ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರ- ವೈಭವದ ಶೋಭಾಯಾತ್ರೆ

0

ಪುತ್ತೂರಿನಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣದ ಕೀರ್ತಿ ಪುತ್ತೂರಾಯರಿಗೆ ಸಲ್ಲಬೇಕು-ಯು.ಪೂವಪ್ಪ

ಪುತ್ತೂರು: ಪುತ್ತೂರು ದಸರಾ ನವ ದುರ್ಗಾರಾಧನಾ ಸಮಿತಿಯಿಂದ ಅ.15ರಿಂದ 12 ದಿನ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ 21ನೇ ವರ್ಷದ ಪುತ್ತೂರು ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆಯು ನೃತ್ಯ ಭಜನೆ, ಶ್ರೀಕೃಷ್ಣ ರಾಧೆಯರ ನೃತ್ಯದೊಂದಿಗೆ ಸಾಂಪ್ರದಾಯಿಕ ಮೆರುಗಿನೊಂದಿಗೆ ಅ.26ರಂದು ಪುತ್ತೂರು ಪೇಟೆಯಲ್ಲಿ ನಡೆಯಿತು.


ಸಂಜೆ ದರ್ಬೆಯಲ್ಲಿ ವೈಭವದ ಶೋಭಾಯಾತ್ರೆಗೆ ವಿಶ್ವಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಯು.ಪೂವಪ್ಪ ಅವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಪುತ್ತೂರಿನಲ್ಲಿ ಹೊಸತನವನ್ನು ಪರಿಚಯಿಸಿದ ಪ್ರೀತಂ ಪುತ್ತೂರಾಯ ಅವರು ಪುತ್ತೂರಿಗೆ ದಸರಾ ಹಬ್ಬದ ಮೆರುಗು ನೀಡಿದ್ದಾರೆ. ಅವರು ವಿದ್ಯಾರ್ಥಿ ಜೀವನದಲ್ಲಿ ಬಹಳ ಹೊಸತನ ಕಂಡವರು. ವಿವೇಕಾನಂದ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಅವರ ಪ್ರತಿಮೆ ನಿರ್ಮಾಣದ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಂದಿನ ದಿನ ಪುತ್ತೂರು ದಸರಾ ಮಹೋತ್ಸವ ಇನ್ನಷ್ಟು ಮೆರುಗು ಪಡೆಯಲಿ ಎಂದು ಹಾರೈಸಿದರು.


ವಿಜಯಸ್ರಾಮಾಟ್ ಸ್ಥಾಪಕ, ಪುತ್ತೂರು ಪಿಲಿಗೊಬ್ಬು ಸಮಿತಿ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ, ಪುತ್ತೂರು ಶಾರದೋತ್ಸವ ಶೋಭಾಯಾತ್ರೆಯ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತುರವರು ಶುಭ ಹಾರೈಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ನೃತ್ಯಭಜನಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ದಸರಾ ಮಹೋತ್ಸವದ ಗೌರವಾಧ್ಯಕ್ಷರಾದ ಡಾ. ಸುರೇಶ್ ಪುತ್ತೂರಾಯ, ನ್ಯಾಯವಾದಿ ಮಹೇಶ್ ಕಜೆ, ಗೌರವ ಸಲಹೆಗಾರರಾದ ರಾಜೇಶ್ ಬನ್ನೂರು, ಅರುಣ್ ಕುಮಾರ್ ಪುತ್ತಿಲ, ಯು.ಲೋಕೇಶ್ ಹೆಗ್ಡೆ, ಮಂಜಪ್ಪ ರೈ ಬಾರಿಕೆ, ರಾಧಾಕೃಷ್ಣ ಬೋರ್ಕರ್, ಸಮಿತಿ ಸಂಚಾಲಕ ಕೆ.ಪ್ರೀತಂ ಪುತ್ತೂರಾಯ, ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಕಾರ್ಯಾಧ್ಯಕ್ಷ ಉದಯ ಕುಮಾರ್ ರೈ, ಕಾರ್ಯದರ್ಶಿ ಉಮೇಶ್ ಎಸ್.ಕೆ, ಕೋಶಾಧಿಕಾರಿ ನರೇಂದ್ರ ನಾಯಕ್ ಮರಕ್ಕ, ನಗರಸಭಾ ಸದಸ್ಯ ಶೀನಪ್ಪ ನಾಯ್ಕ್, ಆರ್ಯಾಪು ಸಾಂಸ್ಕೃತಿಕ ಸಮಿತಿಯ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಸತೀಶ್ ಕುಲಾಲ್, ಪೂರ್ಣಿಮಾ ಪುತ್ತೂರಾಯ, ಜ್ಯೋತಿ ಕುಕ್ಕಾಡಿ, ಹರಿಣಿ ಪುತ್ತೂರಾಯ, ರಂಗನಾಥ್ ರಾವ್ ಸಹಿತ ಹಲವಾರು ಮಂದಿ ಶೋಭಯಾತ್ರೆಯ ಜೊತೆಗಿದ್ದರು. ಪುತ್ತೂರು ಶಾರದೋತ್ಸವದ ಸಮಿತಿಯ ಸಂಚಾಲಕ ಪಿ.ಜಿ.ಜಗನ್ನಿವಾಸ ರಾವ್, ಶ್ರೀಕೃಷ್ಣ, ಸಂತೋಷ್ ಶೆಟ್ಟಿ, ಮೋಹನ್ ಕಟ್ಟೆ, ಅನಂತ ಪ್ರಸಾದ್, ಲಕ್ಷ್ಮಣ ಪೂಜಾರಿ ಕಿರಣ್, ಜಯಂತ್, ಸುಽರ್, ರವರು ಶಾರದ ಮಾತೆಯ ವಿಗ್ರಹದ ಜಲಸ್ಥಂಬನದಲ್ಲಿ ಸಹಕರಿಸಿದರು. ಶೋಭಾಯಾತ್ರೆಯು ದರ್ಬೆಯಿಂದ ಬೊಳುವಾರು ತನಕ ಸಾಗಿ ಅಲ್ಲಿಂದ ಶಾರದಾ ಮಾತೆಯ ವಿಗ್ರಹವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿರುವ ಕೆರೆಯಲ್ಲಿ ಜಲಸ್ಥಂಭನಗೊಳಿಸಲಾಯಿತು.

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸಿದ ಪೇಟೆ
ಪುತ್ತೂರು ಶಾರದೋತ್ಸವದ ಅಂಗವಾಗಿ ಶಾರದೋತ್ಸವ ಶೋಭಾಯಾತ್ರೆಯ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ನೇತೃತ್ವದಲ್ಲಿ ಅಳವಡಿಸಲಾಗಿದ್ದ ಪುತ್ತೂರು ಪೇಟೆಯ ವಿದ್ಯುತ್ ದೀಪಾಲಂಕಾರವನ್ನು ಪುತ್ತೂರು ದಸರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅವರ ಮನವಿಯಂತೆ ಪುತ್ತೂರು ದಸರಾ ಶೋಭಾಯಾತ್ರೆಗೆ ಉಳಿಸಲಾಗಿದೆ. ಅದರಂತೆ ಶೋಭಾಯಾತ್ರೆಯ ಸಮಯ ಪುತ್ತೂರು ಪೇಟೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು.

ನೃತ್ಯ ಭಜನೆ, ಕೋಲಾಟ:
ಬಾಳಿಲ ಸಹಿತ ಹಲವು ಶಾಲೆಗಳ ವಿದ್ಯಾರ್ಥಿಗಳು ಶೋಭಾಯಾತ್ರೆಯ ಉದ್ದಕ್ಕೂ ನೃತ್ಯ ಭಜನೆ ಮಾಡಿದರು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ನಡೆದ ಶ್ರೀಕೃಷ್ಣ ಮಡಕೆ ಒಡೆಯುವ ಕೋಲಾಟ ನೃತ್ಯ ವಿಶೇಷ ಆಕರ್ಷಣೆಯಾಗಿತ್ತು. ಶರಣ್ಯ ಮತ್ತು ತಂಡದಿಂದ ಸುಮಾರು 13 ಕಡೆ ಕೋಲಾಟ ನೃತ್ಯದ ಮೂಲಕ ಮಡಕೆ ಒಡೆಯುವ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here