯದಲ್ಲಿ ಇಂದಿನ ಸೋಲು ನಾಳಿನ ಗೆಲುವಿಗೆ ಸೋಪಾನ. ನಮ್ಮ ಮೇಲೆ ಯಾರು ಕಲ್ಲು ಎಸೆದರೂ ಆ ಕಲ್ಲನ್ನು ತುಳಿದುಕೊಂಡು ಮುಂದೆ ಹೋಗುವವರು ನಾವು.ಇದು ನಮ್ಮ ಜಾತಕ ಎಂದು ಸು ರಾಮಣ್ಣ ಹೇಳಿದರು.
ವೈಭವದ ಶೋಭಾಯಾತ್ರೆ
ವಿಶ್ವಹಿಂದೂ ಪರಿಷತ್‌ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಶೌರ್ಯ ಜಾಗರಣ ರಥ ಯಾತ್ರೆ ಪುತ್ತೂರಿಗೆ ಆಗಮಿಸಿ ಬೊಳುವಾರು ಆಂಜನೇಯ ಮಂತ್ರಾಲಯದಿಂದ ಬೃಹತ್ ಶೋಭಾಯಾತ್ರೆ ನಡೆಯಿತು.ಹಿರಿಯರಾದ ಮುಗೆರೋಡಿ ಬಾಲಕೃಷ್ಣ ರೈ ತೆಂಗಿನ ಕಾಯಿ ಒಡೆಯುವ ಮೂಲಕ ರಥಕ್ಕೆ ಚಾಲನೆ ನೀಡಿದರು.
ಶೋಭಾಯಾತ್ರೆಯಲ್ಲಿ ವಾಯಲಿನ್ ಮೂಲಕ ಸಂಗೀತ ಚೆಂಡೆ, ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ರಾಮಮಂದಿರ ಭೂಮಿಯ ಹೋರಾಟದಲ್ಲಿ ಹುತಾತ್ಮಕರಾದವರ ಭಾವಚಿತ್ರ ಪ್ರದರ್ಶನ ಮತ್ತು ರಥಕ್ಕೆ ಜೆಸಿಬಿ ಮೂಲಕ ಪುಷ್ಪಾರ್ಚನೆ ವಿಶೇಷ ಆಕರ್ಷಣೆಯಾಗಿತ್ತು.ಶೋಭಾಯಾತ್ರೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ,ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಪುರಸಭಾ ಉಪಾಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಅಜಿತ್ ರೈ ಹೊಸಮನೆ, ಸೀತಾರಾಮ ರೈ ಕೆದಂಬಾಡಿಗುತ್ತು, ಮಾಧವ ಪೂಜಾರಿ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್,ನಗರಸಭಾ ಸದಸ್ಯರಾದ ದೀಕ್ಷಾ ಪೈ, ಪ್ರೇಮಲತಾ ನಂದಿಲ,ಗೌರಿ ಬನ್ನೂರು, ಮಾಜಿ ಪುರಸಭಾಧ್ಯಕ್ಷೆ ಪ್ರೇಮಲತಾ ರಾವ್,ಮೋಹನ್ ಪಕ್ಕಳ ಕುಂಡಾಪು, ರಾಮಣ್ಣ ಗೌಡ, ಶರಾವತಿ ರವಿನಾರಾಯಣ, ಜಯಂತಿ ನಾಯಕ್, ದಿನೇಶ್ ಪಂಜಿಗ,ಲಕ್ಷö್ಮಣ ಬೆಳ್ಳಿಪ್ಪಾಡಿ,ಚಂದ್ರಶೇಖರ್ ರಾವ್ ಬಪ್ಪಳಿಗೆ, ನರಿಮೊಗ್ರು ಗ್ರಾ.ಪಂ.ಅಧ್ಯಕ್ಷೆ ಹರಿಣಿ ಪಂಜಳ, ಮಹಾಬಲ ರೈ, ಅಶೋಕ್ ಬ್ರಹ್ಮನಗರ ಸಹಿತ ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.
ಪುತ್ತೂರು:ದೇಶದ ಶ್ರೇಷ್ಠ ಸಂವಿಧಾನ ರಚನೆ ಮಾಡಿದ ಡಾ|ಬಿ.ಆರ್.ಅಂಬೇಡ್ಕರ್, ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಬಲಿದಾನಗೈದ ಭಗತ್‌ಸಿಂಗ್, ಸುಭಾಶ್ಚಂದ್ರ ಭೋಸ್, ವೀರ ಸಾರ್ವಕರ್, ಸ್ವಾಮಿ ವಿವೇಕಾನಂದ ಮತ್ತು ರಾಮಮಂದಿರ ಹೋರಾಟದಲ್ಲಿ ಹುತಾತ್ಮರಾದ ಕೊಟ್ಟಾರಿ ಸಹೋದರರ ಸಹಿತ, ದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ಮುಡಿಪಾಗಿಟ್ಟವರ ಚಿತ್ರದೊಂದಿಗೆ, ಭಾರತ ಮಾತೆ, ವೀರ ಯೋಧರ ಬಣ್ಣ ಹಚ್ಚಿಕೊಂಡ ಮಕ್ಕಳು, ಚೆಂಡೆಯ ಸದ್ದು, ಶಂಖನಾದದೊಂದಿಗೆ ಪುತ್ತೂರುನಲ್ಲಿ,ವಿಶ್ವಹಿಂದೂ ಪರಿಷದ್‌ನ ಷಷ್ಠ್ಯಬ್ಧದ ಸಂಭ್ರಮದಲ್ಲಿ ಹಿಂದೂ ಶೌರ್ಯ ಜಾಗರಣ ರಥಯಾತ್ರೆ ವಿಜ್ರಂಭಣೆಯಿಂದ ನಡೆದಿದ್ದು ದಾರಿಯುದ್ದಕ್ಕೂ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ವೈಭವದ ಸ್ವಾಗತ ಕೋರಲಾಯಿತು.
ಸುಬ್ರಹ್ಮಣ್ಯದಿಂದ ಅ.7ರಂದು ಸಂಜೆ ಪುತ್ತೂರಿಗೆ ಆಗಮಿಸಿದ ಶೌರ್ಯ ಜಾಗರಣ ರಥವನ್ನು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಸ್ವಾಗತಿಸಲಾಯಿತು.ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ ಅವರು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.ರಥದ ಮೇಲೆ ಆಂಜನೇಯನ ಪ್ರತಿಷ್ಠೆ,ರಥದೊಳಗೆ ಭಾರತಮಾತೆಯ ಭಾವ ಚಿತ್ರದ ಅಕ್ಕಪಕ್ಕದಲ್ಲಿ ರಾಮಲಕ್ಷ್ಮಣ, ಮುಂದೆ ಘರ್ಜಿಸುವ ಸಿಂಹವನ್ನು ಹೋಲುವ ಹಿಂದು ಶೌರ್ಯ ಜಾಗರಣ ರಥ, ಅಲ್ಲಿಂದ ಮುಂದೆ ಸಾಗಿ ಪುತ್ತೂರು ಪೇಟೆಯಲ್ಲಿ ಸಂಚರಿಸಿ,ನೆಲ್ಲಿಕಟ್ಟೆಯಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನಿಂದಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನ ರಸ್ತೆಯಿಂದ ಸಂಚರಿಸಿ ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಂಡಿತ್ತು.
ಪಾಲಿಟಿಕ್ಸ್ ಫಾರ್ ಪವರ್ ಅಲ್ಲ-ಪಾಲಿಟಿಕ್ಸ್ ಫಾರ್ ನೇಷಲಿಸಮ್: ಕಿಲ್ಲೆ ಮೈದಾನದಲ್ಲಿ ನಡೆದ ಹಿಂದು ಶೌರ್ಯ ಸಂಗಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅವರು ದಿಕ್ಸೂಚಿ ಭಾಷಣ ಮಾಡಿದರು.ಸ್ವಾತಂತ್ರ‍್ಯದ ಹೋರಾಟದಲ್ಲಿ ರಾಷ್ಟ್ರೀಯ ರಾಜಕಾರಣವಿತ್ತು.ಆದರೆ ಸ್ವಾತಂತ್ರ‍್ಯ ಬಂದ ಬಳಿಕ ರಾಷ್ಟ್ರೀಯ ರಾಜಕಾರಣ ಮಂಕಾಗುತ್ತಾ ಹೋಯಿತು.ಅಧಿಕಾರದ ರಾಜಕಾರಣ ಜಾಸ್ತಿಯಾಯಿತು.ಆಗ ರಾಷ್ಟ್ರೀಯ ರಾಜಕಾರಣದ ಪೂಜೆ ಈ ದೇಶದಲ್ಲಾಗಬೇಕೆಂದು ಜನಸಂಘ ಹುಟ್ಟಿಕೊಂಡಿತ್ತು.ಇಲ್ಲಿ ಪವರ್ ಪಾಲಿಟಿಕ್ಸ್ ಇಲ್ಲ.ರಾಷ್ಟ್ರೀಯತೆಯ ಗುರಿಯಾಗಿ ವಸುದೈವ ಕುಟುಂಬಕಮ್ ಧ್ಯೇಯವಾಗಿತ್ತು.ಅಧಿಕಾರದ ರಾಜಕಾರಣದ ಹಿಂದೆ ಬೀಳಬಾರದು.ರಾಷ್ಟ್ರೀಯತೆಯ ರಾಜಕಾರಣ ಆಗಬೇಕು.ಹಿಂದು ಸಮಾಜವನ್ನು ಜಾತಿಯನ್ನಾಗಿ ಒಡೆದು ಜಾತಿ ಜಾತಿಗಳಲ್ಲಿ ವಿರಸ ಉಂಟುಮಾಡಿ ಅಧಿಕಾರದ ರಾಜಕಾರಣ ಬೇಳೆ ಬೇಯಿಸಿಕೊಳ್ಳುವುದು ದೇಶ ದ್ರೋಹ.ಇವತ್ತು ರಾಷ್ಟ್ರೀಯತೆಯ ದೀಪ ದೇಶದಾದ್ಯಂತ ಉರಿಯುತ್ತಿದೆ.ಅದರಿಂದ ಸಹಿಸಲಾಗದವರು ಆರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಾತೀಯತೆಯನ್ನು ಕೆರಳಿಸುವುದು, ಮುಸಲ್ಮಾನರ ತುಷ್ಟೀಕರಣದ ಕೆಲಸ ಮಾಡುತ್ತಿದ್ದಾರೆ.ಶ್ರೀ ರಾಮ ರಾಷ್ಟ್ರೀಯ ರಾಜಕಾರಣದ ಮೂರ್ತ ರೂಪ.ರಾಷ್ಟ್ರೀಯತೆ ರಾಜಕಾರಣ ಇಲ್ಲಿ ವ್ಯಕ್ತಿ ಪೂಜೆಯಲ್ಲ ಎಂದು ಸು.ರಾಮಣ್ಣ ಹೇಳಿದರು.
ಜೈ ಶ್ರೀರಾಮ್ ಅನ್ನುವ ಅನಿವಾರ್ಯತೆ ಬಂದೇ ಬರುತ್ತದೆ: ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ವತಿಯಿಂದ ನಡೆದಂತಹ ಶೌರ್ಯ ಆರಾಧನೆ ಉತ್ಸವದಲ್ಲಿ ಲಕ್ಷಂತಾರ ತರುಣ ಜನರು ಭಾಗವಹಿಸಿಲ್ಲ.ಆದರೆ ಭಾಗವಹಿಸಿದ ಒಬ್ಬೊಬ್ಬರಲ್ಲೂ ಲಕ್ಷಾಂತರ ಜನರಲ್ಲಿ ಇರಬೇಕಾದ ಭಾವನೆಯಿರಲಿದೆ.ಯಾಕೆಂದರೆ ಸಜ್ಜನರು ಈ ದೇಶಲ್ಲಿ ಇದ್ದಾರೆ.ಧರ್ಮ ನಿಷ್ಟರೂ ಇದ್ದಾರೆ.ಅವರು ಹೋರಾಟದಲ್ಲಿ ಮುಂದೆ ಬರುವುದಿಲ್ಲ ಯಾಕೆಂದರೆ ಅವರು ರಾಮ ಮತ್ತು ರಾವಣರ ಯುದ್ಧ ನಡೆದಾಗ ದೇವತೆಗಳಿದ್ದಂತೆ.ಕೊನೆಯ ಸಂದರ್ಭ ಶ್ರೀ ರಾಮ್ ಎಂದು ಹೇಳುತ್ತಾರೆ.ಅದೇ ಅನಿರ್ವಾಯತೆ ಈ ದೇಶದಲ್ಲಿ ಬಂದೇ ಬರುತ್ತದೆ.ಇದಕ್ಕೆ ಅನುಮಾನವೇ ಇಲ್ಲ ಎಂದು ಸು.ರಾಮಣ್ಣ ಹೇಳಿದರು.
ನಮ್ಮ ಮನೆಯನ್ನು ಭಾರತ ಮಾತೆಯ ದೇವಾಲಯವನ್ನಾಗಿ ಮಾಡೋಣ: ಶೌರ್ಯದ ಆರಾಧನೆ ಮಾಡುತ್ತಾ ಬಂದಿರುವ ದೇಶ ಭಾರತ.ನಾರಿ ಅಬಲೆ ಅಥವಾ ಭೋಗವಸ್ತು ಎಂದು ಕರೆದಿಲ್ಲ.ನಾರಿಯಲ್ಲಿ ನಾವು ಶಕ್ತಿಯನ್ನು ಕಂಡವರು.ದೇವರು ಕಡಿಮೆ ದೇವತೆಗಳೇ ಹೆಚ್ಚು.ನಾರಿಯ ಮೂಲಕ ಶಕ್ತಿಯ ಆರಾಧನೆ ಮಾಡುವ ದೇಶ ನಮ್ಮದು. ನಾವು ಅಹಿಂಸೆ ಅನುಭವಿಸಿ ಅದರ ನಿರ್ವೀರ್ಯತೆಯಿಂದ ಹೊರ ಬರಬೇಕಾಗಿದೆ. ನಾವು ಶಕ್ತಿಯ ಆರಾಧಕರಾಗಬೇಕು.ಶೌರ್ಯದ ಆರಾಧನೆಯೇ ಭಾರತೀಯ ಸಂಸ್ಕೃತಿ. ನಾವೆಲ್ಲರೂ ನಮ್ಮ ಮನೆಯನ್ನು ಭಾರತ ಮಾತೆಯ ದೇವಾಲಯವನ್ನಾಗಿ ಮಾಡೋಣ. ಮನೆಯಲ್ಲಿ ಶೌರ್ಯದ ಆರಾಧನೆ ಆಗಬೆಕು. ಆ ನಿಟ್ಟಿನಲ್ಲಿ ಇವತ್ತಿನ ಕಾರ್ಯಕ್ರಮ ಸಂಜೀವಿನಿಯಂತೆ ತನ್ನ ಭೂಮಿಕೆಯನ್ನು ನಿರ್ವಹಿಸಲಿ ಎಂದು ಸು ರಾಮಣ್ಣ ಹೇಳಿದರು.
ಹಿಂದು ಸಮಾಜದ ಎಡರುತೊಡರುಗಳು ನಿವಾರಣೆಯಾಗಲಿ: ಹಿಂದು ಶೌರ್ಯ ಜಾಗರಣ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಕಿಶೋರ್ ಬೊಟ್ಯಾಡಿ ಅವರು ಮಾತನಾಡಿ ಬಾಬರನು ನಮ್ಮ ಶ್ರೀ ರಾಮನ ಜನ್ಮಸ್ಥಳದಲ್ಲಿದ್ದ ಶ್ರೀರಾಮಮಂದಿರ ಧ್ವಂಸ ಮಾಡಿ ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡುತ್ತಾನೆ.ಅದಾದ ಬಳಿಕ ಸ್ವಾತಂತ್ರ‍್ಯ ಸಿಗುವ ತನಕ ಸುಮಾರು 420 ವರ್ಷ 26 ಬಾರಿ ಶ್ರೀ ರಾಮನ ಮಂದಿರಕ್ಕಾಗಿ ಯುದ್ಧ ನಡೆಯುತ್ತದೆ. ಸ್ವಾತಂತ್ರ‍್ಯ ನಂತರವೂ ಹೋರಾಟ ನಡೆಯುತ್ತದೆ. ಆದರೆ ಅಂತಿಮವಾಗಿ ಹೋರಾಟದ ಚುಕ್ಕಾಣಿ ಹಿಡಿದದ್ದು ವಿಶ್ವಹಿಂದೂ ಪರಿಷತ್.ಮುಂದೆ ದೇಶಾದ್ಯಂತ ಹೋರಾಟ ನಡೆದಾಗ ಕಟ್ಟಡ ನಿರ್ನಾಮ ಆಯಿತು.ಅದಾದ ಬಳಿಕ ಶ್ರೀರಾಮನ ಮಂದಿರ ನಿರ್ಮಾಣ ಆರಂಭಗೊಂಡಿತ್ತು.ಮುಂದೆ ಒಂದು ವರ್ಷದ ಒಳಗೆ ಶ್ರೀರಾಮನ ಮಂದಿರ ನಾವು ನೋಡಲಿದ್ದೇವೆ. ವಿಶ್ವಹಿಂದೂ ಪರಿಷತ್ ಬಜರಂಗದಳ ಇಡೀ ಹಿಂದು ಸಮಾಜವನ್ನು ಒಗ್ಗೂಡಿಸುವ ಮೂಲಕ ಇನ್ನೊಮ್ಮೆ ಹಿಂದು ಸಮಾಜ ನಿರ್ಮಾಣ ಮಾಡಲು ಹೊರಟಿದೆ.ಈ ಶೌರ್ಯ ಜಾಗರಣ ರಥಯಾತ್ರೆ ಹಿಂದು ಸಮಾಜದ ಎಲ್ಲಾ ಎಡರು ತೊಡರುಗಳನ್ನು ನಿರ್ನಾಮ ಮಾಡಿ ಸಂಘಟಿತ ಶಕ್ತಿಯನ್ನು ಕೊಡಲಿ ಎಂದರು.
ಹಿಂದುಗಳು ಸಂಘಟಿತರಾಗಿ ಕೆಲಸ ಮಾಡಿ: ವಿಶ್ವ ಹಿಂದೂ ಪರಿಷದ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಪುತ್ತೂರಿನಲ್ಲಿ ಹಲವಾರು ವರ್ಷಗಳಲ್ಲಿ ಹಿಂದು ಸಂಘಟನೆಗಾಗಿ ದುಡಿಯುವ ಮೂಲಕ ಅನೇಕ ಕಾರ್ಯಕ್ರಮಗಳು ನಡೆದಿದೆ.ಹಿಂದು ಸಮಾಜೋತ್ಸವ ಸಂದರ್ಭ ಈ ಮೈದಾನ ಸಾಲದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮಾಡಬೇಕಾಗಿ ಬಂತು.50 ವರ್ಷಕ್ಕೂ ಮೊದಲು ವಿಶ್ವಹಿಂದು ಪರಿಷತ್‌ನಲ್ಲಿ ಕೆಲಸ ಮಾಡಿದಾಗ ಅನೇಕ ಸವಾಲುಗಳನ್ನು ಎದೆಗುಂದದೆ ಹೋರಾಟದ ಮೂಲಕ ಎದುರಿಸಿದ್ದೇವೆ. ಮುಂದೆ ಕೂಡಾ ನಾವು ಎದೆಗುಂದದೆ ಹೋರಾಟ ಮಾಡಿ ಜಯಶಾಲಿಗಳಾಗಬೇಕು.ಇವತ್ತು ನಾವು ಸ್ವಲ್ಪ ಎಡವಿದರು ಕೂಡಾ ಮುಂದಕ್ಕೆ ಧೈರ್ಯ ತೆಗೆದುಕೊಂಡು ಹಿಂದುಗಳು ಸಂಘಟಿತರಾಗಿ ಕೆಲಸ ಮಾಡಬೇಕು.ರಾಜಕೀಯ ಯಾವುದೇ ಇರಲಿ ನಾವು ಹಿಂದುಗಳಾಗಿರೋಣ. ಹಿಂದುಗಳಿಗೆ ಕಷ್ಟ ಬಂದಾಗ ಸಹಕಾರ ಕೊಡುವ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಹಿಂದು ಸಮಾಜದ ಸಂಘಟನೆಗೆ ಜಾಗೃತಿಯ ರಥ ಯಾತ್ರೆ: ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಸ್ತ್ರ ಮತ್ತು ಆರಾಧನೆಯ ಮೂಲಕ ಬಂದಿರುವ ಧರ್ಮ ನಮ್ಮದು.ಆಕ್ರಮಣವನ್ನು ಸಹಿಸಿಕೊಂಡು ಬಂದ ಸಮಾಜ ನಮ್ಮದು.ಈ ಆಕ್ರಮಣ ಮಾಡುವ ದುಷ್ಟ ಶಕ್ತಿಗಳಿಗೆ ಎಚ್ಚರಿಕೆ ಕೊಡಲು ಈ ಶೌರ್ಯ ಜಾಗರಣ ರಥಯಾತ್ರೆ, ಶೌರ್ಯದ ಪರಂಪರೆಯನ್ನು ಮತ್ತೆ ಮತ್ತೆ ಎತ್ತಿ ಹಿಡಿಯಬೇಕೆಂಬ ನಿಟ್ಟಿನಲ್ಲಿ ಈ ರಥಯಾತ್ರೆ.ನಾವೆಲ್ಲ ಆಂಜನೇಯರಾಗೋಣ. ಆಂಜನೇಯನ ಸೈನಿಕರಾಗೋಣ. ರಕ್ಕಸತ್ವದ, ಕ್ರೂರತ್ವದ, ಸಮಾಜ ದ್ರೋಹಿಗಳ, ಲವ್ ಜಿಹಾದ್, ಧರ್ಮದ್ರೋಹಿಗಳ ವಿರುದ್ಧ ಹಿಂದು ಸಮಾಜ ಜಾತಿ ಪಕ್ಷ ಬಿಟ್ಟು ಒಂದಾಗಿ ಘರ್ಜಿಸುವ ದಿನಕ್ಕೆ ಇವತ್ತಿನ ಕಾರ್ಯಕ್ರಮ ಜಾಂಬವಂತ ಸ್ವಾಮಿಯ ರೀತಿಯಲ್ಲಿ ಪ್ರೇರಣೆಯಾಗಲಿದೆ ಎಂದರು.
ಗಾನಸಿರಿ ಕಲಾಕೇಂದ್ರದ ಗುರು ಡಾ|ಕಿರಣ್ ಕುಮಾರ್ ಬಳಗದಿಂದ ವೈಯುಕ್ತಿಕ ಗೀತೆ ನಡೆಯಿತು.ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ,ಕಾರ್ಯದರ್ಶಿ ನವೀನ್ ನೆರಿಯ, ಪುತ್ತೂರು ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ, ಉಪ್ಪಿನಂಗಡಿ ಪ್ರಖಂಡ ಸಂಯೋಜಕ ಸಂತೋಷ್, ಲತೇಶ್, ಬೆಳ್ತಂಗಡಿ ಪ್ರಖಂಡ ಸಂಯೋಜಕ ಸಂತೋಷ್ ಅತ್ತಾಜೆ, ಶೌರ್ಯ ಜಾಗರಣ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಸಂಚಾಲಕ ಕೃಷ್ಣಪ್ರಸಾದ್ ಬೆಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶೇಷಪ್ಪ ಬೆಳ್ಳಿಪ್ಪಾಡಿ, ಜನಾರ್ದನ ಬೆಟ್ಟ, ಭಾಸ್ಕರ ಬಲ್ಯಾಯ, ಪ್ರವೀಣ್ ಕಲ್ಲೇಗ, ಪ್ರಜ್ವಲ್ ಕೆ, ಜಯಂತ ಶೆಟ್ಟಿ ಕಂಬಳತ್ತಡ್ಡ, ದಿನೇಶ್ ಪಂಜಿಗ, ಜಗದೀಶ್ ಬನ್ನೂರು, ಅನಿಲ್ ಇರ್ದೆ, ಧನ್‌ರಾಜ್, ಹರೀಶ್ ದೋಳ್ಪಾಡಿ ಅತಿಥಿಗಳನ್ನು ಗೌರವಿಸಿದರು.ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ ಸ್ವಾಗತಿಸಿದರು.ಗ್ರಾಮಾಂತರ ಪ್ರಖಂಡ ಸಂಯೋಜಕ ವಿಶಾಖ್ ಸಸಿಹಿತ್ಲು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.ಸಭೆಯ ಕೊನೆಯಲ್ಲಿ ಕೃಷ್ಣವೇಣಿಪ್ರಸಾದ್ ಮುಳಿಯ ವಂದೇ ಮಾತರಂ ಹಾಡಿದರು.