ಸೌದಿ ಅರೇಬಿಯಾದಲ್ಲಿ ತುಳುನಾಡು ಪ್ರೀಮಿಯರ್ ಲೀಗ್ ಸೀಸನ್-3:ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್

0

ಪುತ್ತೂರು: ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸಿಟಿ ಫ್ರೆಂಡ್ಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಮತ್ತು ತುಳುನಾಡು ಕ್ರಿಕೆಟ್ ಅಸೋಸಿಯೇಷನ್ ಜಿದ್ದಾ ಇದರ ವತಿಯಿಂದ ತುಳುನಾಡು ಪ್ರೀಮಿಯರ್ ಲೀಗ್-ಸೀಸನ್ 3 ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ‘ಹಳ್ಳಿ ಹುಡುಗ್ರು ಪ್ಯಾಟೆ ಕಪ್’ ಫೈನಲ್ ಕ್ರಿಕೆಟ್ ಪಂದ್ಯಾಟದಲ್ಲಿ ಶರಫಿಯ ವಾರಿಯರ್ಸ್ ಚಾಂಪಿಯನ್ ಆಗಿ ಮೂಡಿ ಬಂತು.


ಬಿ ಬಾಯ್ಸ್ ಅಲೆಕ್ಕಳ ರನ್ನರ‍್ಸ್ ಸ್ಥಾನ ಪಡೆದುಕೊಂಡಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಇರ್ಷಾದ್ ತಾಯಿಫ್ ಪಡೆದುಕೊಂಡರೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಇರ್ಷಾದ್ ತಾಯಿಫ್ ಪಡೆದುಕೊಂಡರು. ಉತ್ತಮ ದಾಂಡಿಗ ಪ್ರಶಸ್ತಿಯನ್ನು ಇರ್ಷಾದ್ ತಾಯಿಫ್ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ತನ್ವೀರ್ ಕುಲಶೇಖರ್ ಪಡೆದುಕೊಂಡರು.
ಲೆಜೆಂಡ್ ಟ್ರೋಫಿ ಫೈನಲ್‌ನಲ್ಲಿ ಕೇರಳ ಲೆಜೆಂಡ್ಸ್ ಚಾಂಪಿಯನ್ ಆಯಿತು. ರನ್ನರ್ಸ್ ಸ್ಥಾನ ಹೈದರಾಬಾದ್ ಲೆಜೆಂಡ್ಸ್ ಪಾಲಾಯಿತು.
ಫೈನಲ್ ಪಂದ್ಯ ಶ್ರೇಷ್ಠ ಫಿರೋಜ್ ಕೇರಳ, ಸರಣಿ ಶ್ರೇಷ್ಠ ಸಾಜಿದ್ ಹೈದರಾಬಾದ್, ಉತ್ತಮ ದಾಂಡಿಗ ಮುಷ್ತಾಕ್ ಕೇರಳ ಹಾಗೂ ಉತ್ತಮ ಎಸೆತಗಾರ ಫಿರೋಜ್ ಕೇರಳ ಪಡೆದುಕೊಂಡರು.

ತುಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಸನ್ಮೂನ್ ವಾಮಂಜೂರು ಚಾಂಪಿಯನ್ ಆಗಿ ಮೂಡಿ ಬಂತು.ರನ್ನರ್ಸ್ ಸ್ಥಾನ ನಝರ್ ಗೈಸ್ ಜಿದ್ದಾ ಪಡೆದುಕೊಂಡಿತು. ಫೈನಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಶಫೀಕ್ ಆರ್ಲಪದವು ಪಡೆದುಕೊಂರು.ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಶಫೀಕ್ ಆರ್ಲಪದವು, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಇಫ್ರಾಜ್ ಬೆಳುವಾಯಿ ಹಾಗೂ
ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಆದಿಲ್ ಮಲ್ಪೆ ಪಡೆದುಕೊಂಡರು.

ವೇದಿಕೆಯಲ್ಲಿ ಶಾಹುಲ್ ಬೂಪ, ಜಾವೇದ್ ಮಿಯಾಂದಾದ್, ಶಂಸು ಉಚ್ಚಿಲ, ಮೊಹ್ಸಿನ್ ವಾಮಂಜೂರು, ಅಝಿಝ್, ಸಿಬ್ಬತುಲ್ಲಾ, ಶಾಕಿರ್ ನೆಲ್ಯಾಡಿ, ಬಶೀರ್ ಕಾರ್ಜಲ್, ನವಾಝ್ ಮಂಗಳಪೇಟೆ, ರಝಾಕ್ ಸಾಲ್ಮರ, ಸಲೀಂ ನಂದಾವರ, ಶಂಸು ಮ್ಯಾಕ್ಸ್ ಕ್ರಿಕೆಟ್ ಕ್ಲಬ್, ಬಾವಾಕ ಶರಫಿಯ, ಅಝೀಝ್, ಸಾಜಿದ್ ಮೋನು, ಇರ್ಷಾದ್ ಫ್ರೆಂಡ್ಸ್ ಮಕ್ಕಾ, ಇರ್ಷಾದ್ ಸಿಕ್ಸ್ ಡಾಟ್ಸ್, ಯಾಸೀನ್ ಉಳ್ಳಾಲ ಉಪಸ್ಥಿತರಿದ್ದರು.

ಪಂದ್ಯಾಕೂಟದ ಆಯೋಜಕರಾದ ಸಿನಾನ್ ಪೆರ್ನೆ, ನೌಶಾದ್ ಮೊಟ್ಟೆತ್ತಡ್ಕ, ತಂಝಿಲ್ ವಾಮಂಜೂರು, ಹುರೈಸ್ ಬಪ್ಪಳಿಗೆ, ಇಫ್ರಾಜ್ ಬೆಳುವಾಯಿ ಭಾಗವಹಿಸಿದವರನ್ನು ಸ್ವಾಗತಿಸಿದರು.ಅಮರ್ ಅಕ್ಬರ್ ಅಂತೋನಿ ಇದರ ಸ್ಥಾಪಕರಾದ ರಝಾಕ್ ಬಿ ಎಚ್ ಬಪ್ಪಳಿಗೆ ಅವರು ಪಂದ್ಯಾಕೂಟಕ್ಕೆ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದರು. ಟಿಪಿಎಲ್ ಸೀಸನ್ 3 ಇದರ ಸಮವಸ್ತ್ರವನ್ನು ಫಯಾಜ್ ಸುದೀರ್ ರೆಂಟಲ್‌ರವರು ಉಡುಗೊರೆಯಾಗಿ ನೀಡಿದರು.

LEAVE A REPLY

Please enter your comment!
Please enter your name here