34ನೇ ದಕ್ಷಿಣ ವಲಯ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌-ಫಿಲೋಮಿನಾದ ವರ್ಷಾ, ಆದರ್ಶ್ ಶೆಟ್ಟಿರವರಿಗೆ ಬೆಳ್ಳಿ ಪದಕ

0

ಪುತ್ತೂರು: ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ನವದೆಹಲಿ ಇದರ ವತಿಯಿಂದ ತೆಲಂಗಾಣದ ವಾರಂಗಲ್‌ನ ಹನುಮಕೊಂಡದಲ್ಲಿ ಅ.15 ರಿಂದಸ 17ರ ವರೆಗೆ ಜರಗಿದ ಏಳು ರಾಜ್ಯಗಳ 34ನೇ ದಕ್ಷಿಣ ವಲಯ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2023 ಇದರಲ್ಲಿ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೋರ್ವರು ಭಾಗವಹಿಸಿ ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ.


ಫಿಲೋಮಿನಾ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿ ವರ್ಷಾರವರು ಹ್ಯಾಮರ್ ತ್ರೋ ವಿಭಾಗದಲ್ಲಿ ಹಾಗೂ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಆದರ್ಶ್ ಶೆಟ್ಟಿರವರು ಹೈಜಂಪ್‌ನಲ್ಲಿ ಈರ್ವರೂ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿರುತ್ತಾರೆ. ವರ್ಷಾರವರು ದರ್ಬೆ ಪಾಂಗ್ಲಾಯಿ ನಿವಾಸಿ ಸುಂದರ ಗೌಡ ಹಾಗೂ ವಾರಿಜ ಗೌಡರವರು ಪುತ್ರಿ. ಆದರ್ಶ್ ಶೆಟ್ಟಿರವರು ನೆಲ್ಯಾಡಿ ನಿವಾಸಿ ರತ್ನಾಕರ್ ಶೆಟ್ಟಿ ಹಾಗೂ ಹೇಮಲತಾ ಆರ್.ಶೆಟ್ಟಿರವರ ಪುತ್ರ. ಈರ್ವರು ವಿದ್ಯಾರ್ಥಿಗಳ ಸಾಧನೆಗೆ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ ಹಾಗೂ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಅಭಿನಂದನೆ ಸಲ್ಲಿಸಿರುತ್ತಾರೆ ಎಂದು ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಹಾಗೂ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here