ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಝಾರ್ ಶುಭಾರಂಭ

0

ಕಾರು, ಗೂಡ್ಸ್ ವಾಹನಗಳ ಖರೀದಿ, ಮಾರಾಟ ಹಾಗೂ ವಿನಿಮಯಕ್ಕೆ ಅವಕಾಶ

ಪುತ್ತೂರು: ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಝಾರ್ ಅ.30ರಂದು ಮಿತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ. ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುವಾ ನೆರವೇರಿಸಲಿದ್ದು ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್ ಹರೀಶ್ ಎಂ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ವಾಹನ ಮಾರಾಟ ಕೇಂದ್ರವನ್ನು ಉದ್ಘಾಟಿಸಲಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ರವರು ಕಚೇರಿ ಉದ್ಘಾಟಿಸಲಿದ್ದಾರೆ.ಸರ್ವೀಸ್ ಘಟಕವನ್ನು ತುಮಕೂರಿನ ಉದ್ಯಮಿ ಸುರೇಶ್ ಬಿ.ಎಸ್ ಉದ್ಘಾಟಿಸಲಿದ್ದಾರೆ.


ಸಯ್ಯದ್ ಇಬ್ರಾಹಿಂ ಹಂಝ ತಂಙಳ್ ಪಾಟ್ರಕೋಡಿ ಹಾಗೂ ಸಯ್ಯದ್ ಮಹಮ್ಮದ್ ಮಿಹ್ರಾಜ್ ಅಲ್ ಹಾದಿ ಅಲ್ ಅಶ್‌ಅರಿ ತಂಙಳ್‌ರವರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ವಿಟ್ಲ ಪೊಲೀಸ್ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಎಚ್.ಇ ನಾಗರಾಜ್, ಕೊಂಬೆಟ್ಟು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತಾ ಬಿ ಪೂಜಾರಿ, ಎಚ್.ಎಂ.ಎಸ್ ಗ್ರೂಪ್ ಬೆಂಗಳೂರು ಇದರ ಸುಬೋಧ್ ಬಿ ಶೆಟ್ಟಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಾಜೆ(ರಾಜ್‌ಕಮಲ್), ಮಿತ್ತೂರು ಶುಭೋದಯ ಫ್ಯೂಯಲ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್, ಕೆದಂಬಾಡಿ ಗ್ರಾ.ಪಂ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪತ್ರಕರ್ತ ಲತೀಫ್ ನೇರಳಕಟ್ಟೆ, ನ್ಯಾಯವಾದಿ ರಮಾನಾಥ ರೈ, ಯುವ ಉದ್ಯಮಿ ಬಾತಿಷ್ ಅಳಕೆಮಜಲು, ಸಂಸ್ಥೆಯ ಕಟ್ಟಡದ ಮಾಲಕ ಎ ವೆಂಕಪ್ಪ ನಾಯ್ಕ, ಮಿತ್ತೂರು ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಸಲೀಂ ಕೆ.ಎಸ್ ಭಾಗವಹಿಸಲಿದ್ದಾರೆ.

ಆರು ಮಂದಿಗೆ ಗೌರವಾರ್ಪಣೆ:
ಕಬಕ ಶ್ರೀ ಮಹಾದೇವಿ ಇಂಜಿನಿಯರಿಂಗ್ ಮತ್ತು ಮೋಟಾರ್ ವರ್ಕ್ಸ್ ಇದರ ಜಯರಾಮ ಕಬಕ, ವಿನಾಯಕ ಬೆಸ್ಟ್ ಮಾರುತಿ ಪಾಯಿಂಟ್ ಕಬಕ ಇದರ ದಿನೇಶ್ ಪಿ, ಪುತ್ತೂರು ಕಾರ್ ಡೆಕೋರ್‌ನ ತೌಫೀಕ್, ಸಾನ್ವಿ ಇಂಜಿನಿಯರಿಂಗ್ ವರ್ಕ್ಸ್ ಕಬಕ ಇದರ ಮನೋಹರ ಶೆಟ್ಟಿ, ಡೇಟಿಂಗ್ ಮತ್ತು ಪೈಂಟಿಂಗ್ ಇದರ ಬಕ್ಷ್ ಪರ್ಲಡ್ಕ ಮಚ್ಚಿಮಲೆ ಹಾಗೂ ಪೈಂಟರ್ ಹರೀಶ್ ನಾಯ್ಕ ಇವರಿಗೆ ಗೌರವರ್ಪಾಣೆ ಕಾರ್ಯಕ್ರಮ ನಡೆಯಲಿದೆ.ಭಾರತ್ ವೆಹಿಕಲ್ ಬಝಾರ್‌ನಲ್ಲಿ ಉಪಯೋಗಿಸಿದ ಕಾರುಗಳು ಹಾಗೂ ಗೂಡ್ಸ್ ವಾಹನಗಳ ಖರೀದಿ, ಮಾರಾಟ ಮತ್ತು ವಿನಿಮಯ, ವಾಹನಗಳ ಇನ್ಸೂರೆನ್ಸ್, ವೆಹಿಕಲ್ ಫೈನಾನ್ಸ್ ಹಾಗೂ ಕಾರು ವಾಶ್ ಲಭ್ಯವಿರಲಿದೆ ಎಂದು ಎಚ್.ಎಂ.ಎಸ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here