ವಿದ್ಯಾರ್ಥಿ ಬಂಟರ ಸಂಘದ ನೇತೃತ್ವದ ಭವಿಷ್ಯ ಕಾರ್ಯಕ್ರಮ- ತರಬೇತಿ ಪಡೆದು ಸೇನೆಗೆ ಆಯ್ಕೆಯಾದ ಸೃಜನ್ ರೈ ಗೆ ಸನ್ಮಾನ

0

ಪುತ್ತೂರು : ಬಂಟರ ಯಾನೆ ನಾಡವರ ಮಾತೃ ಸಂಘ, ತಾಲೂಕು ಬಂಟರ ಸಂಘ, ಮಹಿಳಾ ಹಾಗೂ ಯುವ ಬಂಟರ ಸಂಘದ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ವಿದ್ಯಾರ್ಥಿ ಬಂಟರ ಸಂಘದ ನೇತೃತ್ವದಲ್ಲಿ ವಿದ್ಯಾರ್ಜನೆಯಿಂದ ಉದ್ಯೋಗದೆಡೆಗೆ ಧ್ಯೇಯ ವಾಕ್ಯದೊಂದಿಗೆ ಭವಿಷ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 12 ವಿದ್ಯಾರ್ಥಿಗಳು ಈ ಯೋಜನೆಗೆ ಆಯ್ಕೆಯಾಗಿದ್ದರು. ವಿದ್ಯಾಮಾತಾ ಅಕಾಡಮಿಯಲ್ಲಿ ಇವರಿಗೆ 6 ತಿಂಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲಾಗಿದೆ. ಇದರಲ್ಲಿ ಓರ್ವರಾದ ಸೃಜನ್ ರೈ ಅಗ್ನಿಪಥ್ ಸೇನಾ ನೇಮಕಾತಿಗೆ ಆಯ್ಕೆಯಾಗಿದ್ದಾರೆ. ಇವರನ್ನು ಪುತ್ತೂರು ಬಂಟರ ಸಂಘದ ಚಾವಡಿ ಯಲ್ಲಿ ಸನ್ಮಾನಿಸಲಾಯಿತು. ಇವರಿಗೆ ಈ ಅವಕಾಶ ಸಿಗಲು ತರಬೇತಿ ನೀಡಿದ ವಿದ್ಯಾಮಾತ ಅಕಾಡೆಮಿಯ ಮುಖ್ಯಸ್ಥ ಭಾಗ್ಯೇಶ್ ರೈ ಯವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಯುವ ಬಂಟರ ಸಂಘದ ಅಧ್ಯಕ್ಷ ಪವನ್‌ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿ, ಮಾತನಾಡಿ ನಮ್ಮ ಒಂದು ಸಣ್ಣ ಪ್ರಯತ್ನವಾದ ಭವಿಷ್ಯ ಕಾರ್ಯಕ್ರಮದಲ್ಲಿ ಒಬ್ಬರ ಭವಿಷ್ಯ ರೂಪಿಸಲ್ಪಟ್ಟಿದೆ ಎನ್ನಲು ತುಂಬಾ ಖುಷಿಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.


ವಿದ್ಯಾಮಾತಾ ಅಕಾಡಮಿಯ ಮುಖ್ಯಸ್ಥ ಭಾಗ್ಯೇಶ್ ರೈ ಮಾತನಾಡಿ ಸೃಜನ್ ರೈ ಯವರ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯ ಫಲವಾಗಿ ಈ ಅವಕಾಶ ಲಭಿಸಿದೆ ಎಂದು ಹೇಳಿದರು. ವಿದ್ಯಾರ್ಥಿ ಬಂಟರ ಸಂಘ ನಮಗೆ ಒಂದು ಅವಕಾಶ ನೀಡಿದೆ. ನಮ್ಮಲ್ಲಿ ಕನಿಷ್ಠ ಖರ್ಚಿನಲ್ಲಿ ನಾವು ಈ ಸಹಕಾರ ನೀಡಿದ್ದೇವೆ. ನಮ್ಮ ಊರಿನ ಯುವ ಸಮುದಾಯ ಸರಕಾರಿ,ಅರೆ ಸರಕಾರಿ ಮತ್ತು ಉನ್ನತ ಕಂಪೆನಿಗಳಲ್ಲಿ ಉದ್ಯೋಗ ಪಡೆಯಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿ ಶುಭಹಾರೈಸಿದರು.


ಯುವ ಬಂಟರ ಸಂಘದ ನಿರ್ದೇಶಕ‌ ಬೊಳಿಂಜ ಗುತ್ತು ರವಿಪ್ರಸಾದ್ ಶೆಟ್ಟಿ ಮಾತನಾಡಿ. ಪುತ್ತೂರಿನ ಇತಿಹಾಸದಲ್ಲಿ ವಿದ್ಯಾರ್ಥಿ ಬಂಟರ ಸಂಘ ಒಂದು ವಿಭಿನ್ನ ದೃಷ್ಟಿಕೋನದಲ್ಲಿ ಯೋಚಿಸಿದೆ. ಯುವ ಸಮುದಾಯದ ಭವಿಷ್ಯ ರೂಪಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಇವರ ಪ್ರಯತ್ನಕ್ಕೆ ಕಾವು ಹೇಮನಾಥ ಶೆಟ್ಟಿ ಯವರ ಮೂಲಕ ಬಂಟರ ಯಾನೆ ನಾಡವರ ಮಾತೃ ಸಂಘ, ಮಾತೃ ಸಂಘದ ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈ, ತಾಲೂಕು ಬಂಟರ‌ ಸಂಘದ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವರು ವಿಶೇಷ ಸಹಕಾರ ನೀಡಿದ್ದಾರೆ. ಬಂಟರ ಸಂಘದ ಹಿರಿಯರು ಇವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದರೆ ಇಂತಹ ಕಾರ್ಯಕ್ರಮಗಳು ಇವರಿಂದ ಇನ್ನೂ ನಿರೀಕ್ಷಿಸಬಹುದು. ಇಲ್ಲಿ ಸಂಗ್ರಹವಾಗಿ ಉಳಿದ ಸಂಪೂರ್ಣ ಮೊತ್ತವನ್ನು ಪವನ್ ಶೆಟ್ಟಿ ತಾನೇ ಭರಿಸಿದ್ದಾರೆ. ಇವರನ್ನು ಅ ಭಿನಂದಿಸಲೇಬೇಕು. ತನ್ನ ಈ ಸಣ್ಣ ಪ್ರಾಯದಲ್ಲಿ ಸಮಾಜದ ಉತ್ತಮ ಬೆಳವಣಿಗೆಯನ್ನು ಆಶಿಸುವ ಇಂತಹ ಯುವಕರಿಗೆ ಇನ್ನಷ್ಟು ಬೆಂಬಲ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಯುವ ಬಂಟರ ಸಂಘದ ಸಂಚಾಲಕ ಹರ್ಷಕುಮಾರ್ ರೈ ಯವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಜತೆ ಕಾರ್ಯದರ್ಶಿ ಶುಭ ರೈ, ವಿಭಾ ರೈ, ವಿಕ್ರಮ್ ಆಳ್ವ, ಶರತ್ ಆಳ್ವ ಕೂರೇಲು, ಕಾರ್ತಿಕ್ ರೈ ಬುಳೇರಿಕಟ್ಟೆ, ಅಭಿಷೇಕ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶ್ರೇಷ್ಠಾ ರೈ, ರವಿಚಂದ್ರ ರೈ, ಭಾಸ್ಕರ ರೈ, ಸುರಕ್ಷಿತ್ ರೈ, ಪ್ರದೀಪ್ ರೈ ಮತ್ತಿತರರು ಉಪಸ್ಥಿತರಿದ್ದರು.
ಮನ್ಮಥ ಶೆಟ್ಟಿ ಕಾರ್ಯಕ್ರಮ‌ ನಿರೂಪಿಸಿದರು. ನವೀನ್ ರೈ ಪಂಜಳ ವಂದಿಸಿದರು.

LEAVE A REPLY

Please enter your comment!
Please enter your name here