ಬೆಳಂದೂರಿನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

0

ಕಾಣಿಯೂರು: ಮಾನವನ ಜೀವನ ಅನ್ನುವುದು ಅತನ ಆರೋಗ್ಯದ ಮೇಲೆ ನಿಂತಿದ್ದು ಆರೋಗ್ಯವೇ ಅತನ ಭಾಗ್ಯವಾಗಿದ್ದು ಒಬ್ಬ ಆರೋಗ್ಯವಂತ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು ಅದಕ್ಕೆ ಪೂರಕವಾದ ಕಾರ್ಯಕ್ರಮ ಇದಾಗಿದೆ ಎಂದು ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾರ್ವತಿ ಮರಕ್ಕಡರವರು ಹೇಳಿದರು.

ಅವರು ಗ್ರಾಮ ಪಂಚಾಯತ್ ಬೆಳಂದೂರು ಮತ್ತು ಕಂಪಾನಿಯೋ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಕೆಲೆಂಬಿರಿ ಬೆಳಂದೂರಿನಲ್ಲಿ ನಡೆದ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ.ಕೆ ಮತ್ತು ಮಾಹಿತಿದಾರರಾಗಿ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಕೆ.ಪ್ರಭಾಕರ ಸಾಲ್ಯಾನ್ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ ಅಗಳಿ, ಉಮೇಶ್ವರಿ ಅಗಳಿ,ವಿಠಲ ಗೌಡ ಅಗಳಿ, ಲೋಹಿತಾಶ್ವ ಕೆಡೆಂಜಿಕಟ್ಟ, ಗೌರಿ ಮಾದೋಡಿ, ಕುಸುಮ ಅಂಕಜಾಲು, ಹರಿಣಾಕ್ಷಿ ಬನಾರಿ, ಪ್ರವೀಣ್ ಕೆರೆನಾರು, ಗೀತಾ ಕುವೆತ್ತೋಡಿ,ತೇಜಾಕ್ಷಿ ಕೊಡಂಗೆ, ತಾರಾ ಆನ್ಯಾಡಿ, ಪಂಚಾಯತ್ ಸಿಬ್ಬಂದಿಗಳಾದ ಮಮತಾ, ಗೀತಾ,ಹರ್ಷಿತ್, ಸಂತೋಷ್, ವಿಮಲಾ,ಪ್ರಶಾಂತಿ, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಪಂಚಾಯತ್ ನ ಲೆಕ್ಕ ಪರಿಶೋಧಕರಾದ ಸುನಂದರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here