ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇದರ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯಲ್ಲಿ ನಡೆದ ಕಡಬ ವಲಯ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಸಮಗ್ರ ತೃತೀಯ ಬಹುಮಾನ ಪಡೆದುಕೊಂಡಿದೆ.
ವೈಯಕ್ತಿಕ ವಿಭಾಗದಲ್ಲಿ 9ನೇ ತರಗತಿಯ ಹರ್ಷಿತ್ ಕುಮಾರ್ ಮಿಮಿಕ್ರಿಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ ಜ್ಯೋತಿ ಹಿಂದಿ ಭಾಷಣ ಪ್ರಥಮ ಸ್ಥಾನ, 10ನೇ ತರಗತಿಯ ಅನುಶ್ರೀ ಉಡುಪ ಸಂಸ್ಕೃತ ಭಾಷಣ ಪ್ರಥಮ ಸ್ಥಾನ, 9ನೇ ತರಗತಿಯ ಜೀವಿತಾ ಗಝಲ್ ಪ್ರಥಮ ಸ್ಥಾನ, 8ನೇ ತರಗತಿಯ ನಮಮಿ ಕವನ ವಾಚನ ದ್ವಿತೀಯ ಸ್ಥಾನ ಹಾಗೂ ಸಮೂಹ ಜನಪದ ನೃತ್ಯದಲ್ಲಿ ಶಾಲಾ ತಂಡ ದ್ವಿತೀಯ ಬಹುಮಾನಪಡೆದುಕೊಂಡಿದೆ.
ಶಾಲಾ ಮುಖ್ಯಗುರು ಸತೀಶ್ ಭಟ್‌ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ತಂಡದ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಹಿರಿಯ ಶಿಕ್ಷಕ ವೆಂಕಟೇಶ್ ದಾಮ್ಲೆ ವಹಿಸಿ, ಶಿಕ್ಷಕಿಯರಾದ ಅನುಷಾ, ಸಂಧ್ಯಾ ಮತ್ತು ಶಿಕ್ಷಕ ವೃಂದದವರು ಸಹಕರಿಸಿದರು.