ಬಡಗನ್ನೂರು: ಸ ಹಿ ಉ ಪ್ರಾ.ಶಾಲೆ ಬಡಗನ್ನೂರು ಇದು ಶತಮಾನದ ಕಾಲಘಟದಲ್ಲಿ ಇರುವ ಈ ಶಾಲೆಗೆ ಪರಿಪೂರ್ಣ ಶಾಲಾ ಕಟ್ಟಡದ ಅನಿವಾರ್ಯತೆ ಇದೆ. ಸುಮಾರು 95 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ಕೊಠಡಿಗಳನ್ನು ಹೊಂದುವಷ್ಟು ದೊಡ್ಡದಾದ ಅಂದರೆ ಸಮಾರು 200 ರಿಂದ 250 ಜನರು ಸಭೆ ಸಮಾರಂಭಗಳಲ್ಲಿ ಸಾವಕಾಶವಾಗಿ ಕುಳಿತುಕೊಳ್ಳುವ ಕಟ್ಟಡದ ಅವಶ್ಯಕತೆ ಇದೆ.
ಈ ಮೊದಲು ಇದ್ದ ಕಟ್ಟಡದ ಗೋಡೆ ಬಿರುಕು ಬಿಟ್ಟು ಮೇಲ್ಛಾವಣಿ ಗೆದ್ದಲು ಹಿಡಿದು ಬೀಳುವ ಹಂತದಲ್ಲಿತ್ತು. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಧ್ಯಾಪಕರು ಮರದಡಿಯಲ್ಲಿ ಪಾಠ ಪ್ರವಚನ ಮಾಡುವ ಪರಿಸ್ಥಿತಿ. ಈ ಸಂದರ್ಭದಲ್ಲಿ ಕಟ್ಟಡ ನೆಲಸಮ ಮಾಡಲು ಇಲಾಖಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಮತ್ತು ಕಟ್ಟಡ ಅನಿವಾರ್ಯತೆ ಬಗ್ಗೆ ಕಳೆದ 2, 3 ವರ್ಷಗಳಿಂದ ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಪತ್ರವ್ಯವಹಾರ ನಡೆದರೂ ಯಾವುದೇ ಪ್ರಯೋಜನ ಸಿಗಲಿಲ್ಲ. ಮನವಿ ಸಲ್ಲಿಸಿದರೂ, ನೆಲಸಮ ಮಾಡಲು ಯಾವುದೇ ಕ್ರಮಕೈಗೊಳ್ಳಲಿಲ್ಲ. ಕೊನೆಗೂ ಕಳೆದ ಸಿದ್ದಾರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ 50 ವರ್ಷಕ್ಕೆ ಮೇಲ್ಪಟ್ಟ ಕಟ್ಟಡಗಳನ್ನು ನೆಲಸಮಗೊಳಿಸುವ ಬಗ್ಗೆ ಅದೇಶ ಹೊರಡಿಸಿತ್ತು.
ಆದರೆ ಫಲಪ್ರದವಾಗದ ಕೆಲಸಕ್ಕೆ ಮತ್ತೆ ಇಲಾಖೆ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿ ಆ ಬಳಿಕ 5 ವರ್ಷ ಕಳೆದು ಮತ್ತೆ ಈ ಬಾರಿ ಸಿದ್ದಾರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬರುವ ಒಂದು ವಾರದ ಮೊದಲು ಕಟ್ಟಡ ನೆಲಸಮ ಮಾಡುವ ಬಗ್ಗೆ ಇಲಾಖೆ ವತಿಯಿಂದ ಅದೇಶ ಬಂದು ನೆಲಸಮ ಮಾಡಲಾಯಿತು.ಆದರೆ 2,3 ತಿಂಗಳು ಕಳೆದರೂ ಕಟ್ಟಡ ನಿರ್ಮಾಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ.ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಡಗನ್ನೂರು ಶಾಲೆಗೆ ನೂತನ ಕಟ್ಟಡ ಆಗಬೇಕಿದೆ ಹಾಗೂ ಈ ಶಾಲೆಯು ಪ್ರಸ್ತುತ 1 ರಿಂದ 8 ರವರೆಗೆ ತರಗತಿ ಹೊಂದಿದೆ. ಮುಂದೆ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನ್ನಾಗಿ ಪರಿವರ್ತಿಸುವ ಧ್ವನಿ ಕೇಳಿ ಬರುತ್ತಿದೆ.
ಬಡಗನ್ನೂರು ಶಾಲಾ ಕೊಠಡಿ ಬೀಳುವ ಹಂತದಲ್ಲಿತ್ತು ಕಟ್ಟಡ ನೆಲಸಮಗೊಲಿಸಲು ಅದೇಶ ಹೊರಡಿಸಿ ನೆಲಸಮ ಮಾಡಲಾಗಿದೆ. ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದಿಲ್ಲ, ಬಂದ ತಕ್ಷಣ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ.
ಲೋಕೇಶ್ ಬಿ.ಆರ್
ಬಿಇಒ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು
ನಾವು ಕಲಿತ ಶಾಲೆ ಸ ಉ ಹಿ ಪ್ರಾ ಶಾಲೆ ಬಡಗನ್ನೂರು ಇನ್ನೇನು 2 ವರ್ಷಗಳಲ್ಲಿ ಶತಮಾನ ಸಂಭ್ರಮಾಚರಣೆ ಮಾಡಲಿದೆ. ಸರ್ಕಾರದ ಕಡೆಯಿಂದ ಯಾವುದೇ ಅನುದಾನ ಬಿಡುಗಡೆಗೊಂಡಿಲ್ಲ. ಬಡಗನ್ನೂರು ಶಾಲೆ ಗಡಿಭಾಗದಲ್ಲಿರುವುದರಿಂದ ಯಾವುದಾದರೂ ಒಂದು ಯೋಜನೆ ಮೂಲಕ ಅನುದಾನ ಹೊಂದಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.
ಮಹಮ್ಮದ್ ಬಡಗನ್ನೂರು
ಮಾಜಿ ಎಸ್ ಡಿಎಂಸಿ ಅಧ್ಯಕ್ಷರು