ಉಪ್ಪಿನಂಗಡಿ: ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಎರಡನೇ ದಿನದ “ಶೈಕ್ಷಣಿಕ ಕಾರ್ಯಕ್ರಮ” ಅ. 17ರಂದು ಸ.ಉ.ಹಿ.ಪ್ರಾಥಮಿಕ ಶಾಲೆ ಕೆಮ್ಮಾರದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ಎಸ್ ” ಶಿಬಿರದ ಕಲಿಕೆ ಮತ್ತು ಅನುಷ್ಠಾನ” ಎಂಬ ವಿಷಯದಡಿ ದಿನಚರಿ, ಸಮಯ ಪ್ರಜ್ಞೆ, ಜವಾಬ್ದಾರಿ ನಿರ್ವಹಣೆ, ನಾಯಕತ್ವದ ಗುಣ, ಸಹಕಾರ – ಸೌಹಾರ್ದ- ಸಹಬಾಳ್ವೆ, ಸಮಾಜಮುಖಿ ಚಿಂತನೆ, ಅತಿಥಿ ಸತ್ಕಾರ, ಸಂವಹನ ಕೌಶಲ, ಪ್ರತಿಭೆ, ಅಚ್ಚು ಕಟ್ಟುತನ, ದಿನಚರಿ ಬರೆಯುವುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಉಪ್ಪಿನಂಗಡಿ ಸ.ಪ.ಪೂ. ಕಾಲೇಜು ಸಿ.ಡಿ.ಸಿ ಸದಸ್ಯ ಜಾನ್ ಕೆನ್ಯೂಟ್ ಮಸ್ಕರೇನಸ್ ಶುಭ ಹಾರೈಸಿದರು. ವೆಂಕಪ್ಪ ಪೂಜಾರಿಯವರು ದೈಹಿಕವಾಗಿ ಮತ್ತು ಶೈಕ್ಷಣಿಕವಾಗಿ ರಾಷ್ಟ್ರೀಯ ಸೇವಾ ಯೋಜನೆಯ ಹಿನ್ನೆಲೆಯ ಕುರಿತು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೊಯಿಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಹೇಮಾ ಮೋಹನ್ ದಾಸ್ ಬಡಿಲ, ಉಪನ್ಯಾಸಕ ಚೇತನ್ ಆನೆಗುಂಡಿ, ರಾಷ್ಟ್ರೀಯ ಸೇವಾ ಯೋಜನಾ ಅಧ್ಯಕ್ಷ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕ ರಮೇಶ್. ಹೆಚ್.ಜೆ ಹಾಗೂ ಝಕರಿಯಾ ಬಡಿಲ ಉದ್ಯಮಿ, ಕೆಮ್ಮಾರ ಶಾಲಾಭಿವೃದ್ಧಿ ಸಮಿತಿ ಸದಸ್ಯ ಪದ್ಮನಾಭ ಶೆಟ್ಟಿ, ವಾಮನ ಬರಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಸ್ವಾಗತಿಸಿ, ಕು.ರಂಜಿತಾ ಮಂಜುನಾಥ್ ವಂದಿಸಿದರು. ವಿದ್ಯಾರ್ಥಿನಿಯರಾದ ರಂಜಿತಾ ಮಂಜುನಾಥ್ ಮತ್ತು ಬಳಗದವರು ಪ್ರಾರ್ಥಿಸಿದರು.ಕು. ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.