ಈಗಾಗಲೇ 500 ಕ್ಕೂ ಮಿಕ್ಕಿ ಫಲಾನುಭವಿಗಳು ಶಿಬಿರದಲ್ಲಿ ಭಾಗಿ
ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್, ಚರ್ಚ್‌ನ ಆರೋಗ್ಯ ಆಯೋಗ ಮತ್ತು ಕಂಪಾನಿಯಾ ನೆಮ್ಮದಿ ವೆಲ್‌ನೆಸ್ ಸೆಂಟರ್‌ನಿಂದ ಪುತ್ತೂರಿನಲ್ಲಿ ಪ್ರಥಮ ಬಾರಿಗೆ 17 ದಿನಗಳ ಉಚಿತ ಬೃಹತ್ ಫೂಟ್ ಪಲ್ಸ್ ಥೆರಪಿ ಶಿಬಿರವು ಮಾಯಿದೆ ದೇವುಸ್ ಮಿನಿ ಹಾಲ್‌ನಲ್ಲಿ ಅ.15 ರಿಂದ 31ರ ವರೆಗೆ ಜರಗುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರಕಿದೆ.
ಫೂಟ್ ಪಲ್ಸ್ ಥೆರಪಿ ಆರೋಗ್ಯದೆಡೆಗೆ ಒಂದು ಹೆಜ್ಜೆಯಾಗಿದ್ದು ಇದು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗಿದ್ದು ವೈದ್ಯಕೀಯವಾಗಿ ಪ್ರಾಮಾಣಿಕವಾಗಿದೆ. ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲಿನ ಸಮಸ್ಯೆಗಳನ್ನು ಔಷಧಿರಹಿತವಾಗಿ, ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ. 30 ನಿಮಿಷ TENS ಮತ್ತು EMS ಥೆರಪಿಯಿಂದ ನಮ್ಮ ದೇಹದಲ್ಲಿ 5ಕಿ.ಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಸಹಕಾರಿಯಾಗುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶದಾದ್ಯಂತ 350 ಶಾಖೆಗಳನ್ನು ಹೊಂದಿದ್ದು, 10 ಲಕ್ಷಕ್ಕಿಂತ ಹೆಚ್ಚಿನ ಜನರು ಪರಿಹಾರ ಕಂಡುಕೊಂಡಿದ್ದಾರೆ. ಪ್ರಸ್ತುತ ಶಿಬಿರವು ಆರಂಭಗೊಂಡು ಐದು ದಿನಗಳು ಕಳೆದಿದ್ದು ಈಗಾಗಲೇ ಸುಮಾರು 500 ಕ್ಕೂ ಮಿಕ್ಕಿ ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಫೂಟ್ ಪಲ್ಸ್ ಥೆರಪಿ ಆರೋಗ್ಯದೆಡೆಗೆ ಒಂದು ಹೆಜ್ಜೆಯಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ. ಬನ್ನಿ ಥೆರಪಿ ಶಿಬಿರಕ್ಕೆ ನಾವು ನೀವು ಸೇರಿ ಆರೋಗ್ಯವಂತರಾಗೋಣ. ಹೆಚ್ಚಿನ ಮಾಹಿತಿಗೆ 9164298414, 7760764165 ನಂಬರನ್ನು ಸಂಪರ್ಕಿಸಬಹುದು ಎಂದು ನೆಮ್ಮದಿ ವೆಲ್‌ನೆಸ್ ಸೆಂಟರಿನ ಕೆ.ಪ್ರಭಾಕರ ಸಾಲ್ಯಾನ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ..
*ಮಧುಮೇಹ *ಅಧಿಕ ರಕ್ತದೊತ್ತಡ *ಸಂಧಿವಾತ *ವೆರಿಕೋಸ್ ವೇನ್ *ಸ್ನಾಯು ಸೆಳೆತ *ಊತ *ಪಾರ್ಕಿನ್‌ಸನ್ *ಸಯಾಟಿಕಾ *ಸರ್ವಿಕಲ್ ಸ್ಪಾಂಡಿಲೈಟಿಸ್ *ನಿದ್ರಾಹೀನತೆ *ಥೈರಾಯಿಡ್ *ಪಾರ್ಶ್ವವಾಯು *ಬೆನ್ನುನೋವು *ಬೊಜ್ಜು ನಿವಾರಣೆ *ಬಿ.ಪಿ/ಶುಗರ್, ಕುತ್ತಿಗೆ ನೋವು, ಸೊರಿಯಾಸಿಸ್ *ಸಕ್ಕರೆ ಕಾಯಿಲೆಯಿಂದ ಬರುವ ಪಾದದ ಉರಿ *ಮಾಂಸಖಂಡಗಳ ಸೆಳೆತದಿಂದ ಮುಕ್ತಿ ಹಾಗೂ ಪರಿಚಲನೆ ಮತ್ತು ಇನ್ನಿತರ ಎಲ್ಲಾ ಕಾಯಿಲೆಗಳಿಗೆ ಪರಿಹಾರ