ರಾಜ್ಯಮಟ್ಟದ ಈಜು ಸ್ಪರ್ಧೆ:ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿ ಅನ್ವಿತ್ ರೈ ರಾಷ್ಟ್ರಮಟ್ಟಕ್ಕೆ

0

ಪುತ್ತೂರು: ಕರ್ನಾಟಕ ಸರಕಾರ ಶಾಲಾ ಶಿಕ್ಷಣ, ಉಪನಿರ್ದೇಶಕರ ಕಛೇರಿ ಬೆಂಗಳೂರು ಇವರ ಆತಿಥ್ಯದಲ್ಲಿ ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ಅ.16 ಮತ್ತು 17ರಂದು ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿ ಹತ್ತನೇ ತರಗತಿಯ ಅನ್ವಿತ್ ರೈ 17ರ ವಯೋಮಾನದ ಬಾಲಕರ ವಿಭಾಗದಲ್ಲಿ 100 ಮೀಟರ್ ಬಟರ್ಫ್ಲೈ (butterfly ) ವಿಭಾಗದಲ್ಲಿ ಬೆಳ್ಳಿ ಪದಕ, 50 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ಕಂಚಿನ ಪದಕ ಪಡೆದು ಶಿಕ್ಷಣ ಇಲಾಖೆ ನಡೆಸುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.

ಪರ್ಲಡ್ಕ ಡಾl ಶಿವರಾಮ ಕಾರಂತ ಈಜುಕೊಳದ ತರಬೇತುದಾರರಾದ ಪಾರ್ಥ ವಾರಣಾಸಿ, ದೀಕ್ಷಿತ್ ರಾವ್, ರೋಹಿತ್ ಹಾಗೂ ನಿರೂಪ್ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ. ಪರ್ಪುಂಜ ನಿವಾಸಿ ಬಿ ಎನ್ ಅನಿಲ್ ಕುಮಾರ್ ಹಾಗೂ ದಿವ್ಯ ರೈ ಇವರ ಸುಪುತ್ರ.

LEAVE A REPLY

Please enter your comment!
Please enter your name here