ಪುತ್ತೂರು: ಉಪ್ಪಿನಂಗಡಿ ಹೋಬಳಿ ಆರ್.ಐ ಕಛೇರಿ ಅನೇಕ ಗ್ರಾಮಗಳನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದ್ದರು, ಇದು ಸಮಸ್ಯೆಗಳ ಆಗರವಾದ ಒಂದು ಕಛೇರಿಯಾಗಿದೆ ಎಂದು ಆರೋಪಿಸಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪುತ್ತೂರು ಶಾಸಕರಿಗೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸಲು ಕೋರಲಾಗಿದೆ.
ಈ ಚಿತ್ರದ ಕಟ್ಟಡದ ಒಂದು ಕೊಠಡಿಯಲ್ಲಿ ಈ ಕಛೇರಿ ಕಾರ್ಯ ನಿರ್ವಹಿಸುತ್ತದೆ. ಇದರ ಒಳಗಡೆ 2 ಜನ ಕುಳಿತು ಕೊಳ್ಳುವುದು ಕಷ್ಟವಿದೆ, ಹೊರಗಡೆ ಮಳೆಗಾಲದಲ್ಲಿ ಕೊಡೆ ಹಿಡಿದು ನಿಂತುಕೊಂಡು ಜನ ಆರ್.ಐ ಯನ್ನು ಕಾಯಬೇಕಾಗಿದೆ. ಆರ್.ಐ ಯಾವಾಗ ಬರುತ್ತಾರೆ ಎನ್ನುವ ಸ್ಪಷ್ಟ ಮಾಹಿತಿ ಯಾರಲ್ಲಿ ಕೇಳಿದರೂ ಸಿಗುವುದಿಲ್ಲ. 10 ಗಂಟೆಗೆ ಬರುತ್ತೇನೆ ನಿಲ್ಲಿ ಎಂದು ಹೇಳಿದ ಆರ್.ಐ 12 ಗಂಟೆಗೆ ಬರುತ್ತಾರೆ. ದೂರವಾಣಿ ಕರೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಈ ಕಛೇರಿಯಲ್ಲಿ ವಾಹನ ಪಾರ್ಕಿಂಗ್ ಸ್ಥಳ ಕಾಲಿ ಇದ್ದರೂ ಗೇಟುಗಳಿಗೆ ಬೀಗ ಹಾಕಲಾಗಿರುತ್ತದೆ. ಹೊರಗೆ ಬಸ್ ನಿಲ್ದಾಣ ಆದ್ದರಿಂದ ಪಾರ್ಕಿಂಗ್ ಮಾಡುವ ಹಾಗಿಲ್ಲ ಎಲ್ಲೆಲ್ಲೊ ವಾಹನ ಪಾರ್ಕಿಂಗ್ ಮಾಡಿ ಈ ಕಛೇರಿಗೆ ಬಂದರೂ ಇಲ್ಲಿ ಕೆಲಸಗಳು ಆಗುವುದಿಲ್ಲ. 15. ಕಿ.ಮಿ ದೂರದಿಂದಲೂ ಜನ ಈ ಕಛೇರಿಗೆ ಬರಬೇಕಾಗುತ್ತದೆ . ದೂರವಾಣಿಯಲ್ಲಿ ಮುಗಿಸಬಹುದಾದ ಕೆಲಸಗಳಿಗೆ ಕೂಡ ಸ್ಪಂದನೆ ಇಲ್ಲದ ಕಾರಣ ಜನ ಕಛೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಕಟ್ಟಡಗಳ ನವೀಕರಣ ತೀರಾ ಅವಶ್ಯಕವಿರುತ್ತದೆ. ಆದ್ದರಿಂದ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.