ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಉಪನಿರ್ದೇಶಕರ ಕಛೇರಿ ಉಡುಪಿ, ಬ್ರಹ್ಮಾವರ ತಾಲೂಕು ಅಥ್ಲೆಟಿಕ್ ಆಸೋಸಿಯೇಷನ್ ಹಾಗೂ ಚೇತನ ಪ್ರೌಢಶಾಲೆ ಹಾoಗಾರಕಟ್ಟೆ ಇಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಸಂತ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳಾದ ಶ್ರೀಷ ಆರ್ ಎಸ್ ( ನೆಲ್ಲಿಕಟ್ಟೆ ನಿವಾಸಿ ರವಿಚಂದ್ರ ಎಸ್ ಹಾಗೂ ಶ್ವೇತಾ ಎಂ ಆರ್ ಇವರ ಸುಪುತ್ರಿ) ಮತ್ತು ಅಸ್ತಿಕ ( ಸಂಪ್ಯನಿವಾಸಿ ಶಾಂತರಾಮ ಮತ್ತು ಮೀನಾಕ್ಷಿಯ ಸುಪುತ್ರಿ ) ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳಾದ ಜೀವಿತ ( ಸಂಪ್ಯ ನಿವಾಸಿ ಸೀನಪ್ಪ ಗೌಡ ಮತ್ತು ಪುಷ್ಪಾವತಿಯ ಸುಪತ್ರಿ) ಜಸ್ಮಿ ( ಸಂಪ್ಯ ನಿವಾಸಿ ಶಿವರಾಮ ಬಿ ಮತ್ತು ಶಶಿಕಲಾ ಇವರ ಸುಪುತ್ರಿ)ಪುಣ್ಯಶ್ರೀ ( ಸಂಪ್ಯ ಬೈಲಾಡಿ ನಿವಾಸಿ ರವಿ ಮತ್ತು ಶೀಲಾವತಿ ಇವರ ಸುಪುತ್ರಿ) ಭಾಗವಹಿಸಿರುತ್ತಾರೆ.
ಇವರು ಸಂತ ಫಿಲೋಮಿನಾ ಕಾಲೇಜಿನ ದೈಹಿಕ ನಿರ್ದೇಶಕರಾದ ಎಲಿಯಾಸ್ ಪಿಂಟೋ ಹಾಗೂ ಸಂತ ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ನರೇಶ್ ಲೋಬೊ ಮತ್ತು ಐವಿ ಗ್ರೇಟ ಪೈಸ್ ಇವರಿಂದ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.