ಡಿ.ಜೆ ಯಿಲ್ಲದೆ ಸಾಂಪ್ರದಾಯಿಕ ಭಾರತೀಯ ಸಂಸ್ಕೃತಿಯ ಶೋಭಾಯಾತ್ರೆ
13 ಆಯ್ದ ಕಡೆಗಳಲ್ಲಿ ಸ್ತಬ್ದ ಚಿತ್ರಗಳ. ಕಲಾವಿದರ ಪ್ರದರ್ಶನ
15 ಕ್ಕೂ ಮಿಕ್ಕಿ ಸ್ತಬ್ದ ಚಿತ್ರಗಳು
80 ತಂಡಗಳ 1400 ಕುಣಿತ ಭಜಕರು
1200 ನಿತ್ಯ ಭಜಕರು
ಬೊಳುವಾರಿನಿಂದ ದರ್ಬೆಯ ತನಕ ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಜಗಮಗಿಸಿದ ಪೇಟೆ
ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಾಂಗಣ ಸುತ್ತಿನಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಅಂಗವಾಗಿ 89 ನೇ ವರ್ಷದ ಶಾರದೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.24ರಂದು ಶಾರದೋತ್ಸವದ ವೈಭವದ ಶೋಭಯಾತ್ರೆಗೆ ಬೊಳುವಾರಿನಲ್ಲಿ ಚಾಲನೆ ನೀಡಲಸಯಿತು.
ಪುತ್ತೂರು ಪೇಟೆಯಲ್ಲಿ ರಸ್ತೆಯುದ್ದಕ್ಕೂ ಅಳವಡಿಸಿದ ದೀಪಾಲಂಕಾರ ಶಾರದೋತ್ಸವ ಶೋಭಯಾತ್ರೆಗೆ ಮತ್ತಷ್ಟು ಮೆರುಗು ನೀಡಿತ್ತು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹೆಮನಾಥ ಶೆಟ್ಟಿ ಕಾವು, ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ಸಹಿತ ಹಲವಾರು ಮಂದಿ ಶೋಭಾಯಾತ್ರೆಗೆ ಚಾಲನೆ ನೀಡಿದರು..