ಅ.15-31: ಮಾಯಿದೆ ದೇವುಸ್ ಚರ್ಚ್, ಆರೋಗ್ಯ ಆಯೋಗ, ಕಂಪಾನಿಯಾ ನೆಮ್ಮದಿ ವೆಲ್‌ನೆಸ್ ಸೆಂಟರ್‌ನಿಂದ 17 ದಿನಗಳ ಉಚಿತ ಬೃಹತ್ ಫೂಟ್ ಪಲ್ಸ್ ಥೆರಪಿ ಶಿಬಿರ

0

ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್, ಚರ್ಚ್‌ನ ಆರೋಗ್ಯ ಆಯೋಗ ಮತ್ತು ಕಂಪಾನಿಯಾ ನೆಮ್ಮದಿ ವೆಲ್‌ನೆಸ್ ಸೆಂಟರ್‌ನಿಂದ ಪುತ್ತೂರಿನಲ್ಲಿ ಪ್ರಥಮ ಬಾರಿಗೆ 17 ದಿನಗಳ ಉಚಿತ ಬೃಹತ್ ಫೂಟ್ ಪಲ್ಸ್ ಥೆರಪಿ ಶಿಬಿರವು ಮಾಯಿದೆ ದೇವುಸ್ ಮಿನಿ ಹಾಲ್‌ನಲ್ಲಿ ಅ.15 ರಿಂದ 31ರ ವರೆಗೆ ಪೂರ್ವಾಹ್ನದಿಂದ ಅಪರಾಹ್ನದವರೆಗೆ ನಡೆಯಲಿದೆ.
ಶಿಬಿರವನ್ನು ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್‌ರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಕಾರ್ಯದರ್ಶಿ ಎವ್ಲಿನ್ ಡಿ’ಸೋಜ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ, ಮಾಯಿದೆ ದೇವುಸ್ ಚರ್ಚ್‌ನ 21 ಆಯೋಗಗಳ ಸಂಚಾಲಕ ಜೋನ್ ಡಿ’ಸೋಜ, ಮಾಯಿದೆ ದೇವುಸ್ ಚರ್ಚ್‌ನ ಆರೋಗ್ಯ ಆಯೋಗಗಳ ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಪಿರೇರಾರವರು ಭಾಗವಹಿಸಲಿದ್ದಾರೆ.

ಫೂಟ್ ಪಲ್ಸ್ ಥೆರಪಿ ಆರೋಗ್ಯದೆಡೆಗೆ ಒಂದು ಹೆಜ್ಜೆ:
ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗಿದ್ದು ವೈದ್ಯಕೀಯವಾಗಿ ಪ್ರಾಮಾಣಿಕವಾಗಿದೆ. ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲಿನ ಸಮಸ್ಯೆಗಳನ್ನು ಔಷಧಿರಹಿತವಾಗಿ, ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ. 30 ನಿಮಿಷ TENS ಮತ್ತು EMS ಥೆರಪಿಯಿಂದ ನಮ್ಮ ದೇಹದಲ್ಲಿ 5ಕಿ.ಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಸಹಕಾರಿಯಾಗುತ್ತದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶದಾದ್ಯಂತ 350 ಶಾಖೆಗಳನ್ನು ಹೊಂದಿದ್ದು, 10 ಲಕ್ಷಕ್ಕಿಂತ ಹೆಚ್ಚಿನ ಜನರು ಪರಿಹಾರ ಕಂಡುಕೊಂಡಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ. ಬನ್ನಿ ಥೆರಪಿ ಶಿಬಿರಕ್ಕೆ ನಾವು ನೀವು ಸೇರಿ ಆರೋಗ್ಯವಂತರಾಗೋಣ. ಹೆಚ್ಚಿನ ಮಾಹಿತಿಗೆ 9164298414, 7760764165 ನಂಬರನ್ನು ಸಂಪರ್ಕಿಸಬಹುದು ಎಂದು ನೆಮ್ಮದಿ ವೆಲ್‌ನೆಸ್ ಸೆಂಟರಿನ ಕೆ.ಪ್ರಭಾಕರ ಸಾಲ್ಯಾನ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ..
*ಮಧುಮೇಹ *ಅಧಿಕ ರಕ್ತದೊತ್ತಡ *ಸಂಧಿವಾತ *ವೆರಿಕೋಸ್ ವೇನ್ *ಸ್ನಾಯು ಸೆಳೆತ *ಊತ *ಪಾರ್ಕಿನ್‌ಸನ್ *ಸಯಾಟಿಕಾ *ಸರ್ವಿಕಲ್ ಸ್ಪಾಂಡಿಲೈಟಿಸ್
*ನಿದ್ರಾಹೀನತೆ *ಥೈರಾಯಿಡ್ *ಪಾರ್ಶ್ವವಾಯು *ಬೆನ್ನುನೋವು *ಬೊಜ್ಜು ನಿವಾರಣೆ*ಬಿ.ಪಿ/ಶುಗರ್, ಕುತ್ತಿಗೆ ನೋವು, ಸೊರಿಯಾಸಿಸ್ *ಸಕ್ಕರೆ ಕಾಯಿಲೆಯಿಂದ ಬರುವ ಪಾದದ ಉರಿ*ಮಾಂಸಖಂಡಗಳ ಸೆಳೆತದಿಂದ ಮುಕ್ತಿ ಹಾಗೂ ಪರಿಚಲನೆ ಮತ್ತು ಇನ್ನಿತರ ಎಲ್ಲಾ ಕಾಯಿಲೆಗಳಿಗೆ ಪರಿಹಾರ.

LEAVE A REPLY

Please enter your comment!
Please enter your name here