ಸುಬ್ಬಣ್ಣ ನಾಯ್ಕ್ ಮಾಲೆತ್ತೋಡಿ ಕಾಣೆ

0

ಪುತ್ತೂರು: ಪೆರ್ಲಂಪ್ಪಾಡಿ ಸಮೀಪದ ಮಾಲೆತ್ತೋಡಿ ಎಂಬಲ್ಲಿ ವೃದ್ಧರೋರ್ವರು ಅ.16 ರಿಂದ ಕಾಣೆಯಾಗಿದ್ದು, ಮನೆಯವರು ಹುಡುಕಾಟ ನಡೆಸುತ್ತಿದ್ದಾರೆ.ಸುಮಾರು 85 ವರ್ಷ ವಯಸ್ಸಿನ ಸುಬ್ಬಣ್ಣ ನಾಯ್ಕ್ ಮಾಲೆತ್ತೋಡಿ ಎಂಬವರು ಅ. 16ರಂದು ಬೆಳಿಗ್ಗೆ ಸುಮಾರು 10.00 ಗಂಟೆಗೆ ಮನೆಯಿಂದ ಕಟ್ಟಿಗೆ ತರುವುದಾಗಿ ಮನೆಯವರಲ್ಲಿ ತಿಳಿಸಿ ಹೋಗಿರುತ್ತಾರೆ.
ನೆನಪಿನ ಶಕ್ತಿ ಕಳೆದುಕೊಂಡಿರುವ ಇವರು ಮನೆಯಿಂದ ತೆರಳುವಾಗ ಸೌದೆಗಾಗಿ ಕತ್ತಿ ಹಿಡಿದು ತೆರಳಿದ್ದು,ಪಂಚೆ, ಶಾಲು ಧರಿಸಿದ್ದಾರೆ. ಬಿಳಿ ಗಡ್ಡ, ಬಿಳಿ ಕೂದಲು ಇದ್ದು ಇವರು ಎಲ್ಲಿ ಯಾದರೂ ಕಂಡು ಬಂದಲ್ಲಿ ದಯವಿಟ್ಟು ತಿಳಿಸ ಬೇಕೆಂದು ಅವರ ಮನೆಯವರು ವಿನಂತಿಸಿದ್ದಾರೆ ಅಥವಾ ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.
8277167263
6362201127
9591367315



LEAVE A REPLY

Please enter your comment!
Please enter your name here