ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟ-ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆ ಉದನೆಗೆ ಹಲವು ಪ್ರಶಸ್ತಿ-ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಸರ್ವೋದಯ ಶಾಲೆ ಪೆರಿಯಡ್ಕದಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.

ಸೈಂಟ್ ಆಂಟನೀಸ್ ಪ್ರೌಢಶಾಲೆಯ ನವನೀತ್ ಬಿ 800 ಮೀಟರ್ ಪ್ರಥಮ, ಶೋಬಿತ್ 400 ಮೀಟರ್ ದ್ವಿತೀಯ, ಜ್ಯೋತಿ 400 ಮೀಟರ್ ದ್ವಿತೀಯ, ಹರ್ಷ ಜಾವಲಿನ್ ತೃತೀಯ ಮತ್ತು ಗುಂಡೆಸೆತ ತೃತೀಯ ಬಾಲಕಿಯರ ರಿಲೇ ತೃತೀಯ, ತಂಡದಲ್ಲಿ ದೀಕ್ಷಾ, ಶ್ರಾವ್ಯ, ನಿಶಾ ಮ್ಯಾಥ್ಯೂ, ಪಾತಿಮತ್ ಮಶ್ರೂಪ ಬಹುಮಾನವನ್ನು ಪಡೆದುಕೊಂಡರು. ದೈಹಿಕ ಶಿಕ್ಷಕ ರಾಜೇಶ್ ರೈ ಈ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು.

ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್‌ ಸ್ಕೂಲ್ ನ ಹನಿ ಉದ್ದ ಜಿಗಿತ ಪ್ರಥಮ, ತ್ರಿವಿಧ ಜಿಗಿತ ತೃತೀಯ, ವೈಶಾಲಿ 100 ಮೀಟರ್ ಓಟ ದ್ವಿತೀಯ, ಪ್ರಾಥಮಿಕ ವಿಭಾಗದಲ್ಲಿ ಅರ್ಚನಾ ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ತೃತೀಯ, ಆನ್ಸಿಲಾ ಎತ್ತರ ಜಿಗಿತ ತೃತೀಯ, ಮೆರ್ಲಿನ್ 100 ಮೀಟರ್ ಓಟ ತೃತೀಯ, 400 ಮೀಟರ್ ಓಟ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕ ಜಿಮ್ಸನ್ ವರ್ಗೀಸ್ ಈ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು. ಸಂಸ್ಥೆಯ ಸಂಚಾಲಕ ರೆ.ಫಾ ಹನಿ ಜೇಕಬ್ ಎಲ್ಲರನ್ನು ಅಭಿನಂದಿಸಿದರು‌‌.

LEAVE A REPLY

Please enter your comment!
Please enter your name here