ಪುತ್ತೂರು: ಜಗತ್ತಿನಲ್ಲಿ ಶಾಂತಿ, ಸಮಾಧಾನ, ಸೌಹಾರ್ದತೆ, ಪರಸ್ಪರ ಪ್ರೀತಿ ತೋರುವುದೇ ಪ್ರವಾದಿಯವರ ಸಂದೇಶ. ದೇಶ ದೇಶಗಳ ಮಧ್ಯೆ, ರಾಜ್ಯ ರಾಜ್ಯಗಳ ಮಧ್ಯೆ ನೆರೆಕರೆಯವರೊಂದಿಗೆ ಪರಸ್ಪರ ಸ್ನೇಹ , ಪ್ರೀತಿಯನ್ನು ಸಾರುವುದು, ಅನ್ಯೋನ್ಯತೆಯನ್ನು ಬೆಳೆಸುವುದು ಲೋಕ ಪ್ರವಾದಿ ಮುಹಮ್ಮದ್ ಮುಸ್ತಫ (ಸ. ಅ) ರವರ ಸಂದೇಶವಾಗಿದೆ. ನಮ್ಮ ಜೀವನದಲ್ಲಿ ಪ್ರವಾದಿ ಜೀವನವನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕ ಎನಿಸಲಿದೆ ಎಂದು ಸತ್ತಾರ್ ಕೌಸರಿ ಹೇಳಿದರು.
ತಿಂಗಳಾಡಿ ಜಿಸ್ತಿಯಾ ಮದ್ರಸದಲ್ಲಿ ನಡೆದ ಮೀಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಅವರು ಸಂದೇಶ ಭಾಷಣ ಮಾಡಿದರು.
ಮದ್ರಸ ಸಮಿತಿ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು. ತ್ಯಾಗರಾಜೆ ಖತೀಬ್ ನಾಸಿರ್ ಫೈಝಿ ಉದ್ಘಾಟಿಸಿದರು. ಸಭೆಯಲ್ಲಿ ಮದ್ರಸ ಸಮಿತಿ ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್, ಉಪಾದ್ಯಕ್ಷ ಮಹಮ್ಮದ್ ಕುಂಞಿ, ಕಾರ್ಯದರ್ಶಿ ಅಬ್ದುಲ್ಲ ಪಟ್ಟೆ, ಮದ್ರಸ ಅಧ್ಯಾಪಕ ಇಸ್ಮಾಯಿಲ್. ಕೌಸರಿ, ಕಾರ್ಯದರ್ಶಿ ಇಬ್ರಾಹಿಂ ಹಾಜಿ, ಕೋಶಾಧಿಕಾರಿ ಹಮೀದ್ ದರ್ಬೆ, ಉದ್ಯಮಿ ಪಿ.ಕೆ ಮಹಮ್ಮದ್, ಯುವ ಉದ್ಯಮಿ ನೌಫಲ್ ಅಜ್ಜಿಕಲ್ಲು, ಶರೀಫ್ ತ್ಯಾಗರಾಜೆ, ತಿಂಗಳಾಡಿ ಮಸೀದಿ ಅಧ್ಯಕ್ಷ ಸಿದ್ದೀಕ್, ಮದ್ರಸ ಸಮಿತಿ ಪದಾಧಿಕಾರಿಗಳಾದ ರಝಾಕ್ ದರ್ಬೆ, ಶಕೀಲ್ ಬೇರಿಕೆ, ಹಾರಿಸ್ ಬೋಳೋಡಿ, ಲತೀಫ್ ಅಂಙತ್ತಡ್ಕ, ಲತೀಫ್ ಆದ್ರೋಡಿ, ಹಾರಿಸ್ ತೋಟ ಹಾಗೂ ಇಸ್ಮಾಯಿಲ್, ಸುಫಿಯಾನ್, ಹನೀಫ್ ಪಟ್ಟೆ ಉಪಸ್ಥಿತರಿದ್ದರು.
ಮದ್ರಸ ವಿದ್ಯಾರ್ಥಿಗಳಿಂದ ಕಲಾ ಸಾಹಿತ್ಯ ಕಾರ್ಯಕ್ರಮ ಹಾಗೂ ಕೆ.ಐ.ಸಿ ವಿದ್ಯಾರ್ಥಿಗಳಿಂದ ಬುರ್ದಾ ಕಾರ್ಯಕ್ರಮ ನಡೆಯಿತು. ಕೆ.ಐ.ಸಿ ವಿದ್ಯಾರ್ಥಿ ಕಾರ್ಯಕ್ರಮ ನಿರೂಪಿಸಿದರು.