ಅ.15ರಿಂದ ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂಭ್ರಮ

0

ಅ.22 ಧಾರ್ಮಿಕ ಸಭೆ, ಸನ್ಮಾನ
ಅ.23 ಸಾಮೂಹಿಕ ಚಂಡಿಕಾ ಯಾಗ
ಅ.24 ಅಕ್ಷರಾಭ್ಯಾಸ
ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.15ರಂದು ಪ್ರಾರಂಭಗೊಂಡು ಅ.23ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ, ಸಂಭ್ರಮದಿಂದ ನಡೆಯಲಿದೆ.
ಅ.15ರಂದು ಬೆಳಿಗ್ಗೆ ನಿತ್ಯಪೂಜೆಯ ಬಳಿಕ ನವರಾತ್ರಿ ಉತ್ಸವದ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಲಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ತಯಾರಿಸಲಾಗಿರುವ ಚಿನ್ನದ ಸರವನ್ನು ವಿಶೇಷವಾಗಿ ದೇವಿಗೆ ಸಮರ್ಪಣೆ ನಡೆಯಲಿದೆ. ನಂತರ ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ, ಶ್ರೀಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ಶ್ರೀದುರ್ಗಾ ಭಜನಾ ಮಂಡಳಿ ಕುಂಜೂರುಪಂಜ ಇವರಿಂದ ಭಜನೆ, ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕುಂಜೂರಿನ ಹಿರಿಯ ಅರ್ಚಕ ಹೆಚ್.ಕೇಶವ ಭಟ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಪ್ರತಿದಿನ ನವರಾತ್ರಿಯಲ್ಲಿ…!
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ನಿತ್ಯಪೂಜೆ, ದುರ್ಗಾಪೂಜೆ, ಸಾಮೂಹಿಕ ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನ ನಡೆಯುವ ವಿಶೇಷ ರಂಗಪೂಜೆಯಲ್ಲಿ ಭಕ್ತಾದಿಗಳಿಗೆ ಸೇವೆ ಸಲ್ಲಿಸಬಹುದು.

ಅ.22 ಧಾರ್ಮಿಕ ಸಭೆ, ಸನ್ಮಾನ:
ನವರಾತ್ರಿ ಉತ್ಸವದಲ್ಲಿ ಅ.22ರಂದು ಸಂಜೆ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮಗಳು ನಡೆಯಲಿದ್ದು ವಿವೇಕಾನಂದ ಪದವಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಮೈಸೂರು ವಿಶ್ವವಿದ್ಯಾಲಯದ ಪ್ರೊಫೇಸರ್ ಡಾ. ಚಂದ್ರಶೇಖರ ಎಂ., ಮುಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕೆ ನಾರಾಯಣ ಪೂಜಾರಿ, ಪ್ರಗತಿಪರ ಕೃಷಿಕ ಪ್ರಭಾಕರ ಶೆಟ್ಟಿ ಮಚ್ಚಿಮಲೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗೋವಿಂದ ನಾಯಕ್ ಸಾಮೆತ್ತಡ್ಕ, ವ್ಯವಸ್ಥಾಪನಾ ಸಮಿತಿ ಹಿರಿಯ ಸದಸ್ಯರಾದ ಚಂದಪ್ಪ ಪೂಜಾರಿ ಕುಂಜೂರು, ಮಹಾಲಿಂಗ ನಾಯ್ಕ ಮಚ್ಚಿಮಲೆ, ಪರಿಚಾರಕ ಚಂದ್ರಶೇಖರ ಕುಂಜೂರು, ಹಿರಿಯ ಸ್ವಯಂ ಸೇವಕ ನಾಗಪ್ಪ ಗೌಡ ಮಚ್ಚಿಮಲೆ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
ಅ.೨೩ ಸಾಮೂಹಿಕ ಚಂಡಿಕಾ ಯಾಗ:
ನವರಾತ್ರಿಯಲ್ಲಿ ವಿಶೇಷವಾಗಿ ಅ.23ರಂದು ಬೆಳಿಗ್ಗೆ ಚಂಡಿಕಾ ಯಾಗ ಪ್ರಾರಂಭ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ, ಸಂಜೆ ಆಯುಧ ಪೂಜೆ ನಡೆಯಲಿದೆ. ಅ.24ರ ವಿದ್ಯಾದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ನವರಾತ್ರಿ ಸಂಪನ್ನಗೊಳ್ಳಲಿದೆ.

ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ:
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದು ಅ.15ರಂದು ಚೆನ್ನೈ ಮದ್ರಾಸು ಸಂಸ್ಕೃತ ಕಾಲೇಜಿನ ಸಹಾಯಕ ಉಪನ್ಯಾಸಕ ಡಾ.ಸತ್ಯನಾರಾಯಣ ಎಚ್.ಕೆ ನವರಾತ್ರಿ ವೈಶಿಷ್ಟ್ಯತೆಯ ಕುರಿತು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಬಳಿಕ ಪೆರ್ಲ ಶಿವಾಂಜಲಿ ಕಲಾ ಕೇಂದ್ರ ಇದರ ಸಾಜ, ಪರಿಯಾಲ್ತಡ್ಕ ಶಾಖಾ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ‘ನೃತ್ಯ ಪಲ್ಲವ’ ನಡೆಯಲಿದೆ. ಅ.16ರಂದು ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದವರಿಂದ ‘ರುಕ್ಮಾಂಗದ ಚರಿತ್ರ’ ಎಂಬ ಯಕ್ಷಗಾನ ತಾಳಮದ್ದಳೆ, ಅ.17ರಂದು ಹರಿದಾಸ ದೇವಕೀತನಯ ಕೂಡ್ಲು ಇವರಿಂದ ‘ಪಾರ್ವತಿ ಕಲ್ಯಾಣ’ ಹರಿಕಥಾ ಕಾಲಕ್ಷೇಪ, ಅ.18ರಂದು ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ‘ದ್ವಾದಶಿ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ, ಅ.19ರಂದು ಬಂಗಾರಡ್ಕ ಪ್ರಾರ್ಥನಾ ಮತ್ತು ಆರಾಧನಾ ಸಹೋದರಿಯರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’, ವಿಟ್ಲ ಲಲಿತಾ ಕಲಾ ಸದನದ ನಯನ ಸತ್ಯನಾರಾಯಣ ಶಿಷ್ಯ ವೃಂದದವರಿಂದ ‘ನೃತ್ಯಾರ್ಪಣಾ’ ಶಾಸ್ತ್ರೀಯ ಭರತನಾಟ್ಯ, ಅ.20ರಂದು ನೆಹರುನಗರದ ಗಾನ ಸರಸ್ವತಿ ಸಂಗೀತ ಕಲಾ ಶಾಲೆಯ ವೀಣಾ ರಾಘವೇಂದ್ರ ಶಿಷ್ಯ ವೃಂದದವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’, ನೃತ್ಯೋಪಾಸನಾ ಕಲಾಕೇಂದ್ರದ ಶಾಲಿನಿ ಆತ್ಮಭೂಷನ್ ಬಳಗದವರಿಮದ ‘ನೃತ್ಯೋಹಂ’ ಭರತನಾಟ್ಯ, ಅ.೨೧ರಂದು ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಇವರಿಂದ ‘ಭೂಮಿಂಜಯ’ ಯಕ್ಷಗಾನ ತಾಳಮದ್ದಳೆ, ಅ.22ರಂದು ಬೋಳಂತೂರು ಮಂಚಿ ವಸುಧಾರಾ ಸಾಂಸ್ಕೃತಿಕ ಕಲಾ ಸಂಘ ಇವರಿಂದ ‘ನೃತ್ಯಧಾರಾ” ಹಾಗೂ ಅ.೨೩ರಂದು ಮನಸ್ವಿನಿ ವಿಜಯ ಕುಮಾರ್ ಮೈಸೂರು ಇವರಿಂದ ‘ವಯೋಲಿನ್ ವಾಧನ’ ಮತ್ತು ಡಾ.ದುರ್ಗಾಪರಮೇಶ್ವರಿ ಎಚ್.ಕೆ ಇವರಿಂದ ‘ಸಂಗೀತ ಸಂಜೆ’ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here