ಪುತ್ತೂರು: ನಾನೂ ಕೂಡ ರೆನಾಲ್ಟ್ ಕೈಗಾರ್ ಗ್ರಾಹಕನಾಗಿದ್ದೇನೆ. ಇಲ್ಲಿ ಬರುವಾಗಲೇ ಫ್ಯಾಮಿಲಿ ವಾತಾವರಣವಿದ್ದು, ಫ್ಯಾಮಿಲಿ ಮನೆಗೆ ಹೋದಂತಹ ಅನುಭವವಾಗುತ್ತದೆ ಜೊತೆಗೆ ಹ್ಯೂಮನ್ ರಿಲೇಷನ್ ಶಿಪ್ ಕೂಡ ತುಂಬಾನೇ ಮುಖ್ಯವೆಂದೂ ನೆಲ್ಯಾಡಿ ಸಂತ ಜಾರ್ಜ್ ಕಾಲೇಜ್ ಪ್ರಾಧ್ಯಾಪಕ ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಇಂದು (ಅ.14) ರೆನಾಲ್ಟ್ ಅಯೋಜಿಸಿದ್ದ ಒಂದು ದಿನದ ವಿನಿಮಯ, ಲೋನ್ ಮೇಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ, ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ, ಮಾತನಾಡಿದ ಅವರು, ಕಾರಿನ ತಂತ್ರಜ್ಞಾನ, ಡ್ರೈವಿಂಗ್ ಕಂಫರ್ಟೆಬಲ್ ಮತ್ತು ಲಕ್ಸುರಿಯಸ್ ಫೀಚರ್ಸ್ ಜೊತೆಗೆ ಸೇವೆಯೂ ಕೂಡ ಅತ್ಯುತ್ತಮವಾಗಿದ್ದು, ತಿರುವುಗಳಲ್ಲೂ ಕೂಡ ಮುಂಬರುವ ವಾಹನಗಳು ಸ್ಪಷ್ಟವಾಗಿ ಗೋಚರಿಸುವಂತಹ ವ್ಯವಸ್ಥೆ ಅಳವಡಿಸಲಾಗಿದೆ. ಸಂಸ್ಥೆಯ ಅದ್ಭುತ ಸೇವೆಗೆ ಇನ್ನಷ್ಟೂ ಗ್ರಾಹಕರು ಸೇರುವಂತಾಗಲಿ ಎಂದು ಅವರು ಹಾರೈಸಿದರು.
ಗುರುಪ್ರಸಾದ್ ಬಿಲ್ಡಿಂಗ್ ಇದರ ಮಾಲೀಕ ವಾಸುದೇವ ಆಚಾರ್ಯ, ಮಂಗಳೂರು ಎನಾಕ್ ರೆನಾಲ್ಟ್ ಇದರ ಮಾರ್ಕೆಟಿಂಗ್ ವಿಭಾಗದ ಮಹೇಶ್, ರೆನಾಲ್ಟ್ ಪುತ್ತೂರು ಸಿಬ್ಬಂದಿಗಳಾದ ಮಮತಾ, ಚರಿತಾ ಹಾಗೂ ನಮೃತಾ ಉಪಸ್ಥಿತರಿದ್ದರು. ನವರಾತ್ರಿ ಸಲುವಾಗಿ ಕಾರುಗಳ ಖರೀದಿಗೆ ಕ್ಯಾಶ್ ಡಿಸ್ಕೌಂಟ್ ಸೌಲಭ್ಯ, ನೂರರಷ್ಟೂ ಸಾಲ ಸೌಲಭ್ಯ ವ್ಯವಸ್ಥೆ ಮಾತ್ರವಲ್ಲದೇ, ಕಾರು ಪ್ರಿಯರು ಈ ವಿನಿಮಯ ಮೇಳ ಮೂಲಕ ವಿನೂತನ ರೆನಾಲ್ಟ್ ಕಾರುಗಳೊಡನೆ ತಮ್ಮ ಹಳೇಯ ಮಾದರಿ ಕಾರುಗಳನ್ನು ಅತ್ಯುತ್ತಮ ಬೆಲೆಯೊಂದಿಗೆ ವಿನಿಮಯ ಮಾಡುವ ಅವಕಾಶ, ಸುಲಭ, ಸರಳ ಫೈನಾನ್ಸ್ ಹಾಗೂ ಅತೀ ಕಡಿಮೆ ಬಡ್ಡಿ ದರದೊಂದಿಗೆ ನೂತನ ಕಾರು ಖರೀದಿಗೂ ಅವಕಾಶವಿದ್ದು ಪ್ರತಿ ಮಾದರಿ ಕಾರಿನಲ್ಲೂ ಕೂಡ ಉಳಿತಾಯಕ್ಕೆ ಸಂಸ್ಥೆ ಅವಕಾಶ ಒದಗಿಸಿದೆ. ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 70220 02555 ಕರೆ ಮಾಡುವಂತೆ ವಿನಂತಿಸಲಾಗಿದೆ.