ಬೆಳ್ಳಾರೆ : ಉದ್ಯೋಗ ಕೊಡುವ ಭರವಸೆ ,ಲಕ್ಷಾಂತರ ಹಣ ಪಡೆದು ವಂಚನೆ – ಪ್ರಕರಣ ದಾಖಲು

0

ಬೆಳ್ಳಾರೆ : ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗ ಕೊಡುವುದಾಗಿ ಹೇಳಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಅಮರಪಡ್ನೂರಿನ ನಿವಾಸಿಯೋರ್ವರಿಗೆ ವಂಚಿಸಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಅಮರಪಡ್ನೂರು ಗ್ರಾಮದ ನಿವಾಸಿ ಯಶ್ವಿನಿ ಕೆ ಬಿ ಎಂಬವರ ದೂರಿನಂತೆ ಇವರಿಗೆ ದಿನಾಂಕ 15.07.2023 ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆಮಾಡಿ ತಾನು Vistara Airlines, Singapore Branch, Devanahalli Bangalore ಎಂಬ ಸಂಸ್ಥೆಯಿಂದ ಕರೆಮಾಡುತ್ತಿದ್ದು, ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಖಾಲಿಯಿದ್ದು, ಈ ಉದ್ಯೋಗದಲ್ಲಿ ಹೆಚ್ಚಿನ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳು ನೀಡುವುದಾಗಿ ತಿಳಿಸಿದ್ದಾರೆ. 

ಅಲ್ಲದೇ ಈ ಸಂಸ್ಥೆಯಲ್ಲಿ ಉದ್ಯೋಗವನ್ನು ನೀಡುವುದಾಗಿ ತಿಳಿಸಿ, ಇವರಿಂದ ಹಂತ ಹಂತವಾಗಿ ವಿವಿಧ ನೆಪಗಳನ್ನು ಹೇಳಿ ಒಟ್ಟು ರೂ 13,00,997 /- ಗಳನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು, ಈವರೆಗೆ ಉದ್ಯೋಗ ನೀಡದೇ ಮೋಸ ಮಾಡಿದ್ದಾರೆ ಎಂದು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಕ್ರ: 67/2023 ಕಲಂ 419,420 ಐಪಿಸಿ ಮತ್ತು ಕಲಂ: 66(ಡಿ) ಐಟಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here