ಕ್ಯಾಡ್ ಸೆಂಟರ್ 13ನೇ ವರ್ಷಕ್ಕೆ ಪಾದಾರ್ಪಣೆ ಪಾದಾರ್ಪಣೆ ಪ್ರಯುಕ್ತ ಐ.ಟಿ ಕೋರ್ಸ್ ಆರಂಭ

0

ಪುತ್ತೂರು: ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆ ಬಳಿಯ ಡಾಯಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಕ್ಯಾಡ್ ಸೆಂಟರ್‌ಗೆ ಇದೀಗ 13 ವರ್ಷದ ಸಂಭ್ರಮ. ಈ ಸಂಭ್ರಮದ ಅಂಗವಾಗಿ ಸಂಸ್ಥೆಯು ಅ.15ರಂದು ಪುತ್ತೂರು ತಾಲೂಕಿನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳ ಅಗತ್ಯತೆಯನ್ನು ಪರಿಗಣಿಸಿ ಐ.ಟಿ ಕೋರ್ಸ್‌ಗಳನ್ನು ಲಾಂಚ್ ಮಾಡಲಾಯಿತು.
ಸಿವಿಲ್ ಇಂಜಿನಿಯರ್ ಹಾಗೂ ಪ್ರಾಧ್ಯಾಪಕ ಪ್ರೊ.ಶಿವರಾಂರವರು ಐಟಿ ಕೋರ್ಸ್‌ಗಳನ್ನು ಲಾಂಚ್ ಮಾಡುವ ಮೂಲಕ ಮಾತನಾಡಿ, ಜಗತ್ತು ಬಹು ವೇಗವಾಗಿ ಬೆಳೆಯುತ್ತಿದ್ದು ಇದರೊಂದಿಗೆ ಅನೇಕ ತಂತ್ರಜ್ಞಾನಗಳನ್ನು ಆವಿಷ್ಕರಿಸಿ ಮುನ್ನೆಡೆಯುತ್ತಿದೆ. ಮನುಷ್ಯ ಕೂಡ ಕಾಲ ಕಾಲಕ್ಕೆ ಆಪ್‌ಡೇಟ್ ಆಗಬೇಕಿದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯುವ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇಲ್ಲಿನ ಕ್ಯಾಡ್ ಸೆಂಟರ್ ಸಂಸ್ಥೆಯು ಕಲಿಕಾಸಕ್ತರಿಗೆ ಅಧ್ಯಯನಶೀಲ ಕೌಶಲ್ಯವನ್ನು ನೀಡುತ್ತಾ ಬಂದಿದ್ದು, ಇದೀಗ ಸಂಸ್ಥೆಯು ಹದಿಮೂರನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.
ಆರಂಭದಲ್ಲಿ ಪಾದಾರ್ಪಣೆಯ ಪ್ರಯುಕ್ತ ಕೇಕ್ ಕತ್ತರಿಸುವ ಮೂಲಕ ಸಂಸ್ಥೆಯ ಸಿಬ್ಬಂದಿಗಳು ವಿಜ್ರಂಭಣೆಯನ್ನು ಆಚರಿಸಿದರು. ಸಂಸ್ಥೆಯ ಮುಖ್ಯಸ್ಥ ಅಶ್ವಿನ್ ಸಿಕ್ವೇರಾ, ಸಂಸ್ಥೆಯ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಐಟಿ ಕೋರ್ಸ್‌ಗಳು..
ಸಂಸ್ಥೆಯಲ್ಲಿ ಈಗಾಗಲೇ ಸಿವಿಲ್, ಮೆಕಾನಿಕಲ್, ಆಟೋ ಕ್ಯಾಡ್, ರೆವಿಟ್, ಕ್ಯಾಶಿಯಾ, ತ್ರಿಡಿಎಸ್ ಮ್ಯಾಕ್ಸ್, ಸೋಲಿಡ್ ವರ್ಕ್ಸ್, ಸ್ಕೆಚ್‌ಅಪ್, ಪ್ರೈಮವೆರಾ,ANSYS, ಲ್ಯುಮಿಯೋನ್ ಕೋರ್ಸ್‌ಗಳು ಲಭ್ಯವಿದ್ದು, ಸಂಸ್ಥೆಯು ಇದೀಗ 13ನೇ ವರ್ಷಕ್ಕೆ ಪಾದಾರ್ಪಣೆಗೈಯುವ ಸಂದರ್ಭದಲ್ಲಿ C, C++, Java, Python, iOT, Ethical, Hacking, Web, Designಮುಂತಾದ ಐಟಿ ಕೋರ್ಸ್‌ಗಳನ್ನು ಆರಂಭಿಸಿದೆ. ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು 8970844844 ನಂಬರಿಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here