ಬೆಟ್ಟಂಪಾಡಿ: ಕಕ್ಕೂರು ಒಕ್ಕೂಟದ ತ್ರೈಮಾಸಿಕ ಸಭೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಕಕ್ಕೂರು ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಅಧ್ಯಕ್ಷ ಶಂಕರ ಗುಂಡ್ಯಡ್ಕ ಇವರ ಅಧ್ಯಕ್ಷತೆಯಲ್ಲಿ ಅ.15 ರಂದು ಪ್ರಿಯದರ್ಶಿನಿ ಶಾಲೆಯಲ್ಲಿ ನಡೆಯಿತು.ತಾಲೂಕು ಕೃಷಿ ಅಧಿಕಾರಿ ಉಮೇಶ್ ಮಾತನಾಡಿ ಸಭೆಗೆ ಹೆಚ್ಚಿನ ಸಂಘಗಳು ಗೈರು ಹಾಜರಾಗಿರುವುದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಂಘಗಳು ಸಭೆಗೆ ಗೈರು ಹಾಜರಾಗಲು ಕಾರಣ ಏನು? ಈ ಬಗ್ಗೆ ಆಯಾ ವ್ಯಾಪ್ತಿಯ ಪದಾಧಿಕಾರಿಗಳು ಸಂಘಕ್ಕೆ ಭೇಟಿ ನೀಡಿ ವಿಮರ್ಶಿಸುವಂತೆ ತಿಳಿಸಿದರು.ಮನೆಗೊಂದು ಮಾಸ ಪತ್ರಿಕೆ ನಿರಂತರ ಮಾಡುವ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಸಾಲ ತೆಗೆದವರು ಮರುಪಾವತಿ ಚೀಟಿ ಬರೆಯುವುದರ ಬಗ್ಗೆ, ಬದಲಿ ಇಂಧನ ಕಾರ್ಯಕ್ರಮಗಳ ಬಗ್ಗೆ ಮತ್ತು ಕೃಷಿ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಸಂಘಗಳಲ್ಲಿ ಕಡಿಮೆ ಸದಸ್ಯರು ಇರುವ ಸಂಘಕ್ಕೆ ಸದಸ್ಯರ ಸೇರ್ಪಡೆ ಬಗ್ಗೆ ತಿಳಿಸಲಾಯಿತು.ಯೋಜನೆಯ ಕಾರ್ಯಕ್ರಮಗಳಾದ ಜನಮಂಗಲ, ಸುಜ್ಞಾನ ನಿಧಿ ಹಾಗೂ ಸಿ.ಎಸ್.ಸಿ ಕೇಂದ್ರದಲ್ಲಿ ಇರುವ ಕಾರ್ಯಕ್ರಮಗಳ ಬಗ್ಗೆ ಸೇವಾ ಪ್ರತಿನಿಧಿ ಪದ್ಮಾವತಿ. ಡಿ ಮಾಹಿತಿ ನೀಡಿದರು.

       ಪಿಂಗಾರ ತಂಡದ ಲಿಂಗಪ್ಪ ಸ್ವಾಗತಿಸಿ, ಒಕ್ಕೂಟದ ಕಾರ್ಯದರ್ಶಿ ಕವಿತಾ ಒಕ್ಕೂಟದ ವರದಿ ವಾಚಿಸಿದರು. ಕೇದಗೆ ತಂಡದ ಹೇಮನಾಥ ವಂದಿಸಿದರು. ಒಕ್ಕೂಟದ ಜತೆ ಕಾರ್ಯದರ್ಶಿ ವಾಣಿಶ್ರೀ ಉಪಸ್ಥಿತರಿದ್ದರು. ಸಂಘದ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here