ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಟ್ಲ ಹಾಗೂ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ಸಾಕು ನಾಯಿಗಳಿಗೆ ಉಚಿತ ಹುಚ್ಚು ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತ್ತಾರ್ ರವರು ಚಾಲನೆ ನೀಡಿದರು.
ಪಂಚಾಯತ್ ಉಪಾಧ್ಯಕ್ಷರಾದ ರೋಹಣಿ ಡಿ, ಪಂಚಾಯತ್ ಸದಸ್ಯರಾದ ಚಂದ್ರಾವತಿ, ಮಹಾಬಲೇಶ್ವರ ಭಟ್, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಟ್ಲ ಇದರ ಮುಖ್ಯ ಪಶು ವೈಧ್ಯಾಧಿಕಾರಿ ಡಾ. ಪರಮೇಶ್ವರ ನಾಯ್ಕ, ಜಾನುವಾರು ಅಧಿಕಾರಿ ಈಶ್ವರ ಭಟ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಮಂದಾರ ಜೈನ್ ಹಾಗೂ ರಮೇಶ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ವ್ಯಾಪ್ತಿಯ 10 ಕೇಂದ್ರಗಳಲ್ಲಿ ಹುಚ್ಚು ನಿರೋಧಕ ಚುಚ್ಚುಮದ್ದು ನೀಡಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಯ ಕೆ. ರವರು ಸ್ವಾಗತಿಸಿ, ವಂದಿಸಿದರು.