ಕುಂಬ್ರದ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ದಸರಾ ಧಮಾಕ

0

ಇನ್ನೆಲ್ಲೂ ಸಿಗದ ಕಡಿಮೆ ಬೆಲೆ * ಭಾರೀ ರಿಯಾಯಿತಿ * ಲಕ್ಕಿ ಕೂಪನ್ * ಖರೀದಿ ಮೇಲೆ ಖಚಿತ ಗಿಪ್ಟ್ * ಬಹುಮಾನಗಳ ಸುರಿಮಳೆ

ಪುತ್ತೂರು: ಹತ್ತೂರಲ್ಲೂ ಜನಮೆಚ್ಚುಗೆ ಗಳಿಸಿದ ಕುಂಬ್ರದ ಅಕ್ಷಯ ಆರ್ಕೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್‌ನ ಬೃಹತ್ ಶೋರೂಮ್ ಅತಿಥಿಯಲ್ಲಿ ದಸರಾ ಧಮಾಕ ಆರಂಭಗೊಂಡಿದೆ. ಎಲ್ಲಾ ಬಗೆಯ ಬ್ರ್ಯಾಂಡೆಡ್ ಕಂಪೆನಿಯ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್ ವಸ್ತುಗಳ ಮಾರಾಟ ಮತ್ತು ಸರ್ವೀಸ್‌ಗೆ ಗ್ರಾಹಕರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿರುವ ಗ್ರಾಮಾಂತರ ಪ್ರದೇಶದ ನಂ.1 ಶೋರೂಮ್ ಎಂದೇ ಪ್ರಸಿದ್ದಿ ಪಡೆದುಕೊಂಡಿರುವ ಅತಿಥಿಯಲ್ಲಿ ನವರಾತ್ರಿಯ ನವೋಲ್ಲಾಸ ಆರಂಭಗೊಂಡಿದೆ. ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿ ಇದ್ದು ಅತಿಥಿಯಿಂದ ಖರೀದಿಸುವ ಪ್ರತಿ ಖರೀದಿಗೂ ಗ್ರಾಹಕರಿಗೆ ಆಕರ್ಷಕ ಉಡುಗೊರೆಗಳ ಜೊತೆಯಲ್ಲಿ ವೋಡಿ ಕಾರ್‌ನಿಂದ ಹಿಡಿದು ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್‌ನಂತಹ ನೂರಾರು ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವಿದೆ.ಹಾಗಾದರೆ ತಡ ಯಾಕೆ ಇಂದೇ ಅತಿಥಿಗೆ ಭೇಟಿ ಕೊಡಿ ನಿಮ್ಮಿಷ್ಟದ ಅತಿಥಿಯೊಂದಿಗೆ ದಸರಾವನ್ನು ಸಂಭ್ರಮಿಸಿ…

ಮೊಬೈಲ್‌ಗಳ ಮೇಲೆ ರೂ.6 ಸಾವಿರದ ತನಕ ರಿಯಾಯಿತಿ
ಐಫೋನ್, ವಿವೋ, ಸ್ಯಾಮ್‌ಸಂಗ್,ಒಪ್ಪೋ,ನೊಕಿಯೋ ಸೇರಿದಂತೆ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಯ ಮೊಬೈಲ್ ಫೋನ್‌ಗಳು ಅತಿಥಿಯಲ್ಲಿ ಲಭ್ಯವಿದೆ. ಬೇರೆಲ್ಲೂ ಸಿಗದ ಬೆಲೆಯಲ್ಲಿ ಇಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು ಅಲ್ಲದೆ ರೂ.6 ಸಾವಿರದ ತನಕ ರಿಯಾಯಿತಿಯನ್ನು ಪಡೆಯಬಹುದಾಗಿದೆ. ದಿನ ನಿತ್ಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದ್ದು ಆಯಾ ದಿನದ ಮಾರ್ಕೆಟ್ ದರದಲ್ಲೇ ಇಲ್ಲಿ ಮೊಬೈಲ್ ಖರೀದಿಸಬಹುದಾಗಿದೆ.

ರೂ.2 ಸಾವಿರ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್
ಇದು ಅತಿಥಿಯ ಸ್ಪೇಷಾಲಿಟಿ. ಅತಿಥಿಗೆ ಬರುವ ಯಾವೊಬ್ಬ ಗ್ರಾಹಕ ಕೂಡ ಬರಿಗೈಯಲ್ಲಿ ಹೋಗಬಾರದು ಎಂಬ ನಿಟ್ಟಿನಲ್ಲಿ ಖರೀದಿಗೊಂದು ಖಚಿತ ಗಿಪ್ಟ್ ಇದೆ. ಇದಲ್ಲದೆ ರೂ.2 ಸಾವಿರಕ್ಕಿಂತ ಮೇಲ್ಪಟ್ಟು ಖರೀದಿ ಮಾಡಿದ ಗ್ರಾಹಕರಿಗೆ ಒಂದು ಲಕ್ಕಿ ಕೂಪನ್ ನೀಡಲಾಗುತ್ತದೆ. ಇದರಲ್ಲಿ ಟಿವಿ, ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿ, ವಾರ್ಡ್‌ರೂಬ್ ಬಹುಮಾನಗಳಿವೆ. ಇದರ ವಿಶೇಷತೆ ಎಂದರೆ ಇದರ ಡ್ರಾ ಕಾರ್ಯಕ್ರಮ ಅತಿಥಿ ಶೋರೂಮ್‌ನಲ್ಲೇ ನಡೆಯಲಿದೆ.

ಎಲ್‌ಜಿ, ವಿರ್ಪೂಲ್ ಬ್ರ್ಯಾಂಡ್ ಐಟಮ್ ಖರೀದಿಸಿ ಬಹುಮಾನಗಳನ್ನು ಗೆಲ್ಲಿರಿ
ಪ್ರತಿಷ್ಠಿತ ಎಲ್‌ಜಿ ಹಾಗೂ ವಿರ್ಪೂಲ್ ಕಂಪೆನಿಯವರು ತನ್ನೆಲ್ಲಾ ಗ್ರಾಹಕರಿಗೆ ದಸರಾದ ಸಂದರ್ಭದಲ್ಲಿ ಬಿಗ್ ಆಫರ್ ನೀಡಿದ್ದು ಎಲ್‌ಜಿಯ ಯಾವುದೇ ಐಟಮ್‌ಗಳನ್ನು ಖರೀದಿಸುವ ಮೂಲಕ ನಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ವೋಡಿ ಕಾರು ಬಂಪರ್ ಬಹುಮಾನ ಸೇರಿದಂತೆ ಟಿವಿ, ರೆಫ್ರಿಜರೇಟರ್, ವಾರ್ಷಿಂಗ್ ಮೆಷಿನ್ ಇತ್ಯಾದಿ ಬಹುಮಾನಗಳಿವೆ. ಎಲ್‌ಜಿಯವರು ಈ ದಸರಾಕ್ಕೆ ಎಲ್‌ಇಡಿ ಟಿವಿ ಖರೀದಿಸಿದರೆ 3 ವರ್ಷಗಳ ವಾರಂಟಿ ಬಿಗ್ ಬೆನಿಫಿಟ್ ಅನ್ನು ಗ್ರಾಹಕರಿಗೆ ನೀಡಿದ್ದಾರೆ. ಅದೇ ರೀತಿ ವಿರ್ಪೂಲ್ ಕಂಪೆನಿಯರು ಕೂಡ ತನ್ನೆಲ್ಲಾ ಗ್ರಾಹಕರಿಗೆ ಬಿಗ್ ಆಫರ್ ನೀಡಿದ್ದು ಕಂಪೆನಿಯ ಪ್ರತಿ ಖರೀದಿಗೆ ಟಿವಿ, ರೆಫ್ರಿಜರೇಟರ್, ಮಿಕ್ಸಿ, ಫ್ಯಾನ್, ಐರನ್ ಬಾಕ್ಸ್ ಗೆಲ್ಲುವ ಅವಕಾಶವಿದೆ.

ಗೃಹೋಪಯೋಗಿ ವಸ್ತುಗಳ ಖರೀದಿ ಮೇಲೆ ಶೇ.50 ರ ತನಕ ರಿಯಾಯಿತಿ
ಅತಿಥಿಯಿಂದ ಖರೀದಿಸುವ ಯಾವುದೇ ಇಲೆಕ್ಟ್ರಾನಿಕ್ಸ್ ಅಥವಾ ಫರ್ನಿಚರ್‌ಗಳ ಮೇಲೆ ಶೇ.50ರ ತನಕ ವಿಶೇಷ ರಿಯಾಯಿತಿಯನ್ನು ಪಡೆಯಬಹುದು. ಅತಿಥಿಯಿಂದ ನೀವು ಯಾವುದೇ ವಸ್ತುವನ್ನು ಖರೀದಿಸಿದರೂ ನಿಮಗೊಂದು ಆಕರ್ಷಕ ಉಡುಗೊರೆ ಖಚಿತ. ಇಂತಹ ಅವಕಾಶ ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ ಅದಕ್ಕಾಗಿಯೇ ಅತಿಥಿ ನಿಮ್ಮನ್ನು ಕೈ ಬೀಸಿ ಕರೆಯುತ್ತಿದೆ.

ಮಿಕ್ಸಿ, ಗ್ರೈಂಡರ್ ಎಕ್ಸ್‌ಚೇಂಜ್ ಆಫರ್
ನಿಮ್ಮ ಮನೆಯ ಹಳೆಯ ಮಿಕ್ಸಿ, ಗ್ರೈಂಡರ್ ಅನ್ನು ಹೊಸ ಮಿಕ್ಸಿ, ಗ್ರೈಂಡರ್ ಜೊತೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವಿದೆ. ಮಿಕ್ಸಿಗೆ ರೂ.1 ಸಾವಿರದ ತನಕ ಎಕ್ಸ್‌ಚೇಂಜ್ ಬೆಲೆ ಸಿಗಲಿದೆ. ಇದಲ್ಲದೆ ನಿಮ್ಮಲ್ಲಿರುವ ಹಳೆಯ ಗ್ರೈಂಡರ್ ಅನ್ನು ಹೊಸ ಗ್ರೈಂಡರ್‌ನೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.

ಸುಸಜ್ಜಿತ ಶೋರೂಮ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ
ಅತಿಥಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್ ಶೋರೂಮ್ ವಿಶಾಲವಾದ ಬೃಹತ್ ಶೋರೂಮ್ ಆಗಿದ್ದು ಗ್ರಾಹಕರಿಗೆ ತಮಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ಆರಾಮದಾಯಕವಾಗಿ ಖರೀದಿಸುವ ವ್ಯವಸ್ಥೆ ಇಲ್ಲಿದೆ. ಪೇಟೆಯ ಶೋರೂಮ್‌ಗಳಂತೆ ಎಲ್ಲಾ ವ್ಯವಸ್ಥೆಯನ್ನು ಹೊಂದಿರುವ ಅತಿಥಿಯು ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಹೊಂದಿದೆ.

ಸ್ಥಳದಲ್ಲೇ ಸಾಲ ಸೌಲಭ್ಯ
ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡಿಮೆ ದಾಖಲೆಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯ ವ್ಯವಸ್ಥೆ ಇದೆ. ಬಜಾಜ್ ಫೈನಾನ್ಸ್, ಟಿವಿಎಸ್ ಕ್ರೆಡಿಟ್, ಎಚ್‌ಡಿಬಿ ಇತ್ಯಾದಿ ಫೈನಾನ್ಸ್ ಸಂಸ್ಥೆಗಳ ಮೂಲಕ ಅತೀ ಕಡಿಮೆ ಬಡ್ಡಿ ದರದಲ್ಲಿ ಕೆಲವೇ ನಿಮಿಷಗಳಲ್ಲಿ ಸಾಲ ಸೌಲಭ್ಯ ಪಡೆಯುವ ಮೂಲಕ ತಮ್ಮಿಷ್ಟದ ಐಟಮ್‌ಗಳನ್ನು ಖರೀದಿಸಬಹುದಾಗಿದೆ.


ಫರ್ನಿಚರ‍್ಸ್ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ
ಮನೆ, ಕಛೇರಿಗಳಿಗೆ ಬೇಕಾದ ಎಲ್ಲಾ ರೀತಿಯ ಉತ್ತಮ ಗುಣಮಟ್ಟದ ಫರ್ನಿಚರ್‌ಗಳು ಅತಿಥಿಯಲ್ಲಿ ಲಭ್ಯವಿದೆ. ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಅತ್ಯುತ್ತಮ ಬ್ರ್ಯಾಂಡೆಡ್ ಫರ್ನಿಚರ್‌ಗಳು ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ. ದಸರಾ ವಿಶೇಷವಾಗಿ ಫರ್ನಿಚರ್ ಖರೀದಿಯ ಮೇಲೆ ಶೇ.೫೦ ರ ತನಕ ರಿಯಾಯಿತಿ ಪಡೆಯಬಹುದಾಗಿದೆ.

ಕೈಗೆಟಕುವ ಬೆಲೆ -ವಿಶ್ವಾಸನೀಯ ವ್ಯವಹಾರ
ಗ್ರಾಮೀಣ ಪ್ರದೇಶದ ಅತ್ಯಂತ ವಿಶ್ವಾಸನೀಯ ಶೋರೂಮ್ ಎಂದೇ ಗ್ರಾಹಕರಿಂದ ಕರೆಸಿಕೊಂಡಿರುವ ಅತಿಥಿಯಲ್ಲಿ ಗ್ರಾಹಕರಿಗೆ ಅನುಕೂಲಕರವಾದ ಬೆಲೆಯಲ್ಲಿ ಗೃಹೋಪಯೋಗಿ ವಸ್ತುಗಳ ಲಭ್ಯವಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ ಗ್ರಾಹಕರಿಗೆ ಯಾವುದೇ ರೀತಿಯ ಮೋಸವಾಗದ ರೀತಿಯಲ್ಲಿ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯೂ ಇದೆ.

ಭೇಟಿ ಕೊಡಿ
ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್,
ಅಕ್ಷಯ ಆರ್ಕೇಡ್ ಕುಂಬ್ರ, ಒಳಮೊಗ್ರು ಗ್ರಾಮ,

ಪುತ್ತೂರು ತಾ.ದ.ಕ ಮೊ.9590550111

LEAVE A REPLY

Please enter your comment!
Please enter your name here