ಪುತ್ತೂರು: ಕಾಮಗಾರಿ ನಡೆಯುತ್ತಿರುವ ನೂತನ ಮನೆಯ ಸನ್ ಶೇಡ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಅರಿಯಡ್ಕ ಗ್ರಾಮದ ಪಾದೆಲಾಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ಚಂದ್ರಾವತಿ ಎಂಬವರ ನೂತನ ಮನೆಯ ಕಾಮಗಾರಿ ನಡೆಯುತ್ತಿದ್ದು, ಸನ್ ಶೇಡ್ ಕುಸಿದು ಬಿದ್ದ ಕಾರಣಕ್ಕೆ ಸಂಜೀವ ನೆಕ್ಕರೆ ಮತ್ತು ಶೇಖರ ಕುಲಾಲ್ ಕೌಡಿಚ್ಚಾರು ಎಂಬಿಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪ್ಯ ಗ್ರಾಮಾಂತರ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.