ಬಡಗನ್ನೂರು: ಮನೆಯ ಕೊಟ್ಟಿಗೆಯಲ್ಲಿದ್ದ ಅಡಿಕೆ ಕಳವು

0

ಪುತ್ತೂರು:ಮನೆಯ ಕೊಟ್ಟಿಗೆಯಲ್ಲಿ ಗೋಣಿಯಲ್ಲಿ ತುಂಬಿಸಿಟ್ಟಿದ್ದ ಸುಮಾರು 460 ಕೆ.ಜಿ ಸುಲಿದ ಅಡಿಕೆ ಕಳವಾಗಿರುವ ಘಟನೆ ಬಡಗನ್ನೂರು ಗ್ರಾಮದ ಕೊಯಿಲ ಎಂಬಲ್ಲಿ ಅ.26ರಂದು ಬೆಳಕಿಗೆ ಬಂದಿದೆ.


ಕೊಯಿಲ ನಿವಾಸಿ ನವೀನ್ ಕುಮಾರ್ ರೈ ಎಂಬವರ ಹಳೆಯ ಮನೆಯ ಸಮೀಪದ ಕೊಟ್ಟಿಗೆಯ ಅಟ್ಟದಲ್ಲಿ ಎನ್.ಆರ್.ಕೆ.ಎಂದು ಮಾರ್ಕ್ ಮಾಡಿದ ಗೋಣಿಗಳಲ್ಲಿ ತುಂಬಿಸಿಟ್ಟಿದ್ದ ಸುಮಾರು 460 ಕೆ.ಜಿ ಸುಲಿದ ಅಡಿಕೆ ಕಳವಾಗಿದೆ.ಕಳವಾದ ಅಡಿಕೆಯ ಅಂದಾಜು ಮೌಲ್ಯ ರೂ.1.2 ಲಕ್ಷ ಆಗಿದೆ ಎಂದು,ನವೀನ್ ಕುಮಾರ್ ರೈ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here