ಪುರುಷರಕಟ್ಟೆ:ಗ್ರಾಮೀಣ ಜನತೆಯ ಸೇವೆಗೆ ತೆರದುಕೊಂಡಿದೆ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್-ಅ.29ರಂದು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ಪ್ರತಿಷ್ಠಿತ ಕೆಮ್ಮಿಂಜೆ ತಂತ್ರಿ ಮನೆ ತನದ ದಿ.ಕೇಶವ ತಂತ್ರಿಗಳ ಮೊಮ್ಮಗ, ದಿ.ಸುಬ್ರಹ್ಮಣ್ಯ ತಂತ್ರಿಗಳ ಪುತ್ರ ಬೆಳ್ತಂಗಡಿ ಲಾಯಿಲ ಪ್ರಸನ್ನ ಆಯುರ್ವೇದ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೇಸರ್ ಆಗಿರುವ ಡಾ.ಸುಜಯ್ ಕೃಷ್ಣ ತಂತ್ರಿಗಳವರು ನರಿಮೊಗರು ಗ್ರಾಮದ ಪುರುಷರಕಟ್ಟೆಯ ಸಿದ್ದಣ್ಣ ಕಾಂಪ್ಲೆಕ್ಸ್ ಉದಯಭಾಗ್ಯ ಹೊಟೇಲ್ ಮಹಡಿಯಲ್ಲಿ ಪ್ರಾರಂಭಿಸಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಜನರಿಗೆ ಕ್ಲಿನಿಕ್, ಲ್ಯಾಬೋರೇಟರಿ ಹಾಗೂ ಫಿಸಿಯೋತೆರಫಿ ಮತ್ತು ವಿವಿಧ ನುರಿತ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಸಲಹೆಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ.


ಜನರಲ್ ಪಿಸಿಷಿಯನ್ ಹಾಗೂ ಆಯುರ್ವೇದ ತಜ್ಞ ವೈದ್ಯರಾಗಿರುವ ಡಾ.ಸುಜಯ್ ತಂತ್ರಿಯವರ ಕ್ಲಿನಿಕ್ ನಲ್ಲಿ ಕಂಪ್ಯೂಟರೀಕೃತ ರಕ್ತ ಪರೀಕ್ಷೆ, ಇಸಿಜಿ, ನೆಬ್ಯುಲೈಸರ್ ಗೆ ಪೂರಕವಾದ ಸುಸಜ್ಜಿತ ಲ್ಯಾಬೋರೇಟರಿ ಸೌಲಭ್ಯವಿದೆ. ಜೊತೆಗೆ ಅಲೋಪತಿ, ಹೋಮಿಯೋಪತಿ, ಆಯುರ್ವೇದ, ಕೌನ್ಸೆಲಿಂಗ್ ವಿಭಾಗಗಳಲ್ಲಿ ತಜ್ಞ ವೈದ್ಯರು ಕ್ಲಿನಿಕ್ ನಲ್ಲಿ ಸೇವೆ ಲಭ್ಯಲಿರಲಿದ್ದಾರೆ. ಫಿಸಿಯೋ ಥೆರಫಿ, ಕಪ್ಪಿಂಗ್ ಥೆರಫಿ, ಫಾರ್ಮುಸಿ, ಮರ್ಮ ಚಿಕಿತ್ಸೆ, ಕೈರೋ ಪ್ರಾಕ್ಟಿಕ್ ಥೆರಫಿ, ಡಯೆಟ್ ಥೆರಫಿ ಹಾಗೂ ರಕ್ತ ಪರೀಕ್ಷೆಗಳು ಮೊದಲಾದ ಸೇವೆಗಳು ಕ್ಲಿನಿಕ್ ನಲ್ಲಿ ಲಭ್ಯವಿದ್ದು ವಿವಿಧ ವಿಭಾಗಳ ನುರಿತ ತಜ್ಞ ವೈದ್ಯರುಗಳು ಕ್ಲಿನಿಕ್ ನಲ್ಲಿ ಸೇವೆ ಲಭ್ಯವಿದ್ದಾರೆ.


ಕ್ಲಿನಿಕ್‌ನಲ್ಲಿರುವ ಸೌಲಭ್ಯಗಳು….
ಸುಸಜ್ಜಿತ, ಆಧುನಿಕ ಕಂಪ್ಯೂಟರೀಕೃತ ರಕ್ತ ಪರೀಕ್ಷೆ, ಎಲ್ಲಾ ರೀತಿಯ ರಕ್ತ, ಮಲ, ಮೂತ್ರ ಮತ್ತು ಕಫಗಳ ಪರೀಕ್ಷೆ, ಪೈನ್ ಮ್ಯಾನೇಜ್‌ಮೆಂಟ್ ಯೂನಿಟ್(ನೋವು ನಿವಾರಣಾ ಘಟಕ), ಫಿಸಿಯೋಥೆರಫಿ ಮತ್ತು ರಿಹೇಬಿಲಿಟೇಷನ್, ಕಪ್ಪಿಂಗ್ ಥೆರಫಿ ಹಾಗೂ ಕೈರೋಪ್ರಕ್ಟೀಕ್ ಥೆರಫಿಗಳು ಮೊದಲಾದ ಸೇವೆಗಳು ಕ್ಲಿನಿಕ್‌ನಲ್ಲಿ ದೊರೆಯಲಿದೆ. ಕ್ಲಿನಿಕ್‌ನಲ್ಲಿ ಪ್ರತಿ ಆದಿತ್ಯವಾರ ಅಪರಾಹ್ನ ಗಂಟೆ 3.30ರಿಂದ ಮೂಲವ್ಯಾದಿ, ಫಿಷರ್, ಫಿಸ್ಟುಲ ಕಾಯಿಲೆಗಳಿಗೆ ನುರಿತ ತಜ್ಞವೈದ್ಯರಿಂದ ಪರೀಕ್ಷೆ ಅಗತ್ಯವಿದ್ದಲ್ಲಿ ಶಸ್ತ್ರಕ್ರಿಯೆಗಳನ್ನು ನಡೆಸಲಾಗುವುದು.


ಸೇವೆಗೆ ಲಭ್ಯರಿರುವ ವೈದ್ಯರುಗಳು
ಕ್ಲಿನಿಕ್‌ನಲ್ಲಿ ಚೀಪ್ ಕನ್ಸಲ್ಟೆಂಟ್ ಮತ್ತು ಫಿಸಿಷಿಯನ್ ಆಗಿರುವ ಡಾ.ಸುಜಯ್ ತಂತ್ರಿ ಕೆಮ್ಮಿಂಜೆಯವರು ಸೋಮವಾರದಿಂದ ಬುಧವಾರ ತನಕ ಬೆಳಿಗ್ಗೆ ಗಂಟೆ 8 ರಿಂದ 9 ಸಂಜೆ 5ರಿಂದ 7 ತನಕ ಹಾಗೂ ಗುರುವಾರದಿಂದ ಶನಿವಾರ ತನಕ ಸಂಜೆ ಗಂಟೆ 3.30ರಿಂದ 7 ತನಕ ಲಭ್ಯವಿದ್ದಾರೆ. ಮಕ್ಕಳ ತಜ್ಞ ಡಾ.ಸಂದೀಪ್ ಎಚ್.ಎಸ್‌ರವರು ಪ್ರತಿ ಆದಿತ್ಯವಾರ ಬೆಳಿಗ್ಗೆ ಗಂಟೆ 10.30ರಿಂದ 12.30ರ ತನಕ, ಹಿರಿಯ ತಜ್ಞ ವೈದ್ಯ ಡಾ.ಶ್ರೀಕುಮಾರ್ ಕತ್ರಿಬೈಲುರವರು ಪ್ರತಿ ಸೋಮವಾರ ಸಂಜೆ 5.30ರಿಂದ 6.30ರ ತನಕ, ಫಿಸಿಷಿಯನ್ ಮತ್ತು ಮಧುಮೇಹ ತಜ್ಞೆ ಡಾ.ಅನನ್ಯಲಕ್ಷ್ಮೀ ಸಂದೀಪ್‌ರವರು ಪ್ರತಿ ಆದಿತ್ಯವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ತನಕ, ಎಲುಬು ಮತ್ತು ಕೀಲು ತಜ್ಞ ಡಾ.ಸಚಿನ್ ಶಂಕರ್ ಹಾರಕರೆಯವರು ಪ್ರತಿ ಮಂಗಳವಾರ ಮಧ್ಯಾಹ್ನ 3.30ರಿಂದ 4.30ರ ತನಕ, ಕ್ಯಾನ್ಸರ್ ತಜ್ಞ ಡಾ. ಮಹೇಶ್ ಟಿಯವರು ಪ್ರತಿ ತಿಂಗಳ 4ನೇ ಮಂಗಳವಾರ ಬೆಳಿಗ್ಗೆ 11ರಿಂದ 12 ರ ತನಕ, ಮನೋರೋಗ ಮತ್ತು ಕೌನ್ಸಿಲಿಂಗ್ ತಜ್ಞೆ ಡಾ.ಅಕ್ಷತಾ ಸಿ.ಜೆಯವರು ಪ್ರತಿ ಶನಿವಾರ ಮಧ್ಯಾಹ್ನ 2.30ರಿಂದ 5.00ರ ತನಕ ಹಾಗೂ ಚಿರೋಪ್ರಾಕ್ಟಿಕ್ ಥೆರಫಿ ತಜ್ಞ ಡಾ.ವಿಖ್ಯಾತ್ ನಾರಾಯಣ್ ಪ್ರತಿ ಸೋಮವಾರ ಮತ್ತು ಬುಧವಾರ ಮಧ್ಯಾಹ್ನ 3.30ರಿಂದ ಸಂಜೆ 5ರ ತನಕ ಸೇವೆಗೆ ಲಭ್ಯವಿದ್ದಾರೆ.


ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ:
ನೂತನವಾಗಿ ಪ್ರಾರಂಭಗೊಂಡಿರುವ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಅ.29ರಂದು ನರಿಮೊಗ್ರು ಗ್ರಾ.ಪಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನರಿಮೊಗರು, ಓಂ ಫ್ರೆಂಡ್ಸ್ ಮುಕ್ವೆ, ಆಟೋರಿಕ್ಷಾ ಚಾಲಕ ಮ್ಹಾಲಕ ಸಂಘ ಮುಕ್ವೆ, ಬೆದ್ರಾಳ ನಂದಿಕೇಶ್ವರ ಭಜನಾ ಮಂಡಳಿ, ಪುರುಷರಕಟ್ಟೆ ಪೂರ್ಣಾನಂದ ಭಜನಾ ಮಂದಿರ, ಶಾಂತಿಗೋಡು ವಿಕ್ರಂ ಯುವಕ ಮಂಡಲ, ನರಿಮೊಗರು ಸೇರಾಜೆ ಶ್ರೀಶಾರದಾಂಬಾ ಭಜನಾ ಮಂಡಳಿ, ವನದುರ್ಗಾಂಬಿಕಾ ಭಜನ ಮಂಡಳಿ ದೇವಿನಗರ, ಸಾಂದೀಪನಿ ಗ್ರಾಮಿಣ ವಿದ್ಯಾಸಂಸ್ಥೆಗಳು ನರಿಮೊಗರು ಹಾಗೂ ಸರಸ್ವತಿ ವಿದ್ಯಾ ಸಂಸ್ಥೆ ಪುರುಷರಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ವೈದ್ಯಕೀಯ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ. ಡಾ.ಸುಜಯ್ ತಂತ್ರಿ ಕೆಮ್ಮಿಂಜೆ, ಡಾ. ಸಂದೀಪ್ ಎಚ್.ಎಸ್., ಡಾ.ಶ್ರೀಕುಮಾರ್ ಕತ್ರಿಬೈಲ್, ಡಾ.ಅನನ್ಯಲಕ್ಷ್ಮೀ ಸಂದೀಪ್, ಡಾ.ಸಚಿನ್ ಶಂಕರ್ ಹಾರಕರೆ, ಡಾ.ಅಕ್ಷತಾ ಸಿ.ಜೆ, ಡಾ.ಗ್ರೀಷ್ಮಾ ಕೆ.ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿಕೊಡಲಿದ್ದಾರೆ. ಮಧುಮೇಹ ತಪಾಸಣೆ, ರಕ್ತದ ಒತ್ತಡ, ಇಜಿಜಿ ಮೊದಲಾದ ಚಿಕಿತ್ಸೆ ಹಾಗೂ ತಪಾಸಣೆಗಳನ್ನು ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಚೀಪ್ ಕನ್ಸಲ್ಟೆಂಟ್ ಹಾಗೂ ಫಿಸಿಷಿಯನ್ ಡಾ.ಸುಜಯ್ ತಂತ್ರಿ ಕೆಮ್ಮಿಂಜೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here