ಉಪ್ಪಿನಂಗಡಿಗೆ ಗೋ ರಥಯಾತ್ರೆ

0

ಉಪ್ಪಿನಂಗಡಿ: ಭಾರತೀಯ ಗೋ ತಳಿಗಳ ಮಹತ್ವ ತಿಳಿದು, ಭಾರತೀಯ ಗೋ ತಳಿಗಳೊಂದಿಗೆ ಬದುಕು ಬೆಸೆದು ಕೊಂಡರೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗದು ಎಂದು ಭಾರತೀಯ ಗೋ ತಳಿಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ದಾಮೋದರ್ ತಿಳಿಸಿದರು.


ಬುಧವಾರದಂದು ಸಂಜೆ ಉಪ್ಪಿನಂಗಡಿಗೆ ಆಗಮಿಸಿದ ಗೋ ರಥಯಾತ್ರೆಯನ್ನು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಗೋವುಗಳಿಂದ ವ್ಯಕ್ತಿಯ ಬದುಕು ಸರ್ವ ವಿಧಗಳಲ್ಲಿ ಸಂರಕ್ಷಿಸಲ್ಪಡುತ್ತಿತ್ತು. ಹಣದ ಆಸೆಗೆ ಬಲಿ ಬಿದ್ದು, ಮಿಶ್ರ ತಳಿಯ ಗೋವುಗಳನ್ನು ಸಾಕುವತ್ತ ಗಮನ ಹರಿಸಿದ್ದರಿಂದ ಇಂದು ರೋಗ ರುಜಿನಗಳು ಹೆಚ್ಚಾಗಿದೆ ಎಂದರು.


ಗೋ ರಥ ಯಾತ್ರೆಯನ್ನು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಗೋ ಪೂಜೆ ನಡೆಸುವ ಮೂಲಕ ಸ್ವಾಗತಿಸಿದರು.
ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಜಯರಾಮ ನೆಲ್ಲಿತ್ತಾಯ , ಪ್ರಮುಖರಾದ ಹರಿರಾಮಚಂದ್ರ, ಶಾಂತಾ ಕುಂಟಿನಿ, ರಾಜೇಶ್ ಬಜತ್ತೂರು, ರವೀಂದ್ರ ಇಳಂತಿಲ, ಜಯಂತ ಪೊರೋಳಿ, ವಿದ್ಯಾಧರ ಜೈನ್, ಉಷಾ ಮುಳಿಯ, ಶ್ರೀಮತಿ ಶಶಿ ರಾಮನಗರ, ಸುನೀಲ್ ದಡ್ಡು, ಮಹೇಶ್ ಬಜತ್ತೂರು, ಕಿಶೋರ್ ನೀರಕಟ್ಟೆ, ಪ್ರಸಾದ್ ಪಚ್ಚಾಡಿ, ಪವನ್, ಪ್ರಸಾದ್ ಭಂಡಾರಿ, ಆದೇಶ್ ಶೆಟ್ಟಿ, ಗಣೇಶ್ ರಾಗ್, ರಾಜಶೇಖರ್ ಕರಾಯ, ಸುದರ್ಶನ್, ದಾಮೋದರ್, ಜಯರಾಮ ಇಳಂತಿಲ, ದಿವಾಕರ, ಗಿರೀಶ್ ಆಚಾರ್ಯ, ಆನಂದ ಕುಂಟಿನಿ, ಸತೀಶ್ ರೈ, ನಿತ್ಯಾನಂದ ಶೆಟ್ಟಿ ಸುನಿಲ್ ಅನಾವು, ರವಿ ಭಟ್ ಕುಂಟಿನಿ, ಪದ್ಮನಾಭ ಕುಲಾಲ್ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here