ಪುತ್ತೂರು: ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಪುರುಷರಿಗಾಗಿ ‘ಪಾರ್ಥ’ ಹೆಸರಿನಲ್ಲಿ ವಿಶೇಷ ಕಲೆಕ್ಷನ್ ಗಳ ಪ್ರದರ್ಶನ ಮತ್ತು ಮಾರಾಟ ಶುಭಾರಂಭಗೊಂಡಿದೆ.ಪುರುಷರ ಆಭರಣಗಳ ಅತೀ ದೊಡ್ಡ ಹಾಗೂ ವಿಶೇಷ ಸಂಗ್ರಹ ‘ಪಾರ್ಥ’ವನ್ನು ಅ.25ರಂದು ನಾಯರ್ ಕನ್ ಸ್ಟ್ರಕ್ಷನ್ ಮಾಲಕರಾದ ಸೂರಜ್ ನಾಯರ್ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅತ್ಯುತ್ತಮ ಸೇವೆ ಮತ್ತು ವಿಫುಲವಾದ ಸಂಗ್ರಹವಿದೆ. ನಾನು ಇಲ್ಲಿನ ಸಂತೃಪ್ತ ಗ್ರಾಹಕನಾಗಿದ್ದು, ಈ ಪಾರ್ಥ ಸಂಗ್ರಹದಿಂದ ಸಂಸ್ಥೆಯ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರಲಿ’ ಎಂದು ಶುಭ ಹಾರೈಸಿದರು.
‘ಪಾರ್ಥ’ – ಪುರುಷರಿಗಾಗಿನ ಅಪೂರ್ವ ಸಂಗ್ರಹದಲ್ಲಿ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆಂಟಿಕ್ ಫಿಶ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಸೇರಿದಂತೆ ಇನ್ನಷ್ಟು ವಿನೂತನ ವಿನ್ಯಾಸದ ವಿಶಿಷ್ಟ ಚಿನ್ನಾಭರಣಗಳ ಸಂಗ್ರಹ ಇಲ್ಲಿ ಅನಾವರಣಗೊಂಡಿದೆ.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ, ಮ್ಯಾನೇಜರ್ ಶಂಕರ್ ಮೋಹನ್, ಸ್ಟೋರ್ ಮ್ಯಾನೇಜರ್ ಶೇಖರ್ ಗೌಡ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.